- Get link
- X
- Other Apps
- Get link
- X
- Other Apps
ಕೃಷಿ ಉತ್ಪನ್ನಗಳನ್ನು ಖರೀದಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು: ಅಡ್ವ ಶ್ರೀಕಾಂತ್
--------------------------------------
ಲಾಕ್ ಡೌನ್ ಸಂದರ್ಭದಲ್ಲಿ ಅವನತಿಯ ಅಂಚಿನಲ್ಲಿರುವ ಕೃಷಿಕರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಹಕಾರಿ ಸಂಘ ಸಂಸ್ಥೆ ಗಳ ಮೂಲಕ ಅವಕಾಶ ಕಲ್ಪಿಸಬೇಕಾಗಿ , ಮುಖ್ಯಮಂತ್ರಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಮನವಿ ಮಾಡಿದ್ದಾರೆ.
ಅಡಿಕೆ, ತೆಂಗಿನಕಾಯಿ, ಕೊಬರಿ, ಕಾಳುಮೆಣಸು ಮುಂತಾದ ವಸ್ತುಗಳನ್ನು ಮರಾಠ ಮಾಡಲು ಯಾವುದೇ ವ್ಯವಸ್ಥೆ ಇಲ್ಲದೆ ಕೃಷಿಕರು ಸಂಕಷ್ಟದಲ್ಲಿದ್ದಾರೆ.
ಕೋಕೋ ಮತ್ತು ಅನಾನಸ್‌ಗೆ ಸೀಸನ್ ಕಾಲ. ಹೆಚ್ಚಿನ ರೈತರಿಗೆ ಅವುಗಳನ್ನು ಹಾಳಾಗದೆ ಇರಿಸಲು ಯಾವುದೇ ಸೌಲಭ್ಯಗಳಿಲ್ಲ. ಗೇರುಬೀಜ ಕೃಷಿಕರೂ ಬಿಕ್ಕಟ್ಟಿನಲ್ಲಿದ್ದಾರೆ. ಹೀಗೇ ಮುಂದುವರಿದರೆ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೇ ದೊಡ್ಡ ನಷ್ಟ ಉಂಟಾಗಬಹುದೆಂದು ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದ್ದಾರೆ -
ರಸಗೊಬ್ಬರ, ಕೀಟನಾಶಕ ಮೊದಲಾದವುಗಳಿಗೆ ಮಾರಾಟ ಮಾಡಲು ಅನುಮತಿ ಕಲ್ಪಿಸಿದ ಹಾಗೆ
ಕೋಕೋ, ಅಡಿಕೆ ಮತ್ತು ತೆಂಗಿನಕಾಯಿ, ಕೊಬರಿ ಯಂತಹ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಕ್ಯಾಂಪ್ಕೊದಂತಹ ಸಹಕಾರಿ ಸಂಸ್ಥೆಗಳಿಗೆ ಅನುಮತಿ ಕಲ್ಪಿಸಬೇಕು ಶ್ರೀಕಾಂತ್ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.
- Get link
- X
- Other Apps
Comments
Post a Comment