- Get link
- X
- Other Apps
- Get link
- X
- Other Apps
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಒಂದು ಚಿಕ್ಕ ಜಿಲ್ಲೆಯ ಕತೆ
ಇಂದು೨೦-೪-೨೦೨೦ ಕಾಸರಗೋಡು ಜಿಲ್ಲೆಯ ಸರಕಾರಿ ಆರೋಗ್ಯ ರಂಗದ ವೈದ್ಯರಿಗೂ , ದಾದಿಯರಿಗೂ ಆರೋಗ್ಯರಂಗದ ಇತರ ನೌಕರರಿಗೂ ಅತ್ಯಂತ ಹೆಮ್ಮೆಯನ್ನುಂಟುಮಾಡಿದ ದಿನ.
ಹಲವಾರು ಸಮಸ್ಯೆಗಳನ್ನೆದುರಿಸುತ್ತಿರುವ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾರಂಗಕ್ಕೆ ಹಿರಿಮೆಯನ್ನು ತಂದುಕೊಟ್ಟ ದಿನ.
೧೬೯ ಕೋವಿಡ್ ರೋಗಿಗಳಲ್ಲಿ ೧೩೨ ಮಂದಿಗೆ ಚಿಕಿತ್ಸೆ ನೀಡಿದ ಜಿಲ್ಲೆಯ ೨ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ರೋಗಿಗಳು ಮಾತ್ರ ಇನ್ನು ಬಿಡುಗಡೆಯಾಗಲು ಬಾಕಿ ಉಳಿದಿದ್ದು ಇಲ್ಲಿನ ಚಿಕಿತ್ಸೆಯ ಗುಣಮಟ್ಟ ಪ್ರಪಂಚದ ಗಮನಸೆಳೆದಿದೆ.
೮೯ ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ೮೨ ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನು ಕೇವಲ ೭ ಮಂದಿ ಮಾತ್ರ ಬಿಡುಗಡೆಯಾಗಲು ಬಾಕಿ ಉಳಿದಿದ್ದಾರೆ ಹೀಗೆ ೯೨% ರೋಗಿಗಳು ಸಂತೋಷದಿಂದ ಆಸ್ಪತ್ರೆಯಿಂದ ಗುಣಮುಖಹೊಂದಿ ತೆರಳಿದರು.
ಕಾಞ್ಞಂಗಾಡಿನಲ್ಲಿರುವ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ೪೩ ಮಂದಿ ರೋಗಿಗಳಲ್ಲಿ ೯ ಮಂದಿ ಮಾತ್ರ ಬಿಡುಗಡೆಗೊಳ್ಳಲು ಬಾಕಿಯಾಗಿದ್ದಾರೆ. ಈಗಾಗಲೇ ಸುಮಾರು ೮೦ % ರೋಗಿಗಳು ಇಲ್ಲಿಂದಲೂ ಗುಣಮುಖರಾದಂತಾಯಿತು.
ಆರೋಗ್ಯಸೌಕರ್ಯಗಳಲ್ಲಿ
ಪರಾವಲಂಬನೆಯ ನಡುವೆಯೂ ಜಿಲ್ಲೆಯಲ್ಲಿ ೧೩೨ ಕೋವಿಡ್ ರೋಗಿಗಳ ಸಂಖ್ಯೆ ಈಗ ಕೇವಲ ೧೬ ಕ್ಕೆ ತಲಪಿದೆಯೆನ್ನುವುದು ಕೇರಳದ ಯಾಕೆ ಪ್ರಪಂಚದ ಆರೋಗ್ಯರಂಗವನ್ನೇ ಅಚ್ಚರಿಗೊಳಿಸುವ ಹಿರಿಮೆಯಾಗಿದೆ.
ಕೋವಿಡ್ ಕಾಲದಲ್ಲಿ ಪ್ರಪಂಚದಲ್ಲೇ ಯಾವುದೇ ಒಂದು ಆಸ್ಪತ್ರೆಯಲ್ಲಿ ಜನರಲ್ ವಾರ್ಡಿನಿಂದ ೯೦% ಕ್ಕಿಂತ ಹೆಚ್ಚುರೋಗಿಗಳು ಯಾವುದೇ ತೊಂದರೆಯಿಲ್ಲದೆ ಬಿಡುಗಡೆಹೊಂದಿದ ಇತಿಹಾಸವಿಲ್ಲ.
ಇದರ ಹಿನ್ನೆಲೆಯಲ್ಲಿ ನೋಡಿದಾಗ ಸಾಮಾನ್ಯಸೌಕರ್ಯಗಳಿರುವ ಜನರಲ್ ವಾರ್ಡುಗಳನ್ನಿರಿಸಿಕೊಂಡು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಕಾಸರಗೋಡು ಜನರಲ್ ಆಸ್ಪತ್ರೆಯ ವಿಜಯಗಾಥೆ ಮಹತ್ವವನ್ನು ಪಡೆಯುತ್ತದೆ.
ಅತಿವಿಶೇಷ (ಸೂಪರ್ ಸ್ಪೆಶಾಲಿಟಿ) ಸೌಕರ್ಯವಿಲ್ಲದ ಜಿಲ್ಲೆಯಲ್ಲಿ ಅಒಘಾತ ಚಿಕಿತ್ಸಾಕೇಂದ್ರ (ಟ್ರಾಮಾಕೇರ್ ಸೆಂಟರ್)
ಗಳಿಲ್ಲದ ,
ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ನರರೋಗತಜ್ಞ (ನ್ಯೂರಾಲಜಿಸ್ಟ್) ಮೂತ್ರಜನಕನಾಳತಜ್ಞ (ನೆಫ್ರಾಲಜಿಸ್ಟ್) ಅರ್ಬುದರೋಗತಜ್ಞ ( ಓನ್ಕಾಲಜಿಸ್ಟ್) ಇಲ್ಲದ ಜಿಲ್ಲೆಯಲ್ಲಿ,
ಗಡಿಮುಚ್ಚಿದರೆ ರೋಗಿಗಳು ಪ್ರಾಣ ಕಳೆದುಕೊಳ್ಳುವ ಜಿಲ್ಲೆಯಲ್ಲಿ ಪರಾವಲಂಬನೆಯ ನಡುವೆಯೂ ಮೈಮುರಿದು ದುಡಿದ ಇಲ್ಲಿನ ಆರೋಗ್ಯರಂಗದ ಕಾರ್ಯಕರ್ತರಿಗೆ ಬೊಟ್ಟುಮಾಡಿ ತೋರಿಸಲು ಇರುವ ಸಾಧನೆ ಇದಾಗಿದೆ.
- Get link
- X
- Other Apps
Comments
Post a Comment