- Get link
- X
- Other Apps
- Get link
- X
- Other Apps
ಜೈವಿಕ ಸಂಪತ್ತನ್ನು ನಮ್ಮ ಭವಿತವ್ಯದ ನಿಧಿಯಾಗಿ ಕಂಡುಕೊಳ್ಳುವ ಯತ್ನ ಬೇಕು
ಸ್ಥಳೀಯಾಡಳಿತ ಸಂಸ್ಥೆಗಳು ಸೂಕ್ತವಾಗಿ ದಾಖಲಿಸಬೇಕು ಜೀವ ವೈವಿಧ್ಯ ನೋಂದಣಿ
ಕಾಸರಗೋಡು, ಜು. 23 : ಜೈವಿಕ ಸಂಪತ್ತನ್ನು ನಮ್ಮ ಭವಿತವ್ಯದ ನಿಧಿಯಾಗಿ ಕಂಡುಕೊಳ್ಳುವ ಯತ್ನ ಬೇಕು. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜೀವ ವೈವಿಧ್ಯ ನೋಂದಣಿಯನ್ನು ( ಪೀಪಲ್ಸ್ ಬಯೋ ಡೈವರ್ಸಿಟಿ ರೆಜಿಸ್ಟರ್-ಪಿ.ಬಿ.ಆರ್) ಸೂಕ್ತವಾಗಿ ದಾಖಲಿಸಬೇಕು.
ಮಾನವ ಸಂಕುಲದ ಅಸ್ತಿತ್ವ ಪರಿಸರದ ಆರೋಗ್ಯ ಕರ ಮುಂದುವರಿಕೆಯೊಂದಿಗೆ ಜೋಡಿಕೊಂಡಿದೆ ಎಂಬ ಸತ್ಯಾಂಶವನ್ನು ಅರಿತುಕೊಂಡು ಈ ದಾಖಲಾತಿ ನಡೆಸುವುದು ಅನಿವಾರ್ಯವಾಗಿದೆ. ಜೀವ ವೈವಿಧ್ಯ ಕಾನೂನು 2002, ರಾಜ್ಯ ಜೀವ ವೈವಿಧ್ಯ ಸಂಹಿತೆಗಳು 2008 ಇತ್ಯಾದಿಗಳ ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳ ಆಶ್ರಯದಲ್ಲಿರುವ ಜೀವವೈವಿಧ್ಯ ನಿರ್ವಹಣೆ ಸಮಿತಿ(ಬಯೋ ಡೈವರ್ಸಿಟಿ ಮೆನೆಜ್ ಮೆಂಟ್ ಕಮಿಟಿ-ಬಿ.ಎಂ.ಸಿ.) ಈ ಹೊಣೆ ಹೊಂದಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಮೆಂಬರ್ ಸೆಕ್ರಟರಿಯಾಗಿದ್ದ, ಇಂದಿನ ಕಾಸರಗೋಡು ವಿಜಿಲೆನ್ಸ್ ದಳದ ಡಿ.ವೈ.ಎಸ್.ಪಿ. ಡಾ.ವಿ.ಬಾಲಕೃಷ್ಣನ್ ಅಭಿಪ್ರಾಯಪಡುತ್ತಾರೆ.
ರಾಜ್ಯದಲ್ಲಿ ಈಗಾಗಲೇ 1034 ಸ್ಥಳೀಯಾಡಳಿತ ಸಂಸ್ಥೆಗಳು ಪಿ.ಬಿ.ಆರ್. ಸಿದ್ಧಪಡಿಸಿವೆ. 94 ಗ್ರಾಮಪಂಚಾಯತ್ ಗಳು, 87 ನಗರಸಭೆಗಳು, 6 ಕಾರ್ಪರೇಷನ್ ಗಳು ಇವನ್ನು ಸಿದ್ಧಪಡಿಸಿವೆ. ವಯನಾಡ್ ಈ ನಿಟ್ಟಿನಲ್ಲಿ ಎಲ್ಲ ಬಿ.ಎಂ.ಸಿ.ಗಳಲ್ಲಿ, ಪಿ.ಬಿ.ಆರ್. ಪೂರ್ಣಗೊಳಿಸಿರುವ ಪ್ರಥಮ ಜಿಲ್ಲೆಯಾಗಿದೆ ಎಂದವರು ನುಡಿದರು.
