- Get link
- X
- Other Apps
- Get link
- X
- Other Apps
ಗುಡ್ ನ್ಯೂಸ್.. ಬಾಬಾ ರಾಮದೇವ್ ಅವರ ಕೊರೊನಾ ಔಷಧಿ ಸಂಪೂರ್ಣ ಯಶಸ್ವಿ.. ಬೆಲೆ ಎಷ್ಟು ಗೊತ್ತಾ?
ಒಂದು ಎರಡು ದೇಶವಲ್ಲಾ ಸಂಪೂರ್ಣ ಭೂಮಿಯನ್ನೇ ಕಾಡುತ್ತಿರುವ ಕೊರೊನಾಗೆ ಭಾರತೀಯರಿಂದಲೇ ಮುಕ್ತಿ ದೊರೆಯುವ ಸಮಯ ಬಂದಿದೆ.. ಇಂದು ಭಾರತೀಯ ಪತಂಜಲಿ ಸಂಸ್ಥೆ ನಿಜಕ್ಕೂ ಸಿಹಿ ಸುದ್ದಿ ನೀಡಿದೆ.. ಹೌದು ವಿವಿಧ ದೇಶಗಳಲ್ಲಿ ಅನೇಕ ಔಷಧಿ ಕಂಡುಹಿಡಿದರೂ ಸಹ ಪ್ರತಿಫಲ ಮಾತ್ರ ಸಂಪೂರ್ಣವಾಗಿ ದೊರೆಯಲಿಲ್ಲ… ಇದೀಗ ನಮ್ಮ ದೇಶದಲ್ಲಿಯೇ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಔಷಧಿಯನ್ನು ಸಿದ್ಧ ಪಡಿಸಿದ್ದು ಔಷಧಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಬಾಬಾ ರಾಮದೇವ್ ಅವರು ಸುದ್ದಿಗೋಷ್ಟಿ ಕರೆದು ಅಧಿಕೃತವಾಗಿ ಔಷಧಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ..
ಈ ಬಗ್ಗೆ ಮಾತನಾಡಿದ ಯೋಗ ಗುರು ಬಾಬಾ ರಾಮದೇವ್ ಅವರು ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿದ್ದಾರೆ.. ಕೊರೊನಿಲ್ ಮತ್ತು ಸಸ್ವರಿ ಹೆಸರಿನ ಎರಡು ಔಷಧಿ ಸೇವಿಸಿದರೆ 7 ದಿನದಲ್ಲಿ ಕೊರೊನಾ ಗುಣವಾಗುತ್ತದೆ. ರೋಗಿಗಳು ಸಂಪೂರ್ಣವಾಗಿ ಗುಣವಾಗುತ್ತಾರೆ ಎಂದು ನೂರರಷ್ಟು ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ..
ಜೈಪುರದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೊತೆ ಪತಂಜಲಿ ಸಂಶೋಧನಾ ಕೇಂದ್ರ ಜಂಟಿಯಾಗಿ ಕ್ಲಿನಿಕಲ್ ಟ್ರಯಲ್ ಮಾಡಿದೆ.. ಈ ಔಷಧಿಯಿಂದ ರೋಗಿಗಳು 3 ರಿಂದ 7 ದಿನದ ಒಳಗೆ ಶೇ.100ರಷ್ಟು ಗುಣಮುಖರಾಗುತ್ತಾರೆ ಎಂದು ಸಂಸ್ಥೆ ತಿಳಿಸಿದೆ. ಎರಡು ಕ್ಲಿನಿಕಲ್ ಟ್ರಯಲ್ ಮಾಡಿದ್ದೇವೆ. ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯೋಗ ಮಾಡಿದ್ದೇವೆ. 280 ರೋಗಿಗಳಿಗೆ ನೀಡಿದ್ದು, ಔಷಧಿ ಪಡೆದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಕೊರೊನಾ ಕಿಟ್ ಬೆಲೆ 545 ರೂ. ಇದ್ದು, 30 ದಿನಗಳ ಕಾಲ ಬಳಸಬಹುದು. ಸದ್ಯಕ್ಕೆ ಈ ಔಷಧಿ ಎಲ್ಲಿಯೂ ಸಿಗುವುದಿಲ್ಲ. ಒಂದು ವಾರದಲ್ಲಿ ಪತಂಜಲಿ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೊರೊನಾ ಕಿಟ್ ವಿತರಣೆ ಸಂಬಂಧ ಒಂದು ಅಪ್ಲಿಕೇಶನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.. ಪತಂಜಲಿ ಸಂಸ್ಥೆ ಕಂಡುಹಿಡಿದಿರುವ ಔಷಧಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಿಲ್ಲ.. ಬದಲಾಗಿ ಕೊರೊನಾವನ್ನೇ ಸಂಪೂರ್ಣವಾಗಿ ಗುಣಪಡಿಸುತ್ತದೆ. ಈಗಾಗಲೇ ಶೇ.69 ರಷ್ಟು ರೋಗಿಗಳು 6 ದಿನದಲ್ಲಿ ಗುಣವಾಗಿದ್ದಾರೆ. ನಾವು ಸಂಶೋಧನೆ ಮಾಡಿಯೇ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಪ್ರಶ್ನೆಗಳಿಗೂ ನಮ್ಮ ಬಳಿ ಉತ್ತರವಿದೆ ಎಂದಿದ್ದಾರೆ..
ಈ ಬಗ್ಗೆ ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಮಾತನಾಡಿ ಕೋವಿಡ್ 19 ಹೆಚ್ಚಾಗುತ್ತಿದ್ದಾಗಲೇ ನಾವು ಅದಾಗಲೇ ವಿಜ್ಞಾನಿಗಳ ತಂಡವನ್ನು ನೇಮಕ ಮಾಡಿದ್ದೆವು. ದೇಹದ ಯಾವ ಕಾಂಪೌಂಡ್ಸ್ ವೈರಸ್ ವಿರುದ್ಧ ಹೋರಾಡಿ ದೇಹದಲ್ಲಿ ಹರಡುವಿಕೆಯನ್ನು ನಿಲ್ಲಿಸಬಹುದು ಎಂಬುದನ್ನು ನಾವು ಮೊದಲು ಅಧ್ಯಯನ ನಡೆಸಿ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ನಾವು ನೀಡಿದ ಔಷಧಿ ಸೇವಿಸಿದ ಪಾಸಿಟಿವ್ ರೋಗಿಗಳ ಪರೀಕ್ಷಾ ವರದಿ 3-4 ದಿನದಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ ಆಯುರ್ವೇದ ಮೂಲಕ ಕೋವಿಡ್ 19 ಗುಣಪಡಿಸಬಹುದು. ಮುಂದಿನ 4-5 ದಿನದಲ್ಲಿ ಈ ಅಧ್ಯಯನಕ್ಕೆ ಸಂಬಂಧಿಸಿದ ಡೇಟಾವನ್ನು ರಿಲೀಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ..
- Get link
- X
- Other Apps
Comments
Post a Comment