- Get link
- X
- Other Apps
- Get link
- X
- Other Apps
ಮಲೆನಾಡ ಹೆದ್ದಾರಿಯ ಪ್ರಥಮ ರೀಚ್ ಆಗಸ್ಟ್ ತಿಂಗಳ ಕೊನೆಯಲ್ಲಿ ಉದ್ಘಾಟನೆಗೆ ಸಜ್ಜು
ಮಲೆನಾಡ ಹೆದ್ದಾರಿಯ ಪ್ರಥಮ ರೀಚ್ ಆಗಸ್ಟ್ ತಿಂಗಳ ಕೊನೆಯಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.
ಮಲೆನಾಡ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸಿಗೆ ಬಣ್ಣ ನೀಡುವ ಮಲೆನಾಡ ಹೆದ್ದಾರಿಯ ನಿರ್ಮಾಣ ಕಾಸರಗೋಡು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿದೆ. ಜಿಲ್ಲೆಯ ನಂದರಪದವಿನಿಂದ ಆರಂಭಗೊಳ್ಳುವ ಮಲೆನಾಡ ಹೆದ್ದಾರಿಯ ಪ್ರಥಮ ರೀಚ್ ಆಗಸ್ಟ್ ತಿಂಗಳ ಕೊನೆಯಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆಯಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.
23 ಕಿ.ಮೀ. ಉದ್ದದ ಈ ಹೆದ್ದಾರಿ 5467 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಕೋವಿಡ್ ಬಾಧೆಯ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ಹೆದ್ದಾರಿ ನಿರ್ಮಾಣ ಮೊಟಕುಗೊಂಡಿದ್ದರೂ, ಇದೀಗ ಪುನರಾರಂಭಗೊಂಡಿದೆ. ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ 127.805 ಕಿ.ಮೀ. ಮಲೆನಾಡ ಹೆದ್ದಾರಿಯ 4 ರೀಚ್ ಗಳು ಪೂರ್ಣಗೊಳ್ಳಲಿವೆ. 12 ಮೀಟರ್ ಅಗಲದಲ್ಲಿ ನಿರ್ಮಾಣಗೊಳ್ಳುವ ಹೆದ್ದಾರಿಯ 7 ಮೀಟರ್ ಡಾಮರೀಕರಣ, ಉಭಯ ಬದಿಗಳಲ್ಲಿ ತಲಾ ಒಂದು ಮೀಟರ್ ಕಾಲ್ನಡಿಗೆ
For Advertisement Contact : 9020300004, 9809871377
ಹಾದಿ, ಉಳಿದೆಡೆ ಚರಂಡಿ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಅಗತ್ಯವಿರುವ ಪ್ರದೇಶಗಳಲ್ಲಿ ಸೇತುವೆ, ಡಿವೈಡರ್ ಇತ್ಯಾದಿಗಳನ್ನು ನಿರ್ಮಿಸಲಾಗುವುದು.
ನಂದರಪದವಿನಿಂದ ಸುಂಕದಕಟ್ಟೆ, ಪೈವಳಿಕೆ, ಚೇವಾರು, ಅಂಗಡಿಮೊಗರು, ಇಡಿಯಡ್ಕ, ಬದಿಯಡ್ಕ, ಮುಳ್ಳೇರಿಯ, ಪಡಿಯತ್ತಡ್ಕ, ಅತ್ತನಾಡಿ, ಎಡಪರಂಬ, ಪಾಂಡಿ, ಪಳ್ಳಂಜಿ, ಶಂಕರಪ್ಪಾಡಿ, ಪಡ್ಪು, ಬಂದಡ್ಕ, ಮಾನಡ್, ಕೋಳಿಚ್ಚಾಲ್, ಪದಿನೆಟ್ಟಾಂ ಮೈಲ್, ಚುಳ್ಳಿ, ವೆಳ್ಳಿಕಡವು, ಚಿತ್ತಾರಿಕಲ್ಲ್ ಮೂಲಕ ಚೆರುಪುಳಕ್ಕೆ ಜಿಲ್ಲೆಯ ಮಲೆನಾಡ ಹೆದ್ದಾರಿ ತಲಪಲಿದೆ.
ಕಿಫ್ ಬಿ ಮೂಲಕ ಯೋಜನೆಗೆ ನಿಧಿ ಲಭ್ಯವಾಗುತ್ತಿದೆ. ಜಿಲ್ಲೆಯ ಅತಿ ಉದ್ದದ ರೀಚ್ ಆಗಿರುವ ಚೇವಾರು-ಎಡಪ್ಪರಂಬಕ್ಕೆ ಆರ್ಥಿಕ ಮಂಜೂರಾತಿ ಲಭಿಸಿದೆ. 49. 635 ಕಿ.ಮೀ. ಉದ್ದ ರೀಚ್ ಇದಾಗಿದೆ. 8385 ಲಕ್ಷ ರೂ. ವೆಚ್ಚದ ಈ ಯೋಜನೆಗೆ ತಾಂತ್ರಿಕ ಮಂಜೂರಾತಿ ಗಿರುವ ಕ್ರಮ ಪ್ರಗತಿಯಲ್ಲಿದೆ. ಎಡಪರಂಬ-ಕೋಳಿಚ್ಚಾಲ್ ರೀಚ್ ನ ನಿರ್ಮಾಣ ಅರ್ಧಾಂಶ ಪೂರ್ಣಗೊಡಿದೆ. 24.4 ಕಿ.ಮೀ. ಉದ್ದದ ಈ ರೀಚ್ ಎರಡು ಕಡೆಗಳಲ್ಲಿ ಮೂರೂವರೆ ಕಿ.ಮೀ. ವನಾಂತರ ಹಾದಿಯಿದೆ. ಆದಕಾರಣ ಇಲ್ಲಿ 12 ಮೀಟರ್ ಅಗಲ ರಸ್ತೆ ಸುಧಾರಿತಗೊಳಿಸಲು 4.332 ಹೆಕ್ಟೇರ್ ಜಾಗದಲ್ಲಿ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕ್ರಮಗಳು ಪೂರ್ಣಗೊಳ್ಳುತ್ತಿವೆ. 85515 ಲಕ್ಷ ರೂ. ಎಡಪ್ಪರಂಬ ಕೋಳಿಚ್ಚಾಲ್ ರೀಚ್ ಗೆ ಕಿಫ್ ಬಿ ಮೂಲಕ ಮಂಜೂರಾತಿ ಲಭಿಸಿದೆ.
