ಲೋಕ್ ಡೌನ್.ಕಂಗೆಟ್ಟ ಕೃಷಿಕರಿಗೆ ಸಹಾಯ ಮಾಡುವಂತೆ ಮಾಜಿ ಪಂಚಾಯತ್ ಅಧ್ಯಕ್ಷರಿಂದ ಮನವಿ

ಲೋಕ್ ಡೌನ್.ಕಂಗೆಟ್ಟ ಕೃಷಿಕರಿಗೆ ಸಹಾಯ ಮಾಡುವಂತೆ ಮಾಜಿ ಪಂಚಾಯತ್ ಅಧ್ಯಕ್ಷರಿಂದ ಮನವಿ
*******************
ಲೋಕ್ ಡೌನ್ ಕೃಷಿಕರ 
 ಪಾಲಿಗೆ ಶಾಪವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸರಕಾರ ಅತ್ತಕಡೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದ್ದು ಅವರ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜ್ಯಾರಿಗೆ ತರಬೇಕಾಗಿದೆ. ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ತರಕಾರಿ ಬೆಳೆಯುವಂತೆ ಸೂಚಿಸಿರುವ ಸರಕಾರ ಕೃಷಿಕರ ಕಷ್ಟ ನಷ್ಟಗಳ ಬಗ್ಗೆ ಗಮನ ಹರಿಸದಿರುವುದು ವಿಷಾಧನೀಯ. ಕೃಷಿ ನಮ್ಮ ದೇಶದ ಬೆನ್ನೆಲುಬು. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಕೃಷಿಯ ಮಹತ್ವವೂ ಹೆಚ್ಚಿದ್ದು ಕೃಷಿಕರಿಗೆ ನೆರವಾಗುವ ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ. 
ಅಡಕೆ ಕೃಷಿಕರು  ತಮ್ಮ ಕೈಸೇರಿದ ಫಲವನ್ನು ಮಾರಾಟ ಮಾಡಲಾಗದೆ ಕಣ್ಣೀರಿಡುವಂತಾಗಿದೆ. ಇದೇ ಆದಾಯವನ್ನು ನಂಬಿ ಬದುಕುವ ಅವರ ಜೀವನ ಕಷ್ಟಕರವಾಗಿದೆ. ಮತ್ತೊದೆಡೆ  ತೋಟವನ್ನು ಬೇಸಗೆಯಲ್ಲಿ ರಕ್ಷಿಸುವ ಸಲುವಾಗಿ ಪ್ರತಿದಿನ ನೀರುಹಾಕಬೇಕು. ಆದರೆ ಪಂಪ್ ಹಾಳಾದರೆ ಇಲ್ಲವೇ ಪೈಪ್ ಮತ್ತಿತರ ವಸ್ತುಗಳು ಲಭ್ಯತೆಯ ಕೊರತೆ ಇರುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.  

 ಮಹಾಳಿ ಮುಂತಾದ ರೋಗಗಳಿಂದ ಕೃಷಿಯನ್ನು ಸಂರಕ್ಷಿಸಲು ಮೈಲ್ ಸುತ್ತು, ರಾಸಾಯನಿಕ ಗೊಬ್ಬರಗಳನ್ನು ಕೃಷಿ ಇಲಾಖೆಯಿಂದ ಕೃಷಿ ಭವನದ ಮೂಲಕ ಉಚಿತವಾಗಿ ನೀಡುತ್ತಿತ್ತು. ಆದರೆ ಇಂದು ಕೃಷಿ ಭವನವೂ ಮುಚ್ಚಿದ ಸ್ಥಿತಿಯಲ್ಲಿದೆ. ಇದು ಇನ್ನಷ್ಟು ಸಮಸ್ಯೆಯಾಗಿ ಕೃಷಿಕರನ್ನು ಕಾಡುತ್ತಿದ್ದು ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಲು ಸರಕಾರ ಮುಂದಾಗಬೇಕಾಗಿದೆ ಎಂದು ಕೃಷಿಕ, ಬೆಳ್ಳೂರು ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್  ಅವರು ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿ ದ್ದಾರೆ.   ಗ್ರಾಮ ಪಂಚಾಯತ್ ಗಳ ಮುಖಾಂತರ ಕೃಷಿಕರ ಬೇಡಿಕೆಗಳಿಗೆ ಸ್ಪಂದಿಸುವುದು ಮತ್ತು ಕೃಷಿ ಸಂಬಂಧಿಸಿದ ಪರಿಕರಗಳ ಅಂಗಡಿಗಳನ್ನು ತೆರೆಯುವಂತೆ 
ಸೂಕ್ತ ಮಾರಟದ ವ್ಯವಸ್ಥೆ,  ಮಾತ್ರವಲ್ಲದೆ  ಕೃಷಿಕರ ಸಂಕಷ್ಟವನ್ನು ಅರ್ಥೈಸಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ವಿದ್ಯುತ್ ಉಚಿತವಾಗಿ ನೀಡುವಂತೆ ಅವರು ಮನವಿಯಲ್ಲಿ ಕಳಕಳಿಯಿಂದ ವಿನಂತಿಸಿದ್ದಾರೆ.      
                                            
*ಕಲ್ಲಗ ಚಂದ್ರಶೇಖರ ರಾವ್ ಕೃಷಿಕರು ಬೆಳ್ಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು*

Comments