- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಮೂವರಿಗೆ ಕೋವಿಡ್ ನೆಗೆಟಿವ್ ಆಗಿದೆ. ಪಾಸಿಟಿವ್ ಆದವರೆಲ್ಲರೂ ವಿದೇಶಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್ ನಿಂದ ಆಗಮಿಸಿದ್ದ ಪನತ್ತಡಿ ಗ್ರಾಮಪಂಚಾಯತ್ ನಿವಾಸಿ 35 ವರ್ಷದ ವ್ಯಕ್ತಿ, ವಲಿಯಪರಂಬ ಪಂಚಾಯತ್ ನಿವಾಸಿ 48 ವರ್ಷದ ಮಹಿಳೆ, ಶಾರ್ಜಾದಿಂದ ಬಂದಿದ್ದ ವಲಿಯಪರಂಬ ಗ್ರಾಮಪಂಚಾಯತ್ ನಿವಾಸಿ 32 ವರ್ಷದ ಉದುಮಾ ಗ್ರಾಮಪಂಚಾಯತ್ ನಿವಾಸಿ, ಉದುಮಾ ಗ್ರಾಮಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿ, ಕಾಞಂಗಾಡ್ ನಗರಸಭೆ ವ್ಯಾಪ್ತಿಯ 40 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ 25 ವರ್ಷದ ಅಜಾನೂರು ಗ್ರಾಮಪಂಚಾಯತ್ ನಿವಾಸಿ ಮಹಿಳೆ, ಚೆಮ್ನಾಡ್ ಗ್ರಾಮಪಂಚಾಯತ್ ನ 45 ವರ್ಷದ ವ್ಯಕ್ತಿಗೆ ಸೋಂಕು ಖಚಿತಗೊಂಡಿದೆ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮೂವರಿಗೆ ಕೋವಿಡ್ ನೆಗೆಟಿವ್ ಆಗಿದೆ. ಕುವೈತ್ ನಿಂದ ಬಂದಿದ್ದ ಕಾಞಂಗಾಡ್ ನಗರಸಭೆ ವ್ಯಾಪ್ತಿಯ 34 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ 26 ವರ್ಷದ ಮಹಿಳೆ, ಖತಾರ್ ನಿಂದ ಆಗಮಿಸಿದ್ದ ಪಡನ್ನ ಗ್ರಾಮಪಂಚಾಯತ್ ನಿವಾಸಿ ಮಹಿಳೆಗೆ ಕೋವಿಡ್ ಪಾಸಿಟಿವ್ ಆಗಿದೆ.
ಜಿಲ್ಲೆಯಲ್ಲಿ 5464 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5082 ಮಂದಿ, ಸಾಸ್ಥಿಕ ನಿಗಾದಲ್ಲಿ 382 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ 552 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 100 ಮಂದಿ ಸ್ಯಾಂಪಲ್ ನೂತನವಾಗಿ ತಪಾಸಣೆಗೆ ಕಳುಹಿಸಲಾಗಿದೆ. 235 ಮಂದಿಯ ಫಲಿತಾಂಶ ಲಭಿಸಿಲ್ಲ.
- Get link
- X
- Other Apps
Comments
Post a Comment