ಮಂಜೇಶ್ವರ ಚೆಕ್ ಪೋಸ್ಟ್ ಮೂಲಕ 179 ಮಂದಿ ಕೇರಳ ಪ್ರವೇಶ
 
ಇತರ ರಾಜ್ಯಗಳಿಂದ ಸೋಮವಾರ ಮಂಜೇಶ್ವರ ಚೆಕ್ ಪೋಸ್ಟ್ ಮೂಲಕ 179 ಮಂದಿ ಕೇರಳ ಪ್ರವೇಶ
ಮಾಡಿದ್ದಾರೆ. ಈ ವರೆಗೆ ಈ ಚೆಕ್ ಪೋಸ್ಟ್ ಮೂಲಕ ಒಟ್ಟು 31706 ಮಂದಿ ಕೇರಳಕ್ಕೆ ಬಂದಿದ್ದಾರೆ. 55666 ಮಂದಿಗೆ ಪಾಸ್
ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯವರಾದ 9042 ಮಂದಿ ಮಂಜೇಶ್ವರ ಚೆಕ್ ಪೋಸ್ಟ್ ಮೂಲಕ ಊರಿಗೆ
ಬಂದಿದ್ದಾರೆ. 16825 ಮಂದಿಗೆ ಪಾಸ್ ಮಂಜೂರಾಗಿದೆ.
ವೆಳ್ಳರಿಕುಂಡ್ ತಾಲೂಕು ದೂರು ಪರಿಹಾರ ಅದಾಲತ್
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಆನ್ ಲೈನ್
ದೂರು ಪರಿಹಾರ ಅದಾಲತ್ ಅಂಗವಾಗಿ ಸೋಮವಾರ ವೆಳ್ಳರಿಕುಂಡ್ ತಾಲೂಕು ಮಟ್ಟದ ಅದಾಲತ್ ಜರುಗಿತು. ಒಟ್ಟು 8
ದೂರುಗಳನ್ನು ಈ ವೇಳೆ ಪರಿಶೀಲಿಸಲಾಗಿದೆ. 6 ದೂರುಗಳನ್ನು ಇಲಾಖಾ ಮಟ್ಟದಲ್ಲಿ ಪರಿಹರಿಸಲಾಗಿದೆ. 2 ದೂರುಗಳಲ್ಲಿ
ಜಿಲ್ಲಾಧಿಕಾರಿ ನೇರ ಹಸ್ತಕ್ಷೇಪ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್,
ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂಞಿಕಣ್ಣನ್, ಸಹಾಯಕ ತಹಸೀಳ್ದಾರ್ ಭಾಸ್ಕರನ್
ಉಪಸ್ಥಿತರಿದ್ದರು. ವೆಳ್ಳರಿಕುಂಡ್ ತಾಲೂಕು ಮಟ್ಟದ ಮುಂದಿನ ಆನ್ ಲೈನ್ ಅದಾಲತ್ ಜು.18ರಂದು ನಡೆಯಲಿದ್ದು, ಈ ಸಂಬಂಧ
ಅರ್ಜಿಗಳನ್ನು ಜು.13ರಂದು ರಾತ್ರಿ 12 ಗಂಟೆ ವರೆಗೆ ಸಲ್ಲಿಸಬಹುದು.

Comments