ಜಲಾಶಯಗಳಲ್ಲಿ ಮೀನಿನ ಮರಿಗಳ ಹೂಡಿಕೆ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ


ಜಲಾಶಯಗಳಲ್ಲಿ ಮೀನಿನ ಮರಿಗಳ ಹೂಡಿಕೆ : ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ


                                                ಜಲಾಶಯಗಳಲ್ಲಿ ಮೀನಿನ ಮರಿಗಳ ಹೂಡಿಕೆ ಕಾರ್ಯಕ್ರಮದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಜರುಗಿತು.

                     ಸಾರ್ವಜನಿಕ ಜಲಾಶಯಗಳಲ್ಲಿ ಮೀನುಗಳ ವೃದ್ಧಿ ನಡೆಸುವ ಉದ್ದೇಶದೊಂದಿಗೆ ರಾಜ್ಯ ಸರಕಾರದ "ಸುಭಿಕ್ಷ ಕೇರಳಂ" ಯೋಜನೆ ಅಂಗವಾಗಿ ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಪುಲಿಯನ್ನೂರು ನದಿಯಲ್ಲಿ ಕಾರ್ಯಕ್ರಮ ನಡೆಯಿತು.

                      ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ಅಧ್ಯಕ್ಷೆ ಕೆ.ಶಕುಂತಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ.ವಿ.ಸತೀಶನ್, ವಾರ್ಡ್ ಸದಸ್ಯ ಕೆ.ಭಾಸ್ಕರನ್, ಯೋಜನೆ ಸಂಚಾಲಕರಾದ ಆದಿರಾ .ಪಿ., ಸುಷ್ಮಾ, ಶ್ವೇತಾ ದಾಮೋದರನ್, ಅಕ್ವಾ ಕಲ್ಚರ್ ಪ್ರಮೋಟರ್ ಎನ್.ಎಂ.ವಿಜಯನ್ ಉಪಸ್ಥಿತರಿದ್ದರು.

                           ಕೋವಿಡ್ ಪ್ರತಿರೋಧ ಸಂಹಿತೆಯನ್ನು ಪಾಲಿಸಿಕೊಂಡು ಕಾರ್ಯಕ್ರಮ ಜರುಗಿತು.



ಪಾಣಾರ್ ಕುಳಂ ಜಲಾಶಯದಲ್ಲಿ ಮೀನಿನ ಮರಿಗಳ ಹೂಡಿಕೆ

                                                     ಚೆಂಗಳ ಗ್ರಾಮ ಪಂಚಾಯತ್ ಡಿ.ಟಿ.ಪಿ.ಸಿ. ಪ್ರವಾಸೋದ್ಯಮ ಕೇಂದ್ರವಾಗಿರುವ ಪಾಣಾರ್ ಕುಳಂ ಜಲಾಶಯದಲ್ಲಿ ಮೀನು ಮರಿಗಳ ಹೂಡಿಕೆ ಕಾರ್ಯಕ್ರಮ ನಡೆಯಿತು.

                  ರಾಜ್ಯ ಸರಕಾರದ "ಸುಭಿಕ್ಷ ಕೇರಳಂ" ಯೋಜನೆಯ ಅಂಗವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ಸಾರ್ವಜನಿಕ ಜಲಾಶಯಗಳಲ್ಲಿ ಮೀನುಗಳ ಸಂತಾನ ಅಭಿವೃದ್ಧಿ ನಡೆಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಸರಣಿಯ ಅಂಗವಾಗಿ ಕಾರ್ಯಕ್ರಮ ಜರುಗಿತು.

ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ವಾರ್ಡ್ ಸದಸ್ಯ ಮಹಮೂದ್ ತೈವಳಪ್, ಸ್ಥಾಯೀ ಸಮಿತಿ ಅಧ್ಯಕ್ಷ .ಅಹಮ್ಮದ್ ಹಾಜಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ.ವಿ.ಸತೀಶನ್, ಯೋಜನೆ ಸಂಚಾಲಕಿ .ಪಿ.ಆದಿರಾ ಉಪಸ್ಥಿತರಿದ್ದರು.


Comments