ಗಡಿಪ್ರದೇಶಗಳಲ್ಲಿ ಕನ್ಸ್ಯೂ ಮರ್ ಸ್ಟೋರ್ ಗಳ ಆರಂಭ


ಗಡಿಪ್ರದೇಶಗಳಲ್ಲಿ ಕನ್ಸ್ಯೂ ಮರ್ ಸ್ಟೋರ್ ಗಳ ಆರಂಭ

----------------------------------------------
ಕಾಸರಗೋಡು ಜಿಲ್ಲೆಯ ಗಡಿಪ್ರದೇಶಗಳಲ್ಲಿ ಸಹಕಾರಿ ಸಂಘಗಳ ಕನ್ಸ್ಯೂಮರ್ ಸ್ಟೋರ್ ಗಳು ಆರಂಭಗೊಳ್ಳಲಿದ್ದು,
ಈ ನಿಟ್ಟಿನಲ್ಲಿ ಆಹಾರ ಸಾಮಾಗ್ರಿಗಳ ರವಾನೆ ಶನಿವಾರ ಆರಂಭಗೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶ ಪ್ರಕಾರ ತ್ವರಿತಗತಿಯಲ್ಲಿ ಈ ಸಂಬಂಧ ಕ್ರಮ
ಕೈಗೊಳ್ಳಲಾಗಿದೆ. ಜಿಲ್ಲಾಧಕಾರಿ ಡಾ.ಡಿ.ಸಜಿತ್ ಬಾಬು ಈ ಸಂಬಂಧ ಮನವಿ ಸಲ್ಲಿಸಿದ್ದರು. ಮೊದಲ ಹಂತವಾಗಿ ಧವಸಧಾನ್ಯಗಳ
ಅಂಗಡಿಗಳು, ಎರಡನೇ ಹಂತದಲ್ಲಿ ಔಷಧದ ಅಂಗಡಿಗಳು ಆರಂಭಗೊಳ್ಳಲಿವೆ. ಮೊದಲ ಹಂತದ ಅಂಗವಾಗಿ ಕನ್ಸ್ಯೂಮರ್ ಫೆಡ್
ಅನಿವಾರ್ಯ ಧಾನ್ಯಗಳನ್ನು ಈ ಪ್ರದೇಶಗಳಿಗೆ ರವಾನಿಸಿದೆ. ಕನ್ಸ್ಯೂಮರ್ ಫೆಡ್ ನ ದಾಸ್ತಾನುಗೃಹಗಳಿಂದ ಇವನ್ನು ತರಲಾಗಿದೆ.
ಈ ಸಂಬಂಧ ಲಾರಿಗಳಲ್ಲಿ ರವಾನೆ ಮಾಡುವ ಪ್ರಕ್ರಿಯೆಗೆ ಕನ್ಸ್ಯೂ ಮರ್ ಫೆಡ್ ನಿರ್ದೇಶ ವಿ.ಕೆ.ರಾಜನ್ ಹಸುರು
ನಿಶಾನೆ ತೋರಿದರು. ವಲಯ ಸಹಾಯಕ ಪ್ರಬಂಧಕ ಪಿ.ವಿ.ಶೈಲೇಷ್ ಬಾಬು, ಸಹಕಾರಿ ಸಹಾಯಕ ರೆಜಿಸ್ತ್ರಾರ್ ಜಯಚಂದ್ರನ್
ರಾಜಗೋಪಾಲ್ ಅವರ ನೇತೃಥ್ವದಲ್ಲಿ ಧಾನ್ಯಗಳ ರವಾನೆ ನಡೆದಿದೆ.
ದಿನಸಿ ಅಂಗಡಿ ಮತ್ತು ಔಷಧದ ಅಂಗಡಿ ಈ ನಿಟ್ಟಿನಲ್ಲಿ ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ಅನಿವಾರ್ಯ ಸಾಮಾಗ್ರಿಗಳು ಇಲ್ಲಿ
ದೊರೆಯಲಿವೆ. ಗಡಿ ದಾಟದೇ ಜನತೆಗೆ ಸಾಮಾಗ್ರಿ, ಔಷಧ ಈ ಮೂಲಕ ಲಭಿಸಲಿದೆ.

