- Get link
- X
- Other Apps
- Get link
- X
- Other Apps
ಕಸಾಯಿಖಾನೆ, ಮಾಂಸ ಮಾರಾಟ ಅಂಗಡಿಗಳಲ್ಲಿ ನಡೆಯಲಿದೆ ಮೃಗಸಂರಕ್ಷಣೆ ಇಲಾಖೆಯ ತಪಾಸಣೆ
ಕಾಸರಗೋಡು ಜಿಲ್ಲೆಯ ಎಲ್ಲ ಕಸಾಯಿಖಾನೆ, ಮಾಂಸ ಮಾರಾಟ ಅಂಗಡಿಗಳಲ್ಲಿ ಮೃಗಸಂರಕ್ಷಣೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಶುಚಿತ್ವ ಮತ್ತು ಗುಣಮಟ್ಟ ಪರಿಶೀಲನೆ, ಕೋವಿಡ್ ಪ್ರತಿರೋಧ ಕಟ್ಟುನಿಟ್ಟುಗಳ ಪಾಲನೆ ಖಚಿತಪಡಿಸುವಿಕೆ ಸಂಬಂಧ ಈ ತಪಾಸಣೆ ಜರುಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೃಗಸಂರಕ್ಷಣೆ ಇಲಾಖೆಯ ವಿಶೇಷ ದಳಕ್ಕೆ ಆದೇಶ ನೀಡಿದ್ದಾರೆ. 4 ತಾಲೂಕುಗಳಲ್ಲೂ ಬೆಳಗ್ಗೆ 5 ರಿಂದ ತಪಾಸಣೆ ಆರಂಭಗೊಳ್ಳಲಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
- Get link
- X
- Other Apps
Comments
Post a Comment