ಪದವಿ ತರಗತಿ ಪ್ರವೇಶಾತಿಗೆ ಅರ್ಜಿ ಕೋರಿಕೆ

ಪದವಿ ತರಗತಿ ಪ್ರವೇಶಾತಿಗೆ ಅರ್ಜಿ ಕೋರಿಕೆ

                                                          ರಾಜ್ಯ ಸರಕಾರಿ ಸಂಸ್ಥೆ .ಎಚ್.ಆರ್.ಡಿ. ವ್ಯಾಪ್ತಿಯ ಮಹಾತ್ಮಾ ಗಾಂಧಿ ವಿವಿಯ ಅಫಿಲಿಯೇಟ್ ನಡೆಸಿರುವ ಕಡತ್ತುರುತ್ತಿ, ಕಟ್ಟಪ್ಪನ, ಕಾಂಞಿರಪಳ್ಳಿ, ಕೊನ್ನಿ, ಮಲ್ಲಪಳ್ಳಿ, ಮರಯೂರು, ನೆಡುಕಂಡಂ, ಪಯ್ಯಪ್ಪಾಡಿ, ಪೀರುಮೇಡ್, ತೊಡುಪುಳ, ಪುತ್ತನ್ ವೇಲಿಕ್ಕರ ಪ್ರದೇಶಗಳಲ್ಲಿ ಚಟುವಟಿಕೆ ನಡೆಸುತ್ತಿರುವ 11 ಅಪ್ಲೈಡ್ ಸಯನ್ಸ್ ಕಾಲೇಜುಗಳಲ್ಲಿ ಪದವಿ ತರಗತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಕೋರಲಾಗಿದೆ. ವೆಬ್ ಸೈಟ್ :http://ihrd.kerala.gov.in/cascap.

                               ಪ್ರತಿ ಕಾಲೇಜಿನ ಪ್ರವೇಶಾತಿಗೂ ಬೇರೆ ಬೇರೆ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಅರ್ಜಿ ಸಲ್ಲಿಕೆಯ ನಂತರ ಅರ್ಜಿಯ ಪ್ರಿಂಟ್ ಔಟ್, ನಿಗದಿತ ತತ್ಸಂಬಧಿ ದಾಖಲೆಗಳು, 350 ರೂ. ನೋಂದಣಿ ಶುಲ್ಕ, ಆನ್ ಲೈನ್ ಮೂಲಕ ಪಾವತಿಸಿ ಮಾಹಿತಿಗಳ ಸಹಿತ ಪ್ರವೇಶಾತಿ ಬಯಸುವ ಕಾಲೇಜಿಗೆ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ ವೆಬ್ ಸೈಟ್ : www.ihrd.ac.in.

Comments