ಕರ್ನಾಟಕ ಸಿ.ಇ.ಟಿ. ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆ.1ರಂದು ಕೆ.ಎಸ್.ಆರ್.ಟಿ.ಸಿ.ಬಸ್ ವ್ಯವಸ್ಥೆ : ಜಿಲ್ಲಾಧಿಕಾರಿ

ಕರ್ನಾಟಕ ಸಿ.ಇ.ಟಿ. ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆ.1ರಂದು ಕೆ.ಎಸ್.ಆರ್.ಟಿ.ಸಿ.ಬಸ್ ವ್ಯವಸ್ಥೆ : ಜಿಲ್ಲಾಧಿಕಾರಿ 
ಕಾಸರಗೋಡು, ಜು. 31: ಕರ್ನಾಟಕ ಸಿ.ಇ.ಟಿ. ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆ.1ರಂದು ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 
                             ಅಂದು ಬೆಳಗ್ಗೆ 5.30ಕ್ಕೆ ಕಾಞಂಗಾಡಿನಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ಕೆ.ಎಸ್.ಟಿ.ಪಿ. ರಸ್ತೆ ಮೂಲಕ ಚಂದ್ರಗಿರಿ ರೂಟ್ ನಲ್ಲಿ, ಒಂದು ಬಸ್ ರಾಷ್ಟ್ರೀಯ ಹೆದ್ದಾರಿ ಮಾವುಂಗಾಲ್ ಹಾದಿಯಾಗಿಯೂ, ಕಾಸರಗೋಡಿನಿಂದ 5 ಬಸ್ ಗಳೂ ಸಂಚಾರ ನಡೆಸಲಿವೆ. ಜಿಲ್ಲೆಯಿಂದ 340 ಮಂದಿ ವಿದ್ಯಾರ್ಥಿಗಳು ಆ.1ರಂದು ಪರೀಕ್ಷೆಗೆ ಹಾಜರಾಗುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

Comments