- Get link
- X
- Other Apps
ಇಂದು ಕಾಸರಗೋಡು ಜಿಲ್ಲೆಯ ಜನರಿಗೆ ಅಲ್ಪಾ ಸಮಾಧಾನ, 38 ಮಂದಿಗೆ ಕೋವಿಡ್ ಪಾಸಿಟಿವ್ ,53 ಮಂದಿ ಕೋವಿಡ್ ರೋಗ ಮುಕ್ತರು, 4329 ಮಂದಿ ನಿಗಾದಲ್ಲಿದ್ದಾರೆ
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೋವಿಡ್ ಪಾಸಿಟಿವ್ ,53 ಮಂದಿ ಕೋವಿಡ್ ರೋಗ ಮುಕ್ತರು, 4329 ಮಂದಿ ನಿಗಾದಲ್ಲಿದ್ದಾರೆ
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 26 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇಬ್ಬರ ಸಂಪರ್ಕ ಮೂಲ ಪತ್ತೆಯಾಗಿಲ್ಲ. 7 ಮಂದಿ ಇತರ ರಾಜ್ಯಗಳಿಂದ, 5 ಮಂದಿ ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕದಿಂದ ಸೋಂಕು
ಚೆಮ್ನಾಡ್ ಪಂಚಾಯತ್ ನ 35,11,51,7,27,19,8,12,21 ವರ್ಷದ ಮಹಿಳೆಯರು, 15,2,4,9,6,17 ವರ್ಷದ ಪುರುಷರು, ಪನತ್ತಡಿ ಪಂಚಾಯತ್ ನ 75,38 ವರ್ಷದ ಮಹಿಳೆಯರು, ಮಂಜೇಶ್ವರ ಪಂಚಾಯತ್ ನ 13 ವರ್ಷದ ಬಾಲಕ, ಮಂಗಲ್ಪಾಡಿ ಪಂಚಾಯತ್ ನ 30 ವರ್ಷದ ಮಹಿಳೆ, ಚೆರುವತ್ತೂರು ಪಂಚಾಯತ್ ನ 17 ವರ್ಷದ ಯುವಕ, ಕಾಸರಗೋಡು ನಗರಸಭೆಯ 35 ವರ್ಷದ ಮಹಿಳೆ, 46 ವರ್ಷದ ಪುರುಷ, ಪಳ್ಳಿಕ್ಕರೆ ಪಂಚಾಯತ್ ನ 62 ವರ್ಷದ ಪುರುಷ, ಚೆಂಗಳ ಪಂಚಾಯತ್ ನ 64,60 ವರ್ಷದ ಮಹಿಳೆಯರು, ಚೆಮ್ನಾಡ್ ಪಂಚಾಯತ್ ನ 29 ವರ್ಷದ ಮಹಿಳೆ ಸೋಂಕು ಬಾಧಿತರು.
ವಿದೇಶದಿಂದ ಬಂದವರು
ಯು.ಎ.ಇ.ಯಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನಿವಾಸಿ 30, ಕುವೈತ್ ನಿಂದ ಬಂದಿದ್ದ 50 ವರ್ಷದ ಪುರುಷರು, ಸೌದಿಯಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನ 53 ವರ್ಷದ ಮಹಿಳೆ, ಮಂಗಲ್ಪಾಡಿ ಪಂಚಾಯತ್ ನ 45 ವರ್ಷದ ಪುರುಷ, ದುಬಾಯಿಯಿಂದ ಬಂದಿದ್ದ 27 ವರ್ಷದ ಪುರುಷ ರೋಗ ತಗುಲಿದವರು.
ಇತರ ರಾಜ್ಯಗಳಿಂದ ಆಗಮಿಸಿದವರು
ಇತರ ರಾಜ್ಯಗಳಿಂದ ಬಂದಿದ್ದ ಮಂಜೇಶ್ವರ ಪಂಚಾಯತ್ ನ 35, ಕಳ್ಳಾರ್ ಪಂಚಾಯತ್ ನ 31,34 ವರ್ಷದ ಪುರುಷರು, 54 ವರ್ಷದ ಮಹಿಳೆ, 3 ವರ್ಷದ ಬಾಲಕಿ, ಚೆರುವತ್ತೂರು ಪಂಚಾಯತ್ ನ 24 ವರ್ಷದ ಮಹಿಳೆ, ಕಾಸರಗೋಡು ನಗರಸಭೆಯ 25 ವರ್ಷದ ಪುರುಷ ಸೋಂಕು ಖಚಿತಗೊಂಡವರು.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 53 ಮಂದಿ ಕೋವಿಡ್ ರೋಗ ಮುಕ್ತರು
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 53 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 7 ಮಂದಿ, ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 15 ಮಂದಿ, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬರು, ವಿದ್ಯಾನಗರ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಇಬ್ಬರು, ಪರವನಡ್ಕ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 28 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 4329 ಮಂದಿ ನಿಗಾದಲ್ಲಿ
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 4329 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಇವರಲ್ಲಿ 3284 ಮಂದಿ ಮನೆಗಳಲ್ಲಿ, 1045 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 314 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 371 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 593 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
- Get link
- X
- Other Apps
Comments
Post a Comment