ಪರಿಶಿಷ್ಟ ಜಾತಿ ಜನಾಂಗದ ವಿದ್ಯಾರ್ಥಿಗಳಿಂದ HOSTEL ಕಲಿಕಾ ಕೊಠಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕಲಿಕಾ ಕೊಠಡಿಗೆ ಅರ್ಜಿ ಕೋರಿಕೆ

------------------------------
ಪರಿಶಿಷ್ಟ ಜಾತಿ ಜನಾಂಗದ ವಿದ್ಯಾರ್ಥಿಗಳಿಂದ ಕಲಿಕಾ ಕೊಠಡಿ
ಸೌಲಭ್ಯಕ್ಕಾಗಿ ಅರ್ಜಿ ಕೋರಲಾಗಿದೆ.
ಕಾಸರಗೋಡು ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ ವ್ಯಾಪ್ತಿಯ 6 ಗ್ರಾಮಪಂಚಾಯತ್ ಗಳಲ್ಲಿ ಮತ್ತು
ಕಾಸರಗೋಡು ನಗರಸಭೆಯ ಶಾಶ್ವತ ನಿವಾಸಿಗಳಾದ ಪರಿಶಿಷ್ಟ ಜಾತಿ ಜನಾಂಗದ 8 ರಿಂದ 12 ವರೆಗಿನ ತರಗತಿಗಳಲ್ಲಿ ಕಲಿಕೆ
ನಡೆಸುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸರಕಾರಿ, ಅನುದಾನಿತ, ವಿಶೇಷ, ತಾಂತ್ರಿಕ ಶಾಲಾ
ವಿದ್ಯಾರ್ಥಿಗಳಾಗಿರಬೇಕು. ಕೌಟುಂಬಿಕ ವಾರ್ಷಿಕ ಆದಾಯ ಒಂದು ಲಕ್ಷ ರೂ. ಮೀರಬಾರದು. ಮನೆಯ ಒಟ್ಟು ವಿಸ್ತೀರ್ಣ 800 ಚದರ
ಅಡಿಗಿಂತ ಕಡಿಮೆಯಿರಬೇಕು.
ಜಾತಿ, ಆದಾಯ, ಶಾಲಾ ಮುಖ್ಯಸ್ಥರ ಸರ್ಟಿಫಿಕೆಟ್, ಮನೆಯ ವಿಸ್ತೀರ್ಣ, ಮನೆಯ ಮಾಲೀಕತನ ಇತ್ಯಾದಿಗಳ
ದಾಖಲೆ ಸಹಿತ ಅರ್ಜಿಯನ್ನು ಜು.28ರ ಮುಂಚಿತವಾಗಿ ಕಾಸರಗೋಡು ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಸಲ್ಲಿಸಬೇಕು.
ಮಾಹಿತಿಗೆ ದೂರವಾಣಿ ಸಂಖ್ಯೆ: 8547630172.

Comments