ಮೋಹಿನಿಯೋ.. ಕಾಮಿನಿಯೋ : ರಚನ ರಾವ್

ಮೋಹಿನಿಯೋ.. ಕಾಮಿನಿಯೋ
ತಂಗಾಳಿಯು ಬೀಸುತಿರಲು
ನಾಯಿಯು ಉಳಿಡುತಿರಲು 
ಮನವು ಹೆದರಿ ನಡುಗುತಿರಲು 

ಕಾಣಲು ದೂರದಲಿ ಆಕೃತಿಯೊಂದು 
ಸಾಗಿದೆ ಹೆಜ್ಜೆಯನಿಕ್ಕುತ ಒಂದೊಂದು 
ಆಗಲೇ ಮೂಡುತಿರಲು ಚಿಂತೆಯೊಂದು 

ಮೋಹಿನಿಯೋ  ಕಾಮಿನಿಯೋ ತಿಳಿಯದಿರಲು 
ಹೃದಯ ಬಡಿತ ಹೆಚ್ಚಾಗಿರಲು 
ಗಂಟಲು ಪಸೆ ಒಣಗಿರಲು 

ಮುಂದೆ ಮುಂದೆ ಧಾವಿಸಿರಲು 
ಹೆದರಿ ಕಣ್ಣೀರು ಜಿನುಗುತಿರಲು 
ಹೃದಯಘಾತದ ಲಕ್ಷಣ ಕಾಣುತಿರಲು 

ಬಿಳಿ ಆಕೃತಿ ಸಮೀಪಿಸಿತ್ತು  
ಉದ್ದನೆಯ ಕೂದಲು ಹರಡಿತ್ತು 
ನೋಡಿದಾಗ ಬೆದರು ಗೊಂಬೆಯಾಗಿತ್ತು 

             ರಚನ ರಾವ್

Comments