ಅಡುಗೆ_ಮನೆ ವಿಚಾರ_ಸಂಕಿರಣ : ಅಕ್ಷರ

#ಅಡುಗೆ_ಮನೆ #ವಿಚಾರ_ಸಂಕಿರಣ 😅
"ಏನಾದ್ರೂ ಹೇಳಿದ್ರೆ 'ಅದ್ಯಾಕೆ ಹಾಗೆ? ಹೀಗ್ಯಾಕೆ ಇಲ್ಲ?' ಹೀಗೆ ನೂರೆಂಟು ಪ್ರಶ್ನೆ ಕೇಳೋ ಅಭ್ಯಾಸ ಇಷ್ಟು ದೊಡ್ಡೋಳಾದ್ರೂ ಬಿಟ್ಟಿಲ್ಲ ಎನ್ನುವುದು ನಮ್ಮ ಬಗ್ಗೆ ಮನೆಯವರೆಲ್ಲರಿಗೂ ಇರೋ ಕಂಪ್ಲೈಂಟು🤣 ಯಾಕೋ ಹುಟ್ಟಿದ ಪ್ರಶ್ನೆಗಳನ್ನು ಅದುಮಿಡಲಾರದ್ದು ಚಾಳಿಯೂ ಆಗಿದೆ ಬಿಡಿ ! 

ಇದೊಂಥರಾ ವಿಶಿಷ್ಟ ಕಾಡುತ್ಪತ್ತಿ ಕಾಯಿಪಲ್ಲೆ. #ಕುಂಬಳೆ_ವಿಟ್ಲ_ಕರೋಪಾಡಿ_ಪಂಜ_ಪುತ್ತೂರು ಸೀಮೆಯವರಿಗಷ್ಟೆ ಬಹು ಪರಿಚಿತವೆನ್ನಲೂ ಬಹುದು. ಕಾಡಿನ ಬಳ್ಳಿಯಲ್ಲಿ ಪುಟ್ ಪುಟಾಣಿ ಕಾಯಿಗಳು ನೋಡಲು ಅಂದ ಹೌದು, ಆದರೆ ಅಡುಗೆಯಲ್ಲಿ ಬಳಸಲು ಜಾಣ್ಮೆಯಿಲ್ಲದಿದ್ದರೆ ನಾಲಿಗೆಯಿಂದ ಗಂಟಲಿನ ತನಕ ಕೆರ್ಕೋಬೇಕಾಗುತ್ತೆ🙊. ಆದ್ರೂ ತುಂಡು ಮಾಡಿ ಬೇಯಿಸಿ, ಒಳಗಿರುವ ಸಣ್ಣ ಬೀಜಗಳನ್ನು ಬೇರ್ಪಡಿಸಿ ತಣ್ಣಗಾದ ಬಳಿಕ ಸ್ವಲ್ಪ ಮಜ್ಜಿಗೆ  ಉಪ್ಪು, ಹಸಿ ತೆಂಗಿನತುರಿ ಹಾಗೂ ಹಸಿ ಮೆಣಸಿನ ಮಿಶ್ರಣ ಸೇರಿಸಿ ಮುಗುಳು ಕುದಿಗೆ ಇಳಿಸಿ ಬಿಟ್ರೆ ನಮ್ಮಂತಹ ಪುಳ್ಚಾರ್ ಗಳ ರುಚಿಯಾದ ಮೇಲೋಗರ ಅಲಿಯಾಸ್ ಮೇಲಾರ ಎಂಬ ರೆಸಿಪಿ ರೆಡಿಯಾಗುತ್ತೆ 😋. "ಪುಟಾಣಿ ಕಾಯಿಯ ಬೆಂದ ತುಂಡಿನೊಳಗೆ ಅರೆದ ಮಿಶ್ರಣ ತುಂಬ್ಕೊಂಡು ತುಂಬುಗಾಯಿಯಾದ್ರೆ ಮಾತ್ರ ಮೇಲೋಗರ ಪರ್ಫೆಕ್ಟ್ ಆಗಿದೆ ಅನ್ನೋದಕ್ಕೆ ಮಾನದಂಡ" ಅಂತಾನೂ ಅಜ್ಜಿ ಹೇಳ್ತಿದ್ರು ! 

ಹ್ಞೂಂ.......! ಇಷ್ಟೆಲ್ಲ ಹೇಳಿದ್ಮೇಲೆ ಹೆಸ್ರು ಹೇಳಲೇಬೇಕಲ್ಲ ! ಇದುವೇ #ಕಾನಕಲ್ಲಟೆ. ಈ ಕಾನಕಲ್ಲಟೆ ಎಂಬ ಹೆಸರು ಹೇಗೆ ಬಂತು? ಇದು ಪ್ರತಿ ವರ್ಷ ಕೇಳ್ಕೊಂಡು ಬಂದಿದ್ರೂ ಸರಿಯಾಗಿ ಉತ್ತರ ಇದುವರೆಗೆ ಸಿಕ್ಕಿಲ್ಲ. ಬಹುಶ: #ಕಾನನದ_ಕಲ್ಲಟೆ ರೂಪಾಂತರವಾಗಿ #ಕಾನಕಲ್ಲಟೆ ಆಗಿರ್ಬೇಕು ಎಂಬ ಸಂಶಯದಲ್ಲಿ ಒಂದಿಷ್ಟು ಕಡೆ ಅರ್ಥ ಹುಡುಕ್ತಾ ಹೋದ್ರೆ ತಕ್ಕ ಮಟ್ಟಿಗೆ ತೃಪ್ತಿಕರ ಉತ್ತರಾನೂ ಸಿಕ್ಕಿತು. 

#ಅಟ್ಟೆ ಎಂಬುದಕ್ಕೆ #ಚರ್ಮ ಎಂಬರ್ಥವೂ ಇದ್ದು ಈ ಕಾಯಿಯೊಳಗಿನ ಬೀಜ #ಕಲ್ಲಿನಷ್ಟೇ_ಗಟ್ಟಿ ! ಈ ಕಾರಣಕ್ಕಾಗಿ #ಕಲ್ಲಿನ_ಮೇಲಿನ_ಚರ್ಮ #ಕಲ್ಲಟ್ಟೆಯಾಗಿ ಕಾಡಿನಲ್ಲಿ ಸಿಗುವ ಕಾರಣ #ಕಾನನ_ಕಲ್ಲಟ್ಟೆ ರೂಪಾಂತರವಾಗಿ #ಕಾನ_ಕಲ್ಲಟೆಯಾಗಿರ್ಬಹುದು ಎಂಬ ಊಹೆಯೊಂದಿಗೆ ಬೆಳಗ್ಗಿನ #ಅಡುಗೆ_ಮನೆ ವಿಚಾರ ಸಂಕಿರಣ ಮುಕ್ತಾಯವಾಯಿತು.

#ಈ_ಅಡುಗೆಯ_ಹೆಸರು : #ಕಾನಕಲ್ಲಟೆ ಅಲ್ಲಲ್ಲ #ಕಾನನ_ಕಲ್ಲಟ್ಟೆ #ಮೇಲೋಗರ or #ಹವ್ಯಕರ_ಮೇಲಾರ 😅

✍️akshara

Comments