ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಸೋಂಕು ಹೆಚ್ಚಳ ???

ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಸೋಂಕು ಹೆಚ್ಚಳ 
 ಹರಡುವಿಕೆಗೆ ವಿವಾಹ, ಮರಣೋತ್ತರ ಕಾರ್ಯಕ್ರಮ ಇತ್ಯಾದಿಗಳು ಪ್ರಧಾನ ಕಾರಣವಾಗುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು: ಜಿಲ್ಲಾ ವೈದ್ಯಾಧಿಕಾರಿ  
                                                               ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಂಪರ್ಕ ಮೂಲಕ ಅಧಿಕವಾಗಿ ಹರಡುತ್ತಿರುವುದಕ್ಕೆ ವಿವಾಹ, ಮರಣೋತ್ತರ ಕಾರ್ಯಕ್ರಮ ಇತ್ಯಾದಿಗಳು ಪ್ರಧಾನ ಕಾರಣವಾಗುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
                              ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿಕೊಂಡು ಇಂಥಾ ಕಾರ್ಯಕ್ರಮಗಳನ್ನು ನಡೆಸಬೇಕು. ಕಟ್ಟುನಿಟ್ಟುಗಳನ್ನು ಪಾಲಿಸದೇ ಇದ್ದ ಪರಿಣಾಮ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜಿಲ್ಲೆಯ ವಿವಿಧೆಡೆ ಕ್ಲಸ್ಟರ್ ಗಳು ರಚನೆಗೊಂಡಿವೆ. ಚೆಂಗಳ ಪಂಚಾಯತ್ ನಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ 46 ಮಂದಿಗೂ, ಮರಣೋತ್ತರ ಸಮಾರಂಭದಲ್ಲಿ ಭಾಗವಹಿಸಿದ್ದ 49 ಮಂದಿಗೂ, ಚೆಮ್ನಾಡ್ ಪಂಚಾಯತ್ ನಲಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ 
P-7
ಭಾಗವಹಿಸಿದ್ದ 21 ಮಂದಿಗೂ, ತ್ರಿಕರಿಪುರದಲ್ಲಿ ನಡೆದಿದ್ದ ವಿವಾಹ ಸಮರಂಭದಲ್ಲಿ ಭಾಗಹಿಸಿದ್ದ ಸುಮಾರು 10 ಮಂದಿಗೂ ಸೋಂಕು ಖಚಿತವಾಗಿದೆ. ಇಂಥಾ ಕಾರಣಗಳಿಂದ ಜಿಲ್ಲೆಯಲ್ಲಿ ಇನ್ನಷ್ಟು ಕ್ಲಸ್ಟರ್ ಗಳು ರಚನೆಗೊಳ್ಳುವ ಸಾಧ್ಯತೆಗಳಿವೆ ಎಂದರು. 
                             ಅತಿವೇಗದಲ್ಲಿ ಹರಡುತ್ತಿರುವ ಸೋಂಕಿನಪರಿಣಾ ಮರಣ ಸಂಖ್ಯೆಯನ್ನೂ ಅಧಿಕಗೊಳಿಸುವ ಭೀತಿಯಿದೆ ಎಂದು ಕಳಕಳಿ ವ್ಯಕ್ತಪಡಿಸಿದ ಅವರು 2 ವಾರಗಳ ಅವಧಿಯಲ್ಲಿ 5 ಮಂದಿ ಕೋವಿಡ್ ರೋಗಬಾಧೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 
                              ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಜನಸಂದಣಿ ಸೇರದಂತೆ ನೋಡಿಕೊಳ್ಳದೇ ಇದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು. ಆರೋಗ್ಯ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಿ ಇಂಥಾ ಸಮಾರಂಭಗಳನ್ನು ನಡೆಸಬೇಕು ಮತ್ತು ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ಸಾರ್ವನಿಕರ ಸಹಕಾರ ಅನಿವಾರ್ಯ ಎಂದವರು ನುಡಿದರು. 

Comments