ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭ: ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆ ನಿರ್ಧಾರ

ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭ: ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆ ನಿರ್ಧಾರ


                                          ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭಿಸಲು ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆ ನಿರ್ಧರಿಸಿದೆ.

                            ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.

                             ಮಾರ್ಕೆಟ್ ಯಾರ್ಡ್ ನಲ್ಲಿ ರಖಂ ಆಗಿ ತಿಂಗಳ-ವಾರದ-ದಿನ ಗಣಣೆಯಲ್ಲಿ ತರಕಾರಿ ಸಂಗ್ರಹ ಮತ್ತು ಮಾರಾಟ ನಡೆಸಲಾಗುವುದು. ಅತ್ಯಾಧುನಿಕ ರೀತಿ ಮಾರ್ಕೆಟ್ ನಿರ್ಮಿಸಲಾಗುವುದು. ಕಾಸರಗೋಡು ಜಿಲ್ಲೆಯ ಎಲ್ಲ ಕಡೆಗಳಿಂದ ತರಕಾರಿ ಸಂಗ್ರಹಿಸಿ ಮಾರಾಟ ನಡೆಸುವುದು ಮತ್ತು ಜಿಲ್ಲೆಯಲ್ಲೇ ಬೇಕಾದಷ್ಟು ಬೆಳೆಯದೇ ಇರುವ ತರಕಾರಿಗಳನ್ನು ಬೇರೆಡೆಗಳಿಂದ ತರಿಸಿ ವಿತರಣೆ ನಡೆಸಲು ಮೂಲಕ ಸಾಧ್ಯವಾಗಲಿದೆ.

                             ಹಾಲು ಉತ್ಪಾದಕ ಸಂಘಗಳನ್ನು ಕೇಂದ್ರೀಕರಿಸಿ ಗ್ರಾಮೀಣ ತರಕಾರಿಗಳ ಸಂಗ್ರಹ ಮತ್ತು ಮಾರಾಟ ನಡೆಸಲೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಚಟುವಟಿಕೆ ನಡೆಸುವ ಸುಮಾರು 172 ಹಾಲು ಉತ್ಪಾದಕ ಸಂಘಗಳು ಜಿಲ್ಲೆಯಲ್ಲಿವೆ. ಕೇಂದ್ರಗಳನ್ನು ಬಳಸಿ ಕೃಷಿಕರಿಂದ ಉತ್ಪನ್ನಗಳನ್ನು ಪಡೆದು ನೇರವಾಗಿ ಗ್ರಾಹಕರಿಗೆ ತಲಪಿಸಲು ಸಾಧ್ಯವಾಗುವ ರೀತಿ ಇಲ್ಲಿ ಸೌಲಭ್ಯ ಒದಗಿಸಲಾಗುವುದು.

                                 ಸುಭಿಕ್ಷ ಕೇರಳಂ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು. 

Comments