ಕೋಳಿಚ್ಚಾಲ್ ನಿಂದ ಜಿಲ್ಲೆಯ ಗಡಿ ಪ್ರದೇಶ ಚೆರುಪುಳ ವರೆಗಿನ 30.77 ಕಿ.ಮೀ. ಉದ್ದದ ರೀಚ್ ಗೆ 8200 ಲಕ್ಷ ರೂ. ಮೀಸಲಿರಿಸಲಾಗಿದೆ. ಶೇ 31 ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಮರುತೋಂ ಕಾಟ್ಟಾಂಕವಲ ವನಾಂತರ ವಲಯದ ಮೂಲಕ ಈ ರೀಚ್ ನ 3.100 ಕಿ.ಮೀ. ಭಾಗ ಸಾಗುತ್ತದೆ. ಇಲ್ಲೂ ವನಾಂತರ ಜಾಗದ ಲಭ್ಯತೆ ಸಂಬಂಧ ಕ್ರಮಗಳು ಪ್ರಗತಿಯಲ್ಲಿವೆ.
ಬದಲಾವಣೆಗೆ ಸಿದ್ಧವಾದ ಮಲೆನಾಡು
ರಾಷ್ಟ್ರೀಯ ಹೆದ್ದಾರಿಯ ಸಂಚಾರ ನಿಭಿಡತೆಯ ಹಿನ್ನೆಲೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಮಲೆನಾಡ ಹೆದ್ದಾರಿ ಮೂಲಕ ಪ್ರಶಾಂತ ಪ್ರಯಾಣಕ್ಕೆ ಕದ ತೆರೆದುಕೊಂಡಿದೆ. ಇದು ದೀರ್ಘಗಾಮಿ ಪ್ರಯಾಣಿಕರನ್ನೂ ಕೈಬೀಸಿ ಕರೆಯಲಿದೆ. ಜೊತೆಗೆ ಸರಕು ಸಾಗಣೆಗೆ ಈ ಹಾದಿ ಸುಗಮವಾಗಲಿದೆ. ಇದೆಲ್ಲವೂ ಹಂತಹಂತವಾಗಿ ಮಲೆನಾಡಿಗೆ ಅಭಿವೃದ್ಧಿ ಒದಗಿಸಲಿವೆ.
ಮಲೆನಾಡ ಹೆದ್ದಾರಿ ಪೂರ್ಣಗೊಳ್ಳುವ ಜೊತೆಗೆ ಚೆರುಪುಳದಿಂದ ಕರ್ನಾಟಕದ ಸುಳ್ಯ, ಮಡಿಕೇರಿ, ಮಂಗಳೂರು ಸಹಿತ ಪ್ರಧಾನ ನಗರಗಳಿಗಿರುವ ಹೆದ್ದಾರಿ ಜಾರಿಗೆ ಬರಲಿದೆ. ಈ ಮೂಲಕ ಚೆರುಪುಳದಿಂದ ಸುಳ್ಯಕ್ಕೆ ಈಗಿರುವ ದೂರ ಗಣನೀಯವಾಗಿ ಕಡಿಮೆಯಾಗಲಿದೆ. ಚೆರುಪುಳ ಮಾಲೋಂ ನಿಂದ ಮಲೆನಾಡ ಹೆದ್ದಾರಿ ಮೂಲಕ ಬಂದಡ್ಕ ಮೂಲಕ,ಪಾಣತ್ತೂರು ಮೂಲಕ ಸುಲಭವಾಗಿ ಸುಳ್ಯಕ್ಕೆ ತಲಪಬಹುದಾಗಿದೆ. ವೆಳ್ಳರಿಕುಂಡ್ ತಾಲೂಕಿನ ಪೂರ್ವ ವಲಯದಿಂದ ಜಿಲ್ಲಾ ಕೇಂದ್ರ ವಾಗಿರುವ
ಕಾಸರಗೋಡಿಗೆ ಬೋವಿಕ್ಕಾನ ಮೂಲಕವೂ, ಮಂಗಳೂರಿಗೆ ದೇರಳಕಟ್ಟೆ ಮೂಲಕವೂ ತಲಪಬಹುದಾಗಿರುವುದು ಮಲೆನಾಡ ಹೆದ್ದಾರಿಯ ಕೊಡುಗೆಯಾಗಲಿದೆ. ಜೊತೆಗೆ ಕಾಸರಗೋಡು ಜಿಲ್ಲೆಯ ಪೂರ್ವ ವಲಯ, ದಕ್ಷಿಣ ಕನ್ನಡ ಜಿಲ್ಲೆ, ಕಣ್ಣೂರು ವಿಮಾನ ನಿಲ್ದಾಣಗಳನ್ನು ಸುಲಭವಾಗಿ ತಲಪಲು ಪೂರಕವಾಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಮಹತ್ವಿಕೆ ಬರಲಿದೆ.
- Get link
- X
- Other Apps
Comments
Post a Comment