- Get link
- X
- Other Apps
- Get link
- X
- Other Apps
ಕವನದ ಶೀರ್ಷಿಕೆ...ಕೊರೋನಾ
ವೈರಸ್ ಪಾಠ : ಶಾಂತಾ ಕುಂಟಿನಿ ಶಕುಂತಲಾ
ಅಹಂಕಾರ ತೋರಿಸಿದವಗೆ ಪಾಠ ಕಲಿಸುತ್ತಿದೆ ಈ ಕೊರೋನಾ..
ಜಾತಿ ಜಾತಿಯೆಂದು ಹೊಡೆದಾಡಿಕೊಂಡವರಿಗೆ ಪಾಠ
ಕಲಿಸುತ್ತಿದೆ ಈ ಕೊರೋನಾ
ಹಣ ಹಣವೆಂದು ಓಡಾಡಿ ಮೈಯ ಮರೆತವಗೆ ಪಾಠ ಕಲಿಸುತ್ತಿದೆ ಈ ಕೊರೋನಾ
ಅನ್ಯಾಯಗಳ ಮಾಡುತ್ತಾ ಹಿಂಸೆ
ಯನ್ನು ತೋರಿದವಗೆ ಪಾಠ
ಕಲಿಸುತ್ತಿದೆ ಈ ಕೊರೋನಾ
ಆಹಾರ ಇದೆಯೆಂದು ಆಡಂಬರವ ಮೆರೆದು ಆಹಾರ
ಚೆಲ್ಲಿದವಗೆ ಪಾಠ ಕಲಿಸುತ್ತಿದೆ ಈ ಕೊರೋನಾ
ಗುರು ಹಿರಿಯರೆಂದೆಣಿಸದೆ ಮನೆಯಿಂದ ಹೊರ ತಿರುಗಿದವಗೆ ಪಾಠ ಕಲಿಸುತ್ತಿದೆ ಈ ಕೊರೋನಾ
ಹಿತ್ತಲ ಗಿಡ ಮದ್ದುಗಳ ನಿರ್ಲಕ್ಷಿಸಿ ಅಸಡ್ಡೆ ವಹಿಸಿದ್ದಕ್ಕೆ
ಪಾಠ ಕಲಿಸುತ್ತಿದೆ ಈ ಕೊರೋನಾ
ಪ್ರಕೃತಿಯ ಮೇಲೆ ದೌರ್ಜನ್ಯ ವೆಸಗಿ ಮರ ಗಿಡಗಳ ನಾಶ ಮಾಡಿದ್ದಕ್ಕೆ ಪಾಠ ಕಲಿಸುತ್ತಿದೆ ಈ ಕೊರೋನಾ
ಒಟ್ಟಿನಲಿ ಎಲ್ಲರೂ ಮನೆಯೊಳಗೇ ಇರುವಂತೆ ಮಾಡಿ ಪಾಠ ಕಲಿಸುತ್ತಿದೆ ಈ ಕೊರೋನಾ
ಕವನ ರಚನೆ.. ಶಾಂತಾ ಕುಂಟಿನಿ ಶಕುಂತಲಾ
- Get link
- X
- Other Apps
Comments
Post a Comment