ಪಿ.ಬಿ.ಆರ್. ಎಂಬ ಕಾನೂನು ರೀತ್ಯಾ ದಾಖಲೆ
ಸ್ಥಳೀಯ ಸಸ್ಯಗಳು, ಜೀವಿಗಳ ಸಹಿತ ಜೀವವೈವಿಧ್ಯಗಳ ಸಂಬಂಧ ತಿಳುವಳಿಕೆ, ಅವುಗಳ ಲಭ್ಯತೆ, ಔಷಧೀಯ ಅಂಶಗಳು, ಇನ್ನಿತರ ಪ್ರಯೋಜನಗಳು, ಸಂಬಂಧಪಟ್ಟ ಪರಂಪರಾಗತ ಮಾಹಿತಿಗಳು ಇತ್ಯಾದಿ ವಿಚಾರಗಳನ್ನು ಹೊಂದಿರುವ ದಸ್ತಾವೇಜೇ ಈ ಪಿ.ಬಿ.ರ್.. ನ್ಯಾಷನಲ್ ಬಯೋ ಡೈವರ್ಸಿಟಿ ಅಥಾರಿಟಿ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿ ಜಂಟಿಯಾಗಿ ಸಿದ್ಧಪಡಿಸಿರುವ ನಿಗದಿತ ಮಾದರಿಯಲ್ಲಿ ಬಿ.ಎಂ.ಸಿ.ಗಳನ್ನು ಸಿದ್ಧಪಡಿಸುತ್ತವೆ. ವಿದ್ಯಾರ್ಥಿಗಳು, ಸಂಶೋಧಕರು, ಸಂಬಂಧ ವಲಯಗಳಲ್ಲಿ ಪರಿಣತರು ಮೊದಲಾದವರ ಸಹಾಯದೊಂದಿಗೆ ಈ ದಾಖಲಾತಿ ಸಿದ್ಧಗೊಳ್ಳುತ್ತದೆ.
ಬಿ.ಎಂ.ಸಿ.ಗಳ ಚಟುವಟಿಕೆಗಳಿಗೆ ಅಗತ್ಯವಿರುವ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಸಹಾಯ ವಿಭಾಗ(ಟೆಕ್ನಿಕಲ್ ಸಪೋರ್ಟ್ ಗ್ರೂಪ್-ಟಿ.ಎಸ್.ಜಿ.)ರಚಿಸಲಾಗಿದೆ. ಬಿ.ಎಂ.ಸಿ. ಸಿದ್ಧಪಡಿಸಿದ ದಾಖಲೆಯನ್ನು ಮಂಡಳಿ ಮತ್ತು ಟಿ.ಎಸ್.ಜಿ. ಗಳ ಸಹಾಯದೊಂದಿಗೆ ಮೌಲ್ಯಮಾಪನ ನಡೆಸಲಾಗುವುದು. ಪಿ.ಬಿ.ಆರ್. ಎಂಬುದು ಕಾನೂನು ರೀತ್ಯಾ ಬರವಣಿಗೆಯಾಗಿರುವುದು. ಅದರಿಂದ ಕಾನೂನು ಪ್ರತಿಪಾದನೆ ನಡೆಯುತ್ತಿರುವಂತೆಯೇ ಜೀವವೈವಿಧ್ಯಗಳ ಬಳಕೆ, ಸಂರಕ್ಷಣೆ ಇತ್ಯಾದಿಗಳ ರೂಪುರೇಷೆ ಸಿದ್ಧತೆ ಸಾಧ್ಯವಾಗುತ್ತದೆ.
ತಾಂತ್ರಿಕ ಸಹಾಯ
ಜೀವ ವೈವಿಧಯ ಸಂರಕ್ಷಣೆ ಮತ್ತು ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ ನಡೆಸುವ ಚಟುವಟಿಕೆಗಳನ್ನು ಪಿ.ಬಿ.ಆರ್.ನಲ್ಲಿ ಅಳವಡಿಸುವುದಕ್ಕೆ ಟಿ.ಎಸ್.ಜಿ.ಗಳ ತಾಂತ್ರಿಕ ಸಹಾಯ ಲಭಿಸುತ್ತದೆ. ದಾಖಲಾತಿಗೊಂಡಿರುವ ಸಸ್ಯಗಳನ್ನು, ಜೀವಿಗಳನ್ನು, ಪರಂಪರಾಗತ ಮಾಹಿತಿಗಳನ್ನು ಅವುಗಳ ಸ್ಥಳೀಯ ನಾಮದೊಂದಿಗೆ ವಿಂಗಡಿಸಿ ಅಧಿಕೃತವಾಗಿ ವಿಭಜೀಕರಿಸಲು ಸಹಾಯ ಒದಗಿಸುತ್ತದೆ. ಪರಂಪರಾಗತ ಕೇಂದ್ರಗಳು, ಬನಗಳು, ಜಲಾಶಯಗಳು ಇತ್ಯಾದಿಗಳ ನಿರ್ವಹಣೆ, ಫೀಸ್ ಸಂಗ್ರಹ, ಸಾಧನೆ ಹಂಚಿಕೆ ಸಹಿತ ಚಟುವಟಿಕೆಗಳಿಗೆ ಬಿ.