ಫಾರ್ಮಿಸಿಸ್ಟ್ ನೇಮಕಾತಿ

ಫಾರ್ಮಿಸಿಸ್ಟ್ ನೇಮಕಾತಿ 
ಕಾಸರಗೋಡು, ಜು. 24 : ಪಳ್ಳಿಕ್ಕರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ದಿನವೇತನ ಕರಾರಿನಲ್ಲಿ ಫಾರ್ಮಸಿಸ್ಟ್ ನೇಮಕಾತಿ ನಡೆಯಲಿದೆ. ಪ್ಲಸ್ ಟು-ಡಿ.ಫಾರ್ಮ (ಸರಕಾರಿ ಅಂಗೀಕೃತ) ಇದಕ್ಕಿರುವ ಅರ್ಹತೆಯಾಗಿದೆ. ಅರ್ಹರು ಅಸಲಿ ಅರ್ಹತಾಪತ್ರ, ನಕಲುಗಳ ಸಹಿತ ಜು.29ರಂದು ಬೆಳಗ್ಗೆ 10.30ಕ್ಕೆ ಪಳ್ಳಿಕ್ಕರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ(ಮೆಡಿಕಲ್ ಆಫೀಸರ್) ಅವರ ಮುಂದೆ ಹಾಜರಾಗಬೇಕು. ಪಳ್ಳಿಕ್ಕರೆ ಗ್ರಾಮಪಂಚಾಯತ್ ನಿವಾಸಿಗಳಿಗೆ ಮತ್ತು ಸರಕಾರಿ ಸಂಸ್ಥೆಗಳಲ್ಲಿ ವೃತ್ತಿ ಅನುಭವ ಹೊಂದಿರುವವರಿಗೆ ಆದ್ಯತೆಯಿದೆ. ದೂರವಾಣಿ ಸಂಖ್ಯೆ: 0467-2275500. 

Comments