ವಾಹನ ತಪಾಸಣೆ ವೇಳೆ ಪೊಲೀಸರು ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು:ಡಿ.ಜಿ.ಪಿ

ವಾಹನ ತಪಾಸಣೆ ವೇಳೆ ಪೊಲೀಸರು ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು
:ಡಿ.ಜಿ.ಪಿ
-------------------------------------------------------------------
ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು ಎಂದು ರಾಜ್ಯ
ಪೊಲೀಸ್ ಮುಖ್ಯಸ್ಥ (ಡಿ.ಜಿ.ಪಿ) ಲೋಕನಾಥ್ ಬೆಹ್ರಾ ಆದೇಶ ನೀಡಿದರು. ಈ ವಿಚಾರದಲ್ಲಿ ಖಚಿತತೆ ನಡೆಸುವ ಹೊಣೆ ಆಯಾ ಜಿಲ್ಲಾ
ಪೊಲೀಸ್ವರಿಷ್ಠಾಧಿಕಾರಿಗಳಿಗಿದೆ ಎಂದವರು ತಿಳಿಸಿದರು.

p-3 ವಾಹನಗಳತ್ತ ಬಾಗಿ ತಪಾಸಣೆ ನಡೆಸುವ ಕ್ರಮ ಕೈಬಿಡಬೇಕು. ತಪಾಸಣೆಯ ವೇಳೆ ಕೈಗಳಿಗೆ ಗ್ಲೌಸ್
ಧರಿಸದೇ ಯಾತ್ರಿಕರನ್ನು ಸ್ಪರ್ಶಿಸಕೂಡದು. ವಾಹನಗಳ ಡಿಕ್ಕಿ ತೆರೆಯುವ ವೇಳೆ ಅಗತ್ಯದ ಮುಂಜಾಗರೂಕತೆ ಕೈಗೊಳ್ಳಬೇಕು.
ವಾಹನ ತಡೆದು ನಿಲ್ಲಿಸುವ ವೇಳೆ ಯಾತ್ರಿಕರೊಂದಿಗೆ ನಿಗದಿತ ಅಂತರ ಪಾಲಿಸಿ, ಮಾತುಕತೆ ನಡೆಸಬೇಕು. ಮುಂದೆ ಆದೇಶ
ಪ್ರಕಟಿಸುವವರೆಗೆ ಬ್ರೀದ್ ಅನಲೈಸರ್ ಬಳಕೆ ಮಾಡುವುದು ಬೇಡ. ವೈರಸ್ ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಕೈಗಳನ್ನು ಆಗಾಗ
ಸಾಬೂನು ಯಾ ಸಾನಿಟೈ ಸರ್ ಬಳಸಿ ಶುಚಿಗೊಳಿಸಬೇಕು ಎಂದವರು ಆದೇಶದಲ್ಲಿ ತಿಳಿಸಿದರು.
https://www.youtube.com/channel/UC64_0ua1E3W5hfgpfxkQupQ

Comments