ಪುಟ್ಟಣ್ಣ ಕಿರು ಚಿತ್ರ

*"ಪುಟ್ಟಣ್ಣ"*; ಪ್ರಯೋಗಾತ್ಮಕ ಮತ್ತು ಅಸಂಗತ ವಿಷಯವನ್ನು ಆದರಿಸಿ ನಿರ್ಮಿಸಲ್ಪಟ್ಟ ಚಿತ್ರ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ "ಕಂಡದ್ದು ಸತ್ಯ", ಎನ್ನುವ ತರ್ಕದ ಮೇಲೆ ನಿಂತಿರುವ ಕಿರು ಚಿತ್ರವು ಹೌದು. 

ಈ ಕಿರು ಚಲನಚಿತ್ರದ ನಿರ್ಮಾಣ ಹಾಗು ನಿರ್ದೇಶನವನ್ನು *ಶ್ರೀಕೃಷ್ಣ ಶರ್ಮಾ* ಅವರು ಮಾಡಿದ್ದಾರೆ; ಇವರು *"ಒಂದಲ್ಲ ಎರಡಲ್ಲ"*  ಹಾಗೂ *"ಬಡವ ರಾಸ್ಕಲ್"* ಚಲಚಿತ್ರಗಳ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 
ಇನ್ನು ಅಭಿನಯಕ್ಕೆ ಬರುವುದಾದರೆ; ತುಳು ಚಲಚಿತ್ರಗಳಾದ "ಎನ್ನಾ", "ರಂಬಾರೊಟ್ಟಿ" ಮತ್ತು ಕನ್ನಡ ಚಿತ್ರಗಳಾದ "ಒಂದು ಮೊಟ್ಟೆಯ ಕಥೆ" , "ಬೀರ್ ಬಲ್" ಮುಂತಾದ ಉತ್ತಮ ಚಲನಚಿತ್ರಗಳಲ್ಲಿ ಅತ್ಯತ್ತಮ ರೀತಿಯಲ್ಲಿ ಅಭಿನಯಿಸಿದ 
*ವಿ ಜೆ ವಿನೀತ್* ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವುದು ಈ ಕಿರುಚಿತ್ರದ ಮತ್ತೊಂದು ವಿಶೇಷ.
ಈ ಕಿರುಚಿತ್ರದ  ಆಡಿಯೋ ಹಕ್ಕನ್ನು ಕನ್ನಡದ ಪ್ರಖ್ಯಾತ ಆಡಿಯೋ ಕಂಪೆನಿ "ಆನಂದ್ ಆಡಿಯೋಸ್" ನವರು ಈಗಾಗಲೇ ಖರೀದಿಸಿದ್ದು,

 ಇದರ ರಿಮೇಕ್ ಹಕ್ಕನ್ನು ಕೊಳ್ಳಲು *ಮಲಯಾಳಂ* ನ ಕೆಲ ಚಿತ್ರ ನಿರ್ಮಾಪಕರು ಕಾತರರಾಗಿರುವುದು ಈ ಕಿರುಚಿತ್ರದ ಇನ್ನೊಂದು ವಿಶೇಷ. ಹಾಗೂ ಈ ಚಿತ್ರದ ಮುಂದುವರಿದ ಭಾಗವೂ *ಮಳೆಯಾಳಂ* ನಲ್ಲಿ ಬರುವ ಸಾಧ್ಯತೆ ಇದೆ.

