- Get link
- X
- Other Apps
- Get link
- X
- Other Apps
ಕಂಟೈಂಟ್ ಝೂನ್ ಆಗಿರುವ
ನಾಟೆಕಲ್ ನಗರ ಪ್ರದೇಶಗಳಲ್ಲಿ, ಇಂದು
ಸೇವಾಭಾರತಿ ಕಾರ್ಯಕರ್ತರು ಅಣುಮುಕ್ತ
ಗೊಳಿಸಿದರು
ಮುಳ್ಳೇರಿಯ : ಸೇವಾ ಭಾರತೀ ಮುಳ್ಳೇರಿಯ ಹಾಗೂ ಬೆಳ್ಳೂರು ಘಟಕ, ಆರೋಗ್ಯ ಇಲಾಖೆ ಮತ್ತು ಬೆಳ್ಳೂರು ಗ್ರಾಮ ಪಂಚಾಯತು ಇವುಗಳ ಜಂಟಿ ಆಶ್ರಯದಲ್ಲಿ ಆದಿತ್ಯವಾರದಂದು ನಾಟೆಕಲ್ಲು ಪೇಟೆಯಲ್ಲಿ ರೋಗಾಣು ನಾಶಿಕ ಮದ್ದು ಸೋಡಿಯಂ ಹೈಪೋಕ್ಲೋರೈಟ್‌ನ್ನು ಸೇವಾ ಭಾರತಿಯ ಕಾರ್ಯಕರ್ತರು ಸಿಂಪಡಿಸಿದರು. ತದಾನಂತರ ಕಿನ್ನಿಂಗಾರು ಪ್ರದೇಶಕ್ಕೆ ತೆರಳಿ ಸಿಂಪಡಿಸಿದರು.
ಅಗತ್ಯಕ್ಕೆ ಅನುಸಾರವಾಗಿ ಬೆಳ್ಳೂರು ಪ್ರಾಥಮಿಕ ಆರೋಗ್ಯಕೇಂದ್ರದ ವತಿಯಿಂದ ಅಣುನಾಶಿಕ ಮದ್ದು ಸೋಡಿಯಂ ಹೈಪೋಕ್ಲೋರೈಟ್‌ನ್ನು ನೀಡಿದರು.
ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಫವಾಝ್ ಮಜೀದ್, ಜೂನಿಯರ್ ಹೆಲ್ತ್ ಆಫೀಸರ್ ಅನುಶ್ರೀ, ಜೂನಿಯರ್ ಹೆಲ್ತ್ ಆಫೀಸರ್ ಸುರೇಶ್, ಬೆಳ್ಳೂರು ಗ್ರಾಮ ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೀತಾ ಕೆ, ಸೇವಾ ಭಾರತಿಯ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆದಿತ್ಯವಾರದಂದು ಬೆಳಿಗ್ಗೆ ಮುಳ್ಳೇರಿಯ ಹಾಗೂ ಆದೂರು ಪೇಟೆಯ ಎಲ್ಲಾ ಪ್ರದೇಶಗಳಲ್ಲೂ ಸೇವಾಭಾರತಿ ಮುಳ್ಳೇರಿಯ ಘಟಕದ ಕಾರ್ಯಕರ್ತರು ಅಣುನಾಶಿಕ ಮದ್ದನ್ನು ಸಿಂಪಡಿಸಿದರು. ಕಾರಡ್ಕ ಆರೋಗ್ಯಇಲಾಖೆಯವರು ಅಣುನಾಶಿಕ ಮದ್ದು ಸೋಡಿಯಂ ಹೈಪೋಕ್ಲೋರೈಟ್‌ನ್ನು ನೀಡಿದರು.
- Get link
- X
- Other Apps
Comments
Post a Comment