ಹೊರ ನೋಟ : ಸತ್ಯಾತ್ಮ.ಕುಂಟಿನಿ

ಹೊರ ನೋಟ : ಸತ್ಯಾತ್ಮ.ಕುಂಟಿನಿ
ಹಕ್ಕಿಯೊಂದು ಸಂತಸದಿ ಹಾರಾಡುತ್ತಿತ್ತೆಂದು 
ತಿಳಿದ ನೋಟಗಾರ , ಆದರೆ ....
ಅದರ ಕಷ್ಟ ಅದಕ್ಕೆ ಮಾತ್ರ ತಿಳಿದಿತ್ತು 
ಓ ಓದುಗಾರ ......

ಪ್ರತಿ ದಿನವು ದುಃಖದಾ ಕಣ್ಣೀರ ಇಡಲು 
ಆದರೆ ಅದ ಕಂಡ ನೋಟಗಾರ ತಿಳಿದಿದ್ದು 
ಸಂತಸದಿ ಕಣ್ಣೀರ ಇಡುತ್ತಿತ್ತೆಂದು
ಆದರೆ , ಅದು ದುಃಖ ದಿಂಬೆಂದು 
ಹೊಗಿತ್ತು ಓ ಓದುಗಾರ ....

ಇದ ತಿಳಿದ ಓದುಗಾರ ಆ ನೋಟಗಾರನಿಗೆ
ಮನವರಿಕೆಯ ಮಾಡ ಹೊರಟ ಆದರೆ 
ಆ ನೋಟಗಾರನ ಬದುಕು ಹಕ್ಕಿಯಂತ್ತಿತ್ತು 
ಇದಕ್ಕೆಲ್ಲ ಸೂತ್ರದಾರ ಆ ಕೃಷ್ಣ ನಿನ್ನ 
ಪರಿಯ ಬಲ್ಲವರಾರೋ ಎಂದು ಬರೆದ 
ಈ ಓದುಗಾರ ...
                       ‌‌‌‌        *- ಸತ್ಯಾತ್ಮ.ಕುಂಟಿನಿ*

Comments