ಕೊರೊನಾ ವಿಶೇಷ - ಇರುವೆ ಚಟ್ನಿ ಬಗ್ಗೆ ಒಂದಿಷ್ಟು ಕೇಳಿ!!!....

ಕೊರೊನಾ ವಿಶೇಷ - ಇರುವೆ ಚಟ್ನಿ ಬಗ್ಗೆ ಒಂದಿಷ್ಟು ಕೇಳಿ!!!.... 
  ವಿಶ್ವವೇ ಮಾರಕ          ಕೊರೋನಾದಿಂದ ಇಡೀ ಲೋಕವೇ ತತ್ತರಿಸಿದೆ. ಕೊರೋನಾ ತಡೆಯ ನಿಟ್ಟಿನಲ್ಲಿ ಹೇರಲಾದ ಲಾಕ್‍ಡೌನ್ ಜನಜೀವನವನ್ನು ತೀವ್ರ ರೀತಿಯಲ್ಲಿ ಬಾಧಿಸುತ್ತಿದೆ. ಎಲ್ಲ ವಲಯಗಳೂ ಸ್ಥಬ್ದವಾಗಿ ಜನರು ಆಹಾರಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಮನೆಯಲ್ಲೇ ಕುಳಿತು ಗಂಜಿ ಬೇಯಿಸಿ ಕುಡಿಯೋಣ ಎಂದರೆ ಪದಾರ್ಥಕ್ಕೆ ಏನು ಎಂಬ ಚಿಂತೆ ಕಾಡಿದೆ. ಖರ್ಚಿಲ್ಲದೆ ಸ್ವಾದಿಷ್ಟವಾದ ಚಟ್ನಿಯನ್ನು ಚಪ್ಪರಿಸಿ ಗಂಜಿ ಕುಡಿಯುವ ವಿಧಾನವನ್ನು ಕಾಸರಗೋಡು ಜಿಲ್ಲೆಯ ಈ ಕಲಾವಿದ ಹೇಳಿಕೊಡುತ್ತಿದ್ದಾರೆ. ಅಯ್ಯೇ...... ಛೀ....... ಥೂ.... ಅನ್ನಬೇಡಿ, ಸ್ವಲ್ಪ ಕೇಳಿ...
            "ನಿಮ್ಮ ಮನೆ ಹಿತ್ತಿಲಿನ ಮರ, ಗಿಡಗಳಲ್ಲಿ ಕೆಂಬಣ್ಣದ ಇರುವೆಗಳು ಗೂಡು ಕಟ್ಟಿವೆಯೇ? ಹಾಗಿದ್ದಲ್ಲಿ ಅದು ಇನ್ನು ಅಗತ್ಯಕ್ಕೆ ಬರುವುದು. ರುಚಿಕರವಾಗಿ ಗಂಜಿ ಕುಡಿಯಲು ಇನ್ನು ಒಣಮೀನು, ಮಾಂಸ ಅಗತ್ಯವಿಲ್ಲ. ಈ ಇರುವೆಯನ್ನು ಗೂಡು ಸಮೇತ ತೆಗೆದು ಚಟ್ನಿ ಪುಡಿ ಮಾಡಿದಲ್ಲಿ ಅಷ್ಟೂ ಸ್ವಾದ" ಎನ್ನುತ್ತಾರೆ ಶ್ರೀಲೇಶ್ ಎಂಬ ಕಾಸರಗೋಡು ಜಿಲ್ಲೆಯ ಪರಪ್ಪ ನಿವಾಸಿಯಾಗಿರುವ ಈ ಅದ್ಭುತ ಕಲಾವಿದ. ಕೇಳುವಾಗ ಅಷ್ಟೊಂದು ಹಿತವಾಗದಿದ್ದರೂ ಗಾಂಧಾರಿ ಮೆಣಸು, ಉಪ್ಪು ಬೆರೆಸಿ ಇರುವೆಯನ್ನು ಹುರಿದು ಪುಡಿಮಾಡಿದ ಮಿಶ್ರಣದೊಂದಿಗೆ ಬೆರೆಸಿ ಚಟ್ನಿಯನ್ನು ಸೇವಿಸಿ ನೋಡಿ.... ವಾಹ್... ಎನ್ನುತ್ತಾರೆ ಈ 28 ರ ತರುಣ.
             10 ರಷ್ಟು ನೆಲದೀಪಗಳನ್ನು ಒಂದರ ಮೇಲೊಂದರಂತೆ ಅಟ್ಟಿಯಿರಿಸಿ "ದೀಪ ನೃತ್ಯ" ಎಂಬ ಅದ್ಭುತ ಕಲೆಯನ್ನು ಪ್ರದರ್ಶಿಸಿ ಈಗಾಗಲೇ ರಾಷ್ಟ್ರೀಯ ಗಮನ ಸೆಳೆದಿರುವ ಈತ ಈ ನೃತ್ಯದಲ್ಲಿ ವಿಶ್ವ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ನೂರಾರು ವೇದಿಕೆಗಳಲ್ಲಿ, ಟಿವಿ ಚ್ಯಾನೆಲ್‍ಗಳಲ್ಲಿ ಕಲಾ ಪ್ರದರ್ಶನ ನೀಡಿರುತ್ತಾರೆ. ತನ್ನ ಪೂರ್ವಿಕರಿಂದ ಇರುವೆ ಗೂಡಿನ ಔಷಧೀಯ ಗುಣಗಳ ಬಗ್ಗೆ ಅರಿತೆ ಎನ್ನುತ್ತಾರೆ. ಸುಮ್ಮನೆ ಇರುವೆ ಚಟ್ನಿಯನ್ನು ಪರೀಕ್ಷಿಸಿದಾಗ ಅತ್ಯಂತ ರುಚಿಕರ ಎನಿಸಿತು. ಮುಂದೆ ಮನೆ ಮಂದಿಯೂ ಇದನ್ನು ನೆಚ್ಚತೊಡಗಿದರು. ಸದ್ಯ ಇರುವೆ ಚಟ್ನಿ ತಮ್ಮ ಆಹಾರದ ಭಾಗವೇ ಆಗಿದೆ. "ಮರದಲ್ಲಿರುವ ಇರುವೆ ಸಮೇತ ಗೂಡುಗಳನ್ನು ತಂದು ಗೆರಸೆಯೊಂದರಲ್ಲಿ ಹಾಕಿ ಕಸ ಬೇರ್ಪಡಿಸಿದ ಬಳಿಕ ಮಣ್ಣಿನ ಮಡಕೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಉಪ್ಪು, ಮೆಣಸು ಬೆರೆಸಿ ಮಿಕ್ಸಿಯಲ್ಲಿ ಹುಡಿ ಮಾಡಬೇಕು. ಶುಂಠಿ, ಒಗ್ಗರಣೆ ಸೊಪ್ಪು ಹಾಕಿದಲ್ಲಿ ಮತ್ತಷ್ಟು ಸ್ವಾದಿಷ್ಟ" ಎನ್ನುತ್ತಾರೆ

Source : Ravi Naikapu

Comments