ಕೇಂದ್ರ ವಿವಿಯ ಸಾರ್ವಜನಿಕ ಪ್ರವೇಶಾತಿ ಪರೀಕ್ಷೆ ಸೆ.18,19.20ರಂದು

 ಕೇಂದ್ರ ವಿವಿಯ ಸಾರ್ವಜನಿಕ ಪ್ರವೇಶಾತಿ ಪರೀಕ್ಷೆ ಸೆ.18,19.20ರಂದು

 

ಕಾಸರಗೋಡು, .26: ಕೇಂದ್ರ ವಿವಿಯ ಪದವಿ, ಸ್ನಾತಕೋತ್ತರ ಪದವಿ, ಇಂಟಗ್ರೇಟೆಡ್, ಪಿ.ಹೆಚ್.ಡಿ. ತರಗತಿಗಳಿಗೆ ಪ್ರವೇಶಾತಿಗಾಗಿ ನಡೆಸುವ ಸಾರ್ವಜನಿಕ ಪರೀಕ್ಷೆ ಸೆ.18,19,20ರಂದು ನಡೆಯಲಿದೆ. ಕೇರಳ ಕೇಂದ್ರ ವಿವಿ ಸಹಿತ 14 ಕೇಂದ್ರ ವಿವಿಗಳಿಗೆ, 4 ರಾಜ್ಯ ವಿವಿಗಳಿಗೆ ಪ್ರವೇಶಾತಿ ಪರೀಕ್ಷೆಯ ಮೂಲಕ ನಡೆಯಲಿದೆ.

                            ಹಿಂದಿನ ಪರೀಕ್ಷೆಗಳಿಗಿಂತ ಭಿನ್ನವಾಗಿ ಬಾರಿಯ ಪರೀಕ್ಷೆಗಳು ನಡೆಯಲಿವೆ. 2 ಷೆಡ್ಯೂಲ್ ಗಳಲ್ಲಿ(ಬೆಳಗ್ಗೆ 10-ಮಧ್ಯಾಹ್ನ 12, ಮಧ್ಯಾಹ್ನ 2 ರಿಂದ ಸಂಜೆ 4) ರಂತೆ ಪರೀಕ್ಷೆಗಳಿರುವುವು. ರಾಜ್ಯದ 16 ಕೇಂದ್ರಗಳಲ್ಲೂ, ಕರ್ನಾಟಕದ ಮಂಗಳೂರು ಕೇಂದ್ರದಲ್ಲೂ ನಡೆಯುವ ಪರೀಕ್ಷೆಗಳ ಹೊಣೆ ಕೇಂಳ ಕೇಂದ್ರ ವಿವಿ ನೋಡೆಲ್ ಅಧಿಕಾರಿಗೆ ಇರುವುದು. ಭಾಗವಹಿಸುವ ವಿದ್ಯಾರ್ಥಿಗಳು ಪರೀಕ್ಷೆ ಸಭಾಂಗಣ, ಸುತ್ತಮುತ್ತ ಪ್ರದೇಶಗಳಲ್ಲಿ ಕೋವಿಡ್ 19 ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹೆಚ್ಚುವರಿ ಮಾಹಿತಿಗೆ ವೆಬ್ ಸೈಟ್:www.cucetexam.in,www.cukerala.ac.in,ದೂರವಾಣಿ ಸಂಖ್ಯೆ: ಕೇರಳ ಕೇಂದ್ರ ವಿವಿ-04672309467.

Comments