- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 231 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.27: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 231 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 219 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 6 ಮಂದಿ ಇತರ ರಾಜ್ಯಗಳಿಂದ, 6 ಮಂದಿ ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ಸ್ಥಳೀಯಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 21, ಮಧೂರು ಪಂಚಾಯತ್ 10, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಪೈವಳಿಕೆ ಪಂಚಾಯತ್ 3, ಕುಂಬಳೆ ಪಂಚಾಯತ್ 5, ಬದಿಯಡ್ಕ ಪಂಚಾಯತ್ 4, ಮಂಜೇಶ್ವರ ಪಂಚಾಯತ್ 5, ಎಣ್ಮಕಜೆ ಪಂಚಾಯತ್ 2, ಚೆಂಗಳ ಪಂಚಾಯತ್ 7, ಕಾರಡ್ಕ ಪಂಚಾಯತ್ 13, ಪುತ್ತಿಗೆ ಪಂಚಾಯತ್ 1, ಕಾಞಂಗಾಡ್ ನಗರಸಭೆ 12, ಅಜಾನೂರು ಪಂಚಾಯತ್ 34, ಬಳಾಲ್ ಪಂಚಾಯತ್ 4, ಪಳ್ಳಿಕ್ಕರೆ ಪಂಚಾಯತ್ 22, ಕಳ್ಳಾರ್ ಪಂಚಾಯತ್ 2, ಮಡಿಕೈ ಪಂಚಾಯತ್ 2, ಉದುಮಾ ಪಂಚಾಯತ್ 13, ನೀಲೇಶ್ವರ ನಗರಸಭೆ 8, ಕಯ್ಯೂರು-ಚೀಮೇನಿ ಪಂಚಾಯತ್ 3, ಪಡನ್ನ ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 2, ಪಿಲಿಕೋಡ್ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 11, ವಲಿಯಪರಂಬ ಪಂಚಾಯತ್ 25, ವೆಸ್ಟ್ ಏಳೇರಿ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 2 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 85 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು, ಆ.27: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 85 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತೆ ಸಂಸ್ಥೆಗಳ ಮಟ್ಟದ ಗಣನೆ
ಮುಳಿಯಾರು ಪಂಚಾಯತ್ 1, ಕುಂಬಳೆ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 2, ಚೆಂಗಳ ಪಂಚಾಯತ್ 1, ಮೀಂಜ ಪಂಚಾಯತ್ 3, ಕಾಞಂಗಾಡ್ ನಗರಸಭೆ 9, ಅಜಾನೂರು ಪಂಚಾಯತ್ 7, ಕಿನಾನೂರು-ಕರಿಂದಳಂ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 14, ಉದುಮಾಪಂಚಾಯತ್ 28, ಕಳ್ಳಾರ್ ಪಂಚಾಯತ್ 2, ಚೀಮೇನಿ ಪಂಚಾಯತ್ 2,ಪಿಲಿಕೋಡ್ ಪಂಚಾಯತ್ 3, ಮಡಿಕೈ ಪಂಚಾಯತ್ 3, ಪಡನ್ನ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 5 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 5532 ಮಂದಿ ನಿಗಾದಲ್ಲಿ
ಕಾಸರಗೋಡು, ಆ.27: ಕಾಸರಗೋಡು ಜಿಲ್ಲೆಯಲ್ಲಿ 5532 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 4497 ಮಂದಿ, ಸಾಂಸ್ಥಿಕವಾಗಿ 1035 ಮಂದಿ ನಿಗಾದಲ್ಲಿರುವರು. ನೂತನವಾಗಿ 488 ಮಂದಿ ನಿಗಾ ಪ್ರವೇಶಿಸಿದ್ದಾರೆ. 386 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 1504 ಮಂದಿ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 969 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೋವಿಡ್ ಪಾಸಿಟಿವ್ ಖಚಿತಗೊಂಡ ದಿನ ಗುರುವಾರ
ಕಾಸರಗೋಡು, ಆ.27: ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೋವಿಡ್ ಪಾಸಿಟಿವ್ ಖಚಿತಗೊಂಡ ದಿನ ಗುರುವಾರ(ಆ.27) ಆಗಿದೆ ಎಂದು ಜಿಲ್ಲಾ ವೈದ್ಯಾಧಿಕರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ 200ರ ಸಂಖ್ಯೆ ದಾಟಿದೆ. ಗುರುವಾರ 231 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದಕ್ಕೆ ಮುನ್ನ ಆ.19ರಂದು 174 ಮಂದಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಜು.22 ರಿಂದ ಈ ವರೆಗೆ 17 ಬಾರಿ ನೂರಕ್ಕಿಂತ ಅಧಿಕ ಪಾಸಿಟಿವ್ ಕೇಸುಗಳು ವರದಿಯಾಗಿವೆ ಎಂದವರು ಹೇಳಿದರು.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4525 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.27: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4525 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ಇವರಲ್ಲಿ 527 ಮಂದಿ ವಿದೇಶಗಳಿಂದ, 380 ಮಂದಿ ಇತರ ರಾಜ್ಯಗಳಿಂದ ಬಂದವರು. 3208 ಮಂದಿಗೆ ಕೋವಿಡ್ ರೋಗಮುಕ್ತಿಯಾಗಿದೆ. ಕೋವಿಡ್ ಸೋಂಕಿನಿಂದ ಮೃತರಾದವರ ಸಂಖ್ಯೆ ಜಿಲ್ಲೆಯಲ್ಲಿ 34 ಆಗಿದೆ.
....................................................................................................................
- Get link
- X
- Other Apps
Comments
Post a Comment