- Get link
- X
- Other Apps
- Get link
- X
- Other Apps
ಮಹಾಮಾರಿಯನ್ನು ಪರಾಭವಗೊಳಿಸಿದ ಮಹಮ್ಮದ್ ಅಝರುದ್ದೀನ್
------------------------------------------------------
50 ದಿನಗಳ ಕಾಲ ಕೊರೋನಾದೊಂದಿಗೆ ಹೋರಾಡಿದ ಛಲಗಾರ
50 ದಿನಗಳ ಕಾಲ ಕೊರೋನಾ ವಿರುದ್ಧ ಎದೆಗಾರಿಕೆಯಿಂದ ಸತತ
ಹೋರಾಡಿದ ಮಹಮ್ಮದ್ ಅಝರುದ್ದೀನ್ ಕೊನೆಗೂ ಮಹಾಮಾರಿಯನ್ನು ಸೋಲಿಸಿದ್ದಾರೆ.
ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 26 ವರ್ಷದ ಮಹಮ್ಮದ್ ಅಝರುದ್ದೀನ್
ಅವರಿಗೆ ಕಳೆದ ಅರ್ಧ ಶತಕ ದಿನಗಳು ಮೆರೆಯಲಾಗದಂಥವುಗಳು. ಆಸ್ಪತ್ರೆಗೆ ದಾಖಲಾದ ವೇಳೆ ಸತತವಾಗಿ ನಡೆಸಿದ್ದ
ತಪಾಸಣೆಗಳಲ್ಲಿ ಪ್ರತಿಬಾರಿಯೂ ಫಲಿತಾಂಶ ಕೊರೋನಾ ಪಾಸಿಟಿವ್ ಆಗಿರುತ್ತಿತ್ತು. ಆದರೆ ಈ ವೇಳೆ ಆಸ್ಪತ್ರೆಯ ವೈದ್ಯರು,
ದಾದಿಯರು, ಸಿಬ್ಬಂದಿ ನೀಡಿದ್ದ ಮಾನಸಿಕ ಧೈರ್ಯ ಇಂದಿನ ಯಶಸ್ಸಿಗೆ ಕಾರಣ ಎಂದವರು ಅಭಿಪ್ರಾಯಪಡುತ್ತಾರೆ.
ಮಹಾರಾಷ್ಟ ದಿಂದ ಬಂದಿದ್ದ ಮಹಮ್ಮದ್ ಅಝರುದ್ದೀನ್ ನೌಕರಿ ಸಂಬಂಧ ಅವರು ಅಲ್ಲಿಗೆ ತೆರಳಿದ್ದರು. ಈ
ವೇಳೆ ಲಾಕ್ ಡೌನ್ ಆದೇಶ ಜಾರಿಗೆ ಬಂದ ಕಾರಣ ಅಲ್ಲೇ ಉಳಿದುಕೊಳ್ಳಬೇಕಾಗಿ ಬಂದಿತ್ತು. ಮೇ 18ರಂದು ಊರಿನವರೇ ಆದ 12 ಮಂದಿಯೊಂದಿಗೆ ಟ್ರಾವೆಲರ್ ವಾಹನದಲ್ಲಿ ಮರಳಿದ್ದರು. ನಂತರ ಕಾಸರಗೋಡಿನ ವಸತಿಗೃಹವೊಂದರಲ್ಲಿ ಕ್ವಾರೆಂಟೈನ್ ನಲ್ಲಿ
ತಂಗಿದ್ದರು.
ಅವರಿಗೆ ಮೇ 25ರಂದು ಸೋಂಕು ತಗುಲಿರುವುದು ಖಚಿತಗೊಂಡಿತ್ತು. ನಂತರ ರೋಗದೊಂದಿಗೆ ಸತತ
ಹೋರಾಟ ನಡೆಸುತ್ತಲೇ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ನಡುವೆ 13 ಬಾರಿ ಪಿ.ಸಿ.ಆರ್. ಟೆಸ್ಟ್, ಒಮ್ಮೆ ರಾಪಿಡ್
ಆಂಟಿಜನ್ ಟೆಸ್ಟ್ ಗೆ ಒಳಗಾಗಿದ್ದರು. ಎಲ್ಲವನ್ನೂ ಮೀರಿ ಇದೇ ಸೋಂಕಿನಿಂದ ಆಸ್ಪತ್ರೆಗೆ ತಮ್ಮ ಜೊತೆಗೇ ದಾಖಲಾಗಿದ್ದ
ಪ್ರತಿಯೊಬ್ಬರೂ ಗುಣಮುಖರಾಗಿ ತೆರಳಿದ್ದರೂ, ತಾನು ಚೇತರಿಸದೇ ಉಳಿದುದು ದೊಡ್ಡ ಮಟ್ಟದ ವ್ಯಥೆಗೆ ಕಾರಣವಾಗಿತ್ತು. ಇಲ್ಲಿನ
ವೈದ್ಯರ ಸಹಿತ ಎಲ್ಲ ಸಿಬ್ಬಂದಿ ತೋರಿದ ಮನವೀಯ ಅನುಕಂಪ ಕೊನೆಗೂ ತನ್ನನ್ನು ಗೆಲ್ಲುವಂತೆ ಮಾಡಿದೆ ಎಂದವರು ತಿಳಿಸಿದರು.
ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ ತನಗೆ ಬದುಕಿನಲ್ಲಿ ಪಾಸಿಟಿವ್ ಆಗಿರುವುದನ್ನು ಈ ಅನುಭವ
ಕಲಿಸಿದೆ ಎಂದು ಕುಂಬಳೆಯ ಕೆಳಗಿನ ಕೊಡಿಯಮ್ಮೆ ನಿವಾಸಿಯಾಗಿರುವ ಇವರು ಹೇಳಿದರು.
ಗುಣಮುಖರಾದ ನಂತರವೂ ಆರೋಗ್ಯ ಇಲಾಖೆಯ ಕಟ್ಟು ನಿಟ್ಟಿನ ಹಿನ್ನೆಲೆಯಲ್ಲಿ 14 ದಿನಗಳ ನಿಗಾದಲ್ಲಿ
ಮಹಮ್ಮದ್ ಅಝರುದ್ದೀನ್ ಇದ್ದಾರೆ. ಈ ಸಂದಿಗ್ಧ ಪರಿಸ್ಥಿಯಲ್ಲಿ ಪ್ರತಿಯೊಬ್ಬರೂ ಸರಕಾರ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ
ಜಾಗರೂಕತೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Comments
Post a Comment