 ಒಟ್ಟು 10 ಸ್ಥಳಗಳಲ್ಲಿ ಈ ಸಹಕಾರಿ ಅಂಗಡಿಗಳು ಆರಂಭಗೊಳ್ಳಲಿವೆ. ತಲಪ್ಪಾಡಿ ರಾಷ್ಟ್ರೀಯ
ಹೆದ್ದಾರಿಯ ತೂಮಿನಾಡು ರಸ್ತೆಯಲ್ಲಿ ಕುಂಜತ್ತೂರು-ಮಂಜೇಶ್ವರ ಸಹಕಾರಿ ಬ್ಯಾಂಕ್, ಅಡ್ಕ ಸ್ಥಳ ರಸ್ತೆಯಲ್ಲಿ ಅಡ್ಕ ಸ್ಥಳ-ಪೆರ್ಲ
ಬ್ಯಾಂಕ್, ಸ್ವರ್ಗ ಆರ್ಲಡ್ಕ ರಸ್ತೆಯಲ್ಲಿ ಪೈವಳಿಕೆ (ಹೋಂಡೆಲಿವರಿ)-ಪೈವಳಿಕೆ ಬ್ಯಾಂಕ್, ಬೆರಿಪದವು ರಸ್ತೆಯಲ್ಲಿ ಬೆರಿಪದವು-
ಬಾಯಾರು ಸಹಕಾರಿ ಬ್ಯಾಂಕ್, ಆದೂರು ಕೊಟ್ಯಾಡಿ, ಪಳ್ಳತ್ತೂರುಮ ಈಶ್ವರ ಮಂಗಳ ರಸ್ತೆಯಲ್ಲಿ ಪಿಡಿಯತ್ತಡ್ಕ-ಕಾಡಗಂ
ಎಸ್.ಸಿ.ಬಿ., ನಾಟೆಕಲ್ಲು ಸುರ್ಲಯ ಪದವು ರಸ್ತೆಯಲ್ಲಿ ಕಾಡಗಂ ಅಗ್ರಿ ಕಲ್ಚರಿಸ್ಟ್ ಸಹಕಾರಿ ಸಂಘ, ಮಾಣಿಮೂಲೆ ಉಳ್ಯ ರಸ್ತೆಯಲ್ಲಿ
ಕುತ್ತಿಕೋಲ್ ಅಗ್ರಿ ಸಹಕಾರಿ ಸಂಘ, ಆದೂರು-ಕೊಟ್ಯಾಡಿ-ಸುಳ್ಯ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಸಂಘ. ಗಾಳಿಮುಖ,
ಈಶ್ವರಮಂಗಲ ದೇಲಂಪಾಡಿ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಬ್ಯಾಂಕ್ ಗಳಲ್ಲಿ ಈ ಕೇಂದ್ರಗಳು ಆರಂಭಗೊಳ್ಳಲಿವೆ.
ಸಾಮಾಗ್ರಿಗಳ ರವಾನೆಗೆ 2 ಲಾರಿಗಳನ್ನು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದ್ದಾರೆ. ಅಕ್ಕಿ,ಬೇಳೆ, ಸಕ್ಕರೆ ಸಹಿತ
ಸಾಮಾಗ್ರಿಗಳು ಇಲ್ಲಿ ಲಭಿಸಲಿವೆ. ಗಡಿಭಾಗಗಳಲ್ಲಿ ಪುಟ್ಟ ಪೇಟೆಗಳನ್ನು ನಿರ್ಮಿಸುವುದು ಇಲ್ಲಿನ ಉದ್ದೇಶ. ಈ ನಿಟ್ಟಿನಲ್ಲಿ ವ್ಯಾಪಾರಿ
ವ್ಯವಸಾಯಿ ಸಂಘಟನೆಗಳ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸುವರು.
*Please Watch, 👍🏼, Share➡ and Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*  
https://www.youtube.com/channel/UC64_0ua1E3W5hfgpfxkQupQ
*Fox24live*🦜 always with You👏🏻👏🏻💐

Comments