ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೋವಿಡ್ ಪಾಸಿಟಿವ್ 
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ 16 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ 6 ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಬಂದವರು, ಒಬ್ಬರಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ವಿದೇಶಗಳಿಂದ ಬಂದವರು
ಖತಾರ್ ನಿಂದ ಬಂದ ಕುಂಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ 33 ವರ್ಷದ ನಿವಾಸಿ, ಒಮಾನ್ ನಿಂದ ಆಗಮಿಸಿದ್ದ ಮಂಜೇಶ್ವರ ಪಂಚಾಯತ್ ನ 27 ವರ್ಷದ ನಿವಾಸಿ, ಕುವೈತ್ ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್ ನ 51 ವರ್ಷದ ನಿವಾಸಿ ಮಹಿಳೆ, ನೀಲೇಶ್ವರ ನಗರಸಭೆ ವ್ಯಾಪ್ತಿಯ 27 ವರ್ಷದ ನಿವಾಸಿ, ಪಡನ್ನ ಪಂಚಾಯತ್ ನ 35 ವರ್ಷದ ನಿವಾಸಿ, ಷಾರ್ಜಾ ದಿಂದ ಆಗಮಿಸಿದ್ದ ಚೆಂಗಳ ಪಂಚಾಯತ್ ನ 58 ವರ್ಷದ ನಿವಾಸಿಗೆ ಸೋಂಕು ಖಚಿತಗೊಂಡಿದೆ. 
                         ಇತರ ರಾಜ್ಯಗಳಿಂದ ಬಂದವರು 
p-6                            ಮಂಗಳೂರಿನಿಂದ ಆಗಮಿಸಿದ್ದ ವರ್ಕಾಡಿ ಪಂಚಾಯತ್ ನ 39 ವರ್ಷದ ನಿವಾಸಿ, ಉತ್ತರ ಪ್ರದೇಶದಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನ 30 ವರ್ಷದ ನಿವಾಸಿ, ಮಹಾರಾಷ್ಟ್ರ ದಿಂದ ಆಗಮಿಸಿದ್ದ ಎಣ್ಮಕಜೆ ಪಂಚಾಯತ್ ನ 45 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ. 
                     ಸಂಪರ್ಕ ಮೂಲಕ ಸೋಂಕು
                          ಚೆಮ್ನಾಡ್ ಗ್ರಾಮಪಂಚಾಯತ್ ನಿವಾಸಿ 67 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ. 
                        ಕೋವಿಡ್ ನೆಗೆಟಿವ್ ಆದವರು 
                            ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಮತ್ತು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ 16 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. 
                           ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರ ದಿಂದ ಬಂದಿದ್ದ, ಕಾಸರಗೋಡು ನಗರಸಭೆ ವ್ಯಾಪ್ತಿಯ 56 ವರ್ಷದ ನಿವಾಸಿ, ಉದುಮಾ ಪಂಚಾಯತ್ ನ 64 ವರ್ಷದ ನಿವಾಸಿ, ಪೈವಳಿಕೆ ಪಂಚಾಯತ್ ನ 40 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್ ನ 33, 37 ವರ್ಷದ ನಿವಾಸಿಗಳು, ಕಾರಡ್ಕ ಪಂಚಾಯತ್ ನ 31 ವರ್ಷದ ನಿವಾಸಿ, ಕುಂಬಳೆ ಪಂಚಾಯತ್ ನ 47 ವರ್ಷದ ನಿವಾಸಿ, ಯು.ಎ.ಇ.ಯಿಂದ ಬಂದಿದ್ದ ಬೇಡಡ್ಕ ಪಂಚಾಯತ್ ನ 27 ವರ್ಷದ ನಿವಾಸಿ ಗುಣಮುಖರಾದವರು. 
                            ಪಡನ್ನ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರ ದಿಂದ ಬಂದಿದ್ದ, ಚೆಂಗಳ ಪಂಚಾಯತ್ ನ 42 ವರ್ಷದ ನಿವಾಸಿ, ಪಡನ್ನ ಪಂಚಾಯತ್ ನ 39 ವರ್ಷದ ನಿವಾಸಿ, ಪುಲ್ಲೂರು-ಪೆರಿಯ ಪಂಚಾಯತ್ ನಿವಾಸಿ 63 ವರ್ಷದ ವ್ಯಕ್ತಿ, ಚೆರುವತ್ತೂರು ಪಂಚಾಯತ್ ನ 33 ವರ್ಷದ ನಿವಾಸಿ, ವಲಿಯಪರಂಬ ಪಂಚಾಯತ್ ನ 28 ವರ್ಷದ ನಿವಾಸಿ, ಪುತ್ತಿಗೆ ಪಂಚಾಯತ್ ನ 47 ವರ್ಷದ ನಿವಾಸಿ, ಕುವೈತ್ ನಿಂದ ಬಂದಿದ್ದ ಕಾಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ನಿವಾಸಿ, ಪಡನ್ನ ಪಂಚಾಯತ್ ನ 36 ವರ್ಷದ ನಿವಾಸಿ ಗುಣಹೊಂದಿದವರು. 
                               ಜಿಲ್ಲೆಯಲ್ಲಿ ಒಟ್ಟು 7201 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6783 ಮಂದಿ, ಸಾಂಸ್ಥಿಕ ನಿಗಾದಲ್ಲಿ 418 ಮಂದಿ ಇದ್ದಾರೆ. ನೂತವಾಗಿ 541 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 376 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 578 ಮಂದಿಯ ಫಲಿತಾಂಶ ಕಭಿಸಿಲ್ಲ. 269 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

Comments