ಎಂ.ಸಿ.ಯ ಸಹಾಯ ಒದಗಲಿದೆ. ಅರಣ್ಯ, ಕೃಷಿ, ತೋಟ ಬೆಳೆ, ಪಶುಸಂಗೋಪನೆ, ಮೀನುಗಾರಿಕೆ ಸಹಿತ ಇಲಾಖೆಗಳು, ಶಿಕ್ಷಣ-ಸಂಶೋಧನೆ ಸಂಸ್ಥೆಗಳು, ಸ್ವಯಂ ಅಧಿಕಾರ ಹೊಂದಿರುವ ಜಿಲ್ಲಾ ಮಟ್ಟದ ಕೌನ್ಸಿಲ್ ಗಳು, ಸರಕಾರೇತರ ಸಂಘಟನೆಗಳು(ಎನ್.ಜಿ.ಒ.ಗಳು), ನಾಟಿ ವೈದ್ಯರು ಸಹಿತ ವಿವಿಧ ವಲಯಗಳ ಪ್ರತಿನಿಧಿಗಳನ್ನು ಒಳಗೊಂಡು ಜಿಲ್ಲಾ ಮಟ್ಟದ ಟಿ.ಎಸ್.ಜಿ.ಗಳು ಚಟುವಟಿಕೆ ನಡೆಸಲಿವೆ.
ದಾಖಲಿತ ಮಾಹಿತಿಗಳ ಸಂರಕ್ಷಣೆ
ಸ್ಥಳೀಯಡಳಿತ ಸಂಸ್ಥೆಗಳ ಬಿ.ಎಂ.ಸಿಗಳು ಜೀವ ವೈವಿಧ್ಯ ರೆಜಿಸ್ಟರ್ ಗಳ ಸಂರಕ್ಷಕರಾಗಿರುವರು. ಎಲ್ಲ ವಿಧದ ಮಾಹಿತಿಗಳನ್ನು ಬಾಹ್ಯ ವ್ಯಕ್ತಿ-ಸಂಸ್ಥೆ ಗಳಿಗೆ ಸಿಗದಂತೆ ಅವರು ಸಂರಕ್ಷಿಸಬೇಕು. ಈ ಸಂಬಂಧ ಕಾನೂನು, ಸಂಹಿತೆಗಳನ್ನು ಅವರು ಕಡ್ಡಾಯವಾಗಿ ಪಾಲಿಸಬೇಕು. ರಾಜ್ಯ ಸರಕಾರ ಯಾ ಸಂಬಂಧಪಟ್ಟವರು ಮಂಜೂರು ಮಾಡಿದರೆ ಮಾತ್ರ ಬಾಹ್ಯ ವ್ಯಕ್ತಿ-ಸಂಸ್ಥೆಗಳಿಗೆ ಮಾಹಿತಿ ನೀಡಬಹುದಾಗಿದೆ.
ಜೀವ ವೈವಿಧ್ಯಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು, ವ್ಯಾಪ್ತಿ ನಿರ್ಣಯ ಇತ್ಯಾದಿಗಳು ರಾಜ್ಯ ಜೀವ ವೈವಿಧ್ಯ ಮಂಡಳಿಯ ಮುಂಗಡ ಅನುಮತಿ ಪಡೆಯದೆ ವಹಿಸಿಕೊಳ್ಳಕೂಡದು. ಆದರೆ ಸ್ಥಳೀಯರು, ನಾಟಿ ವೈದ್ಯರು, ಹಕೀಂ ಗಳು ಮೊದಲಾದವರಿಗೆ ಈ ನಿಬಂಧನೆಗಳಲ್ಲಿ ರಿಯಾಯಿತಿ ಇದೆ. ಜೀವ ವೈವಿಧ್ಯಗಳ ಕುರಿತು ಮಾಹಿತಿ ಯಾರಿಗೆ ಒದಗಿಸಲಾಗಿದೆ ಮತ್ತು ಸಂಗ್ರಹ ಶುಲ್ಕ ಪಾವತಿಯ ಹೊಣೆ, ಸಾಧನೆಗಳು ಮತ್ತು ಅವನ್ನು ಹಂಚಿಕೊಳ್ಳುವ ಸಹಿತ ಮಾಹಿತಿಗಳ ಸಂಬಂಧ ರೆಜಿಸ್ಟರ್ ಒಂದನ್ನೂ ಬಿ.ಎಂ.ಸಿ. ಇರಿಸಿಕೊಳ್ಳಬೇಕಿದೆ.
- Get link
- X
- Other Apps
Comments
Post a Comment