ಹರಿತ ಕಾಂತಿ" ಯೋಜನೆ ಆರಂಭ

ಹರಿತ ಕಾಂತಿ" ಯೋಜನೆ ಆರಂಭ 
                                                                      ಹೈಯರ್ ಸೆಕೆಂಡರಿ ನ್ಯಾಷನಲ್ ಸರ್ವೀಸ್ ಸ್ಕೀಂ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ "ಹರಿತಕಾಂತಿ" ಯೋಜನೆ ಆರಂಭಗೊಂಡಿದೆ. 
                            ಇದರ ಅಂಗವಾಗಿ ಕೋವಿಡ್ ಹಿನ್ನೆಲೆಯಲ್ಲಿ ಮನೆಗಳಲ್ಲಿ ಉಳಿದುಕೊಂಡಿರುವ ಎನ್.ಎಸ್.ಎಸ್. ಸ್ವಯಂಸೇವಕರು ತಲಾ 10 ತರಕಾರಿ ಸಸಿಗಳನ್ನು ತಮ್ಮ ಮನೆಗಳಲ್ಲಿ ನೆಟ್ಟು ಬೆಳೆಸುವರು. ಓಣಂ ಹಬ್ಬಕ್ಕೆ ಕೊಯ್ಲು ನಡೆಸುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿದೆ. ಮನೆಗಳಲ್ಲಿ ಸೌಕರ್ಯವಿರುವ ಜಾಗಗಳಲ್ಲಿ ಗ್ರೋ ಬ್ಯಾಗ್ ಗಳಲ್ಲಿ ಸಸಿ ಬೆಳೆಸಲಾಗುವುದು. ಆರಂಭದಿಂದ ಕೊಯ್ಲಿನ ವರೆಗಿನ ಸಸಿಗಳ ಫೊಟೋ ಕ್ಲಿಕ್ಕಿಸಿ ಪ್ರೋಗ್ರಾಂ ಆಫೀಸರ್, ಸ್ವಯಂಸೇವಕರು ಸೇರಿರುವ ವಾಟ್ಸ್ ಆಪ್ ಗ್ರೂಪ್ ಗೆ ಶೇರ್ ನಡೆಸುವರು. 
                             ಯೋಜನೆಯ ಉದ್ಘಾಟನೆಯನ್ನು ಎನ್.ಎಸ್.ಎಸ್. ಮಧ್ಯ ವಲಯ ಆರ್.ಪಿ.ಸಿ.ಪಿ.ಡಿ. ಸುತನ್ ಆನ್ ಲೈನ್ ಮೂಲಕ ನಡೆಸಿದರು. ಕೆ.ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. "ಕೋವಿಡ್ ಕಾಲ ಮತ್ತು ಮಾನಸಿಕ ಆರೋಗ್ಯ" ಎಂಬ ವಿಷಯದಲ್ಲಿ ನಡೆದ ವೆಬಿನಾರ್ ನಲ್ಲಿ ಡಾ.ಜಿ.ಕೆ.ಸೀಮಾ ತರಗತಿ ನಡೆಸಿದರು. ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ವಿ.ಹರಿದಾಸ್, ವಿ.ಎ.ಸಿ.ಗಳಾದ ಸಿ.ಪ್ರವೀಣ್ ಕುಮಾರ್, ಕೆ.ವಿ.ರತೀಶ್, ಎಂ.ರಾಜೀವನ್, ಎಂ.ಮಣಿಕಂಠನ್, ಷಾಹುಲ್ ಹಮೀದ್ ಉಪಸ್ಥಿತರಿದ್ದರು. 

Comments