ಪ್ರಕೃತಿ : ಡಾ . ಸೌರಭ ಭಟ್

ಪ್ರಕೃತಿ 

ಸೂರ್ಯನು ಮೋಡಗಳ ನಡುವೆ ನಾಚಿರಲು..
ಗುಡುಗು ಸಿಡಿಲು ಘರ್ಷಿಸುತಿರಲು ..
ತಂಪಾದ ಗಾಳಿಯ ಸಿಹಿಯ ಅಪ್ಪುಗೆ ಇರಲು ..
ನನ್ನ ನಾ ಮರೆತು ಸ್ವರ್ಗವೇ ಧರೆಯೊಳಿರಲು


ಬಾನಿಂದ ಹಾನಿಯು ಭೂಮಿಗಿಳಿಯಲು ..
ಗಿಡ ಮರಗಳು ಚಿಗುರೊಡೆಯಲು ...
ಝುಳು ಝುಳು ನೀರು ಕುಣಿದಾಡಲು ..
ನನ್ನ ನಾ ಮರೆತು ಸ್ವರ್ಗವೇ ಧರೆಯೊಳಿರಲು

ಪ್ರಕೃತಿಯ ಸೌಂದರ್ಯ ಮನವನು ಆಕರ್ಷಿಸಲು ...
ಹಕ್ಕಿಗಳ ಕಲರವ ಕಿವಿಗೆ ಇಂಪ ನೀಡಲು 
ಸುವಾಸನೆ ಬೀರುವ ಹೂಗಳ ಕಂಪ ಸೂಸಲು ...
ನನ್ನ ನಾ ಮರೆತು ಸ್ವರ್ಗವೇ ಧರೆಯೊಳಿರಲು
 
ಅಂಬರದಿ ಚಂದ್ರ ಛಾಪು ಮೂಡಲು ..
ಸಪ್ತ ವರ್ಣದಿ ಕಂಗೊಳಿಸು ತಿರಲು ...
ನನ್ನ ಮನವು ಆನಂದದಿ ತೇಲಾಡಲು..
  ನನ್ನ ನಾ ಮರೆತು ಸ್ವರ್ಗವೇ ಧರೆಯೊಳಿರಲು..
                    
                 ರಚನೆ : ಡಾ . ಸೌರಭ ಭಟ್

Comments