ಇನ್ನು ಹಲವಾರು ತುಳು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ *ಕಿಶೋರ್ ಶೆಟ್ಟಿ* ಯವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಮತ್ತು ಎಡಿಟಿಂಗ್ ಕಾರ್ಯವನ್ನು ಅನ್ನು *ನವೀನ್ ಶೆಟ್ಟಿ* ಯವರು ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲದೆ " ವಿ.ಎಫ್.ಏಕ್ಸ್  " ನಲ್ಲಿ *ವಿಜೇತ್ ಕುಮಾರ್*  ಮತ್ತು ಸೌಂಡ್ ಎಫೆಕ್ಟ್ ಹಾಗು ಮಿಕ್ಸಿಂಗ್ ನಲ್ಲಿ *ಸುಹಿತ್ತ್ ಬಂಗೇರ* ಹಾಗು *ಡ್ಯಾನಿಯಲ್*  ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಪೋಸ್ಟರ್ ಡಿಸೈನಿಂಗ್ ಅನ್ನು *GOD* company ಅವರು ಮಾಡಿದ್ದಾರೆ.

ಇನ್ನು ಚಿತ್ರದ ಕಥೆ ಹಾಗು ಸಂಭಾಷಣೆಯನ್ನು; ರಂಗಾಯಣದಲ್ಲಿ ನಾಟಕ ಕಲೆ ವಿಷಯದಲ್ಲಿ ಪದವಿ ಪಡೆದಿರುವ ಹಾಗು ಪ್ರಸ್ತತ ಪ್ರಯೋಗಾತ್ಮಕ ಬರಹದಲ್ಲಿ ತೊಡಗಿಸಿಕೊಂಡಿರುವ *ಉದಯಪ್ರಸಾದ್.ಎನ್.ಜೆ*
 ಅವರು ಬರೆದಿದ್ದಾರೆ.
ಇನ್ನು ನಟನೆಯ ವಿಭಾಗದಲ್ಲಿ *ವಿ.ಜೆ ವಿನೀತ್* ಅವರೊಂದಿಗೆ "ಸಾ.ಹಿ.ಪ್ರಾ.ಕಾಸರಗೋಡು", "ಒಂದು ಮೊಟ್ಟೆಯ ಕಥೆ" ಮೊದಲಾದ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ " *ವಿಶ್ವನಾಥ್ ಅಸೈಗೊಳಿ*" ಅವರು ಸಹ ಈ ಕಿರುಚಿತ್ರದಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ *ಉದಯಪ್ರಸಾದ್, ಆತ್ಮಿಕ್ ಕೃಷ್ಣ, ಶಶಿಪ್ರಭ, ವಿವೇಕಾನಂದ* ಅವರುಗಳು ಸಹ ತಮ್ಮ ಪಾತ್ರವನ್ನು ಉತ್ತಮ ರೀತಿಯಿಂದ ನಿರ್ವಹಿಸಿದ್ದಾರೆ.
ಇನ್ನುಳಿದಂತೆ ಛಾಯಾಗ್ರಹಣ ವಿಭಾಗದಲ್ಲಿ *ಮನು ಹೊಳ್ಳ, ವರುಣ್ ಕೃಷ್ಣ, ಪವನ್ ಭಟ್ ಹಾಗು ಧೀರಜ್* ಇವರುಗಳು ಸಹ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ. 
ಒಟ್ಟಿನಲ್ಲಿ ಹೇಳುವುದಾದರೆ *"ಪುಟ್ಟಣ್ಣ*" ಈ ಒಂದು ಅದ್ಬುತ ತಂಡದಿಂದ ಮೂಡಿ ಬಂದ ಒಂದು ವಿಶಿಷ್ಟ ಚಿತ್ರ. ಈ ಕಿರುಚಿತ್ರ ನೋಡುಗರನ್ನು ರಂಜಿಸಲು ಶೀಘ್ರವಾಗಿ ಎಲ್ಲರ ಮುಂದೆ ಬರಲಿದೆ. ಈಗಾಗಲೇ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ *ವಾಸುಕಿ ವೈಭವ್* 'ರವರು ಬಿಡುಗಡೆಗೊಳಿಸಿದರು . ಇದೀಗ ಎರಡನೇ ಪೋಸ್ಟರ್ ಬಿಡುಗಡೆಯಾಗಿದೆ. *ಪುಟ್ಟಣ್ಣ* ಕಿರುಚಿತ್ರ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ.

Comments