- Get link
- X
- Other Apps
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು: ಜಿಲ್ಲಾಧಿಕಾರಿ
- Get link
- X
- Other Apps
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು: ಜಿಲ್ಲಾಧಿಕಾರಿ
ಆದರೆ ಕಂಟೈ ನ್ಮೆಂಟ್ ಝೋನ್ ಗಳಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಬಹುದು. ಕಾಸರಗೋಡು ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆದರೆ ಅಂಗಡಿಗಳಲ್ಲಿ ಜನ ಗುಂಪು ಸೇರುವುದು ಸಲ್ಲದು, ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಿಕೆ ಇತ್ಯಾದಿ ಕಡ್ಡಾಯವಾಗಿ ಪಾಲಿಸಬೇಕು. ಅಂಗಡಿಗಳ ಸಿಬ್ಬಂದಿ ಮಾಸ್ಕ್ , ಗ್ಲೌಸ್ ಧರಿಸಲೇ ಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಕಂಟೈ ನ್ಮೆಂಟ್ ಝೋನ್ ಗಳ ಸಹಿತ ಪ್ರದೇಶಗಳ ಅಕ್ಷಯ ಕೇಂದ್ರಗಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾರಿಸಬಹುದು. ಮೆಡಿಕಲ್ ಶಾಪ್ ಗಳಿಗೆ ಸಮಯದ ಅವಧಿ ಕಡ್ಡಾಯವಿಲ್ಲ. ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಮೋಟಾರು ವಾಹನ ಶಾಪ್ಗಳೂ ಇತ್ಯಾದಿ ತೆರೆಯಕೂಡದು ಎಂದವರು ಹೇಳಿದರು.
ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ ತರಕಾರಿ, ಹಣ್ಣು, ಮೀನು ಇತ್ಯಾದಿ ಸರಕು ವಾಹನಗಳಿಗೆ ತಡೆಯಿಲ್ಲ: ಜಿಲ್ಲಾಧಿಕಾರಿ
ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ ತರಕಾರಿ, ಹಣ್ಣು, ಮೀನು ಇತ್ಯಾದಿ ಸರಕು ವಾಹನಗಳಿಗೆ ತಡೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕರ್ನಾಟಕದಿಂದ ವಾಹನಗಳ ಮೂಲಕ ತರಲಾಗುವ ಹಣ್ಣು, ತರಕಾರಿ,ಮೀನು ಇತ್ಯಾದಿಗಳನ್ನು ಗಡಿಪ್ರದೇಶಗಳಲ್ಲಿ ಜಿಲ್ಲೆಯ ಇತರ ವಾಹನಗಳಿಗೆ ಹೇರಿಕೆ ನಡೆಸಬೇಕು. ಮಾಸ್ಕ್, ಗ್ಲೌಸ್ ಧರಿಸುವಿಕೆ, ಸಾನಿಟೈಸರ್ ಬಳಕೆ ಸಹಿತ ಆರೋಗ್ಯ ಇಲಾಖೆಯ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಿ ಸರಕು ಹೇರಿಕೆ ಮತ್ತು ಇಳಿಕೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಿ, ವಾಹನ ವಶಪಡಿಸಲಾಗುವುದು. ಸರಕು ಹೇರಿಕೊಂಡು ಬರುವ ವಾಹನಗಳಿಗೆ ಗಡಿಯಿಂದ ಮುಂದಕ್ಕೆ ಜಿಲ್ಲೆಗೆ ಪ್ರವೇಶ ಮಂಜೂರಾತಿ ಇಲ್ಲ.
ಜಿಲ್ಲೆಯ ಗಡಿಯಲ್ಲಿ ತರಕಾರಿ ಇತ್ಯಾದಿ ಸರಕು ಹೇರಿಕೆ, ಇಳಿಕೆ ನಡೆಸುವ ವಾಹನಗಳ ಚಾಲಕ, ಇತರ ಕಾರ್ಮಿಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ವಾರಕ್ಕೊಮ್ಮೆ ಹಾಜರಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಖಚಿತಪಡಿಸಿ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು ಎಂದು ಅವರು ನುಡಿದರು.
ಕಿಂಸ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ: ಜಿಲ್ಲಾಧಿಕಾರಿ
ಕಾಸರಗೋಡು, ಜು. 27: ಕರ್ನಾಟಕ ಮೆಡಿಕಲ್, ಇಂಜಿನಿಯರಿಂಗ್ ಪ್ರವೇಶಾತಿ (ಕಿಂಸ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜು.30,31ರಂದು ಈ ಪರೀಕ್ಷೆಗಳು ನಡೆಯಲಿದ್ದು, ಕಾಞಂಗಾಡಿನಿಂದಲೂ, ಕಾಸರಗೋಡಿನಿಂದಲೂ ತಲಪ್ಪಾಡಿ ಗಡಿಪ್ರದೇಶ ವರೆಗೆ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಸಂಚಾರ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತೆಯೊಂದಿಗೆ ನಡೆಸಿದ ಮಾತುಕತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆ.1ರಂದು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರಕಾರ ವಾಹನ ಸೌಲಭ್ಯ ಒದಗಿಸಿದರೆ ಅಂದೂ ಕಾಸರಗೋಡು ಜಿಲ್ಲಾಡಳಿತೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಲಿದೆ ಎಂದವರು ನುಡಿದರು.
ಪರೀಕ್ಷೆಗೆ ಹಾಜರಾಗಿ ಮರಳುವ ವೇಳೆ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನ ರೂಂ ಕ್ವಾರೆಂಟೈನ್ ನಡೆಸಬೇಕು. ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಜತೆಯಾಗಿ ತೆರಳಲು ಅನುಮತಿ ಪಡೆದಿರುವ ಪೋಷಕರೂ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು. ಖಾಸಗಿ ವಾನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುವುದಿದ್ದಲ್ಲಿ ಅಭ್ಯಂತರವಿರುವುದಿಲ್ಲ. ಆದರೆ ಪರೀಕ್ಷೆಗೆ ಹಾಜರಾಗಿ ಮರಳಿ ಬರುವ ವೇಳೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿರಬೇಕು. ಇವರಿಗೂ 14 ದಿನಗಳ ರೂಂ ಕ್ವಾರೆಂಟೈನ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅನಿವಾರ್ಯ ಸಾಮಗ್ರಿಗಳ ಅಂಗಡಿಗಳು ಇಂತಿವೆ
ಕಾಸರಗೋಡು, ಜು. 27 : ತರಕಾರಿ, ಹಾಲು, ಹಣ್ಣು, ಅಕ್ಕಿ ಸಹಿತ ಧಾನ್ಯಗಳು, ಮೀನು-ಮಾಂಸ ಮಾರಾಟ ಅಂಗಡಿಗಳು, ಅಕ್ಕಿ-ಗೋಧಿ ಮಿಲ್ಲುಗಳು, ಮೆಡಿಕಲ್ ಶಾಪ್ ಗಳು ಇತ್ಯಾದಿಗಳನ್ನು ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳು ಎಂಬುದಾಗಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ವಿಚಾರದಲ್ಲಿ ಸಂಶಯಗಳಿದ್ದಲ್ಲಿ ಕರೆಮಾಡಬಹುದು: ನಿಯಂತ್ರಣ ಕೊಠಡಿ-04994-255001.
- Get link
- X
- Other Apps
Comments
Post a Comment