ಬದಿಯಡ್ಕದಲ್ಲಿ ಕರ್ತವ್ಯ ನಿರತ ಪೊಲೀಸರ ಹಸಿವು ತಣಿಸಿದ ಸ್ಟೂಡೆಂಟ್ ಪೊಲೀಸ್ ತಂಡಬೆಳಗ್ಗಿನ ಉಪಾಹಾರ, ಮಜ್ಜಿಗೆ ನೀರು, ಸಿಹಿತಿಂಡಿ ವಿತರಣೆ

ಬದಿಯಡ್ಕದಲ್ಲಿ ಕರ್ತವ್ಯ ನಿರತ ಪೊಲೀಸರ ಹಸಿವು ತಣಿಸಿದ ಸ್ಟೂಡೆಂಟ್ ಪೊಲೀಸ್ ತಂಡ
ಬೆಳಗ್ಗಿನ ಉಪಾಹಾರ, ಮಜ್ಜಿಗೆ ನೀರು, ಸಿಹಿತಿಂಡಿ ವಿತರಣೆ
ಬದಿಯಡ್ಕ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬದಿಯಡ್ಕ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೊಲೀಸ್ ತಂಡದ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ನೀರು, ಮಜ್ಜಿಗೆನೀರು, ಬೆಳಗಿನ ಉಪಾಹಾರ ಹಾಗೂ ಸಿಹಿತಿಂಡಿಯನ್ನು ಹಂಚಲಾಯಿತು. ಶಾಲಾ ಅಧ್ಯಾಪಕರಾದ ಸಿಪಿಒ ಕೃಷ್ಣಯಾದವ್ ಅಗಲ್ಪಾಡಿ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಈಶ್ವರ ಮಾಸ್ತರ್ ಬದಿಯಡ್ಕ ನೇತೃತ್ವದಲ್ಲಿ ಎಸ್.ಪಿ.ಸಿ. ವಿದ್ಯಾರ್ಥಿಗಳು ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಅನೀಶ್ ಅವರಿಗೆ ಹಸ್ತಾಂತರಿಸಿದರು. ಕರ್ತವ್ಯ ನಿರತ ಪೊಲೀಸರು ವಿದ್ಯಾರ್ಥಿಗಳ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
ಬದಿಯಡ್ಕ ಪೇಟೆಯಲ್ಲಿ ಬೆಳಗ್ಗೆ ೧೧ರಿಂದ ೫ರ ತನಕ ದಿನಸಿ ಅಂಗಡಿಗಳು, ಬೇಕರಿ, ತರಕಾರಿ ಹಾಗೂ ಹಣ್ಣು ಮಾರಾಟದ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂದರ್ಭದಲ್ಲಿ ಪೊಲೀಸ್ ಠಾಣೆ, ಪ್ರಧಾನ ವೃತ್ತ, ಮೇಲಿನ ಪೇಟೆ ಹಾಗೂ ನಿರ್ಧಿಷ್ಟ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದಾರೆ.

Comments