- Get link
- X
- Other Apps
- Get link
- X
- Other Apps
ವ್ಯಾಪಾರಿ ಸಂಸ್ಥೆಗಳಿಗೆ ಲೀಗಲ್ ಮೆಟ್ರಾಲಜಿ ಮಿಂಚಿನ ದಾಳಿ
--------------------------------------
ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಸಾಮಾಗ್ರಿಗಳ ಲಭ್ಯತೆಯ ವ್ಯಾಪಾರ
ಸಂಸ್ಥೆಗಳಲ್ಲಿ ಗುರುವಾರ ಕೆಲವೆಡೆ ಜಿಲ್ಲಾ ಅಳತೆ ನಿಯಂತ್ರಣ ವಿಭಾಗ ಮಿಂಚಿನ ತಪಾಸಣೆ ನಡೆಸಿದೆ. ಸಾನಿಟೈಸರ್, ಬಾಟಲಿ ನೀರು
ಇತ್ಯಾದಿಗಳಿಗೆ ಅತಿಬೆಲೆ ಈಡುಮಾಡಲಾಗುತ್ತಿದ್ದ ಆರೋಪದಲ್ಲಿ ತಲಾ ಒಂದು ಕೇಸು ದಾಖಲಿಸಲಾಗಿದೆ. ತಪಸಣೆಗೆ ಕಾಸರಗೋಡು
ಲೀಗಲ್ ಮೆಟ್ರಾಲಜಿ ಡೆಪ್ಯೂಟಿ ಕಂಟ್ರೋಲರ್ ಶ್ರೀನಿವಾಸ ಪಿ., ಮಂಜೇಶ್ವರ ಲೀಗಲ್ ಮೆಟ್ರಾಲಜಿ ಇನ್ಸ್ ಪೆಕ್ಟರ್ ಶಶಿಕಲಾ ಕೆ., ಇತರ
ಮೆಟ್ರಾಲಜಿ ಸಿಬ್ಬಂದಿ ಶ್ರೀಜಿತ್, ರಾಬರ್ಟ್ ಪೆರೆರ, ಮುಸ್ತಫ ಟಿ.ಕೆ.ಪಿ. ನೇತೃತ್ವ ವಹಿಸಿದ್ದರು.
ಅಂಗಡಿಗಳಲ್ಲಿ ತರಕಾರಿ ಬೆಲೆ ಪಟ್ಟಿ ಗ್ರಾಹಕರಿಗೆ ಗೋಚರಿಸುವಂತೆ ಇರಿಸಬೇಕು ಎಂಬ ಆದೇಶ
ನೀಡಲಾಗಿದೆ. ಅಕ್ಕಿ, ಸಕ್ಕರೆ, ಬೇಳೆ, ತರಕಾರಿ, ಹಾಲು ಇತ್ಯಾದಿ ಲಭ್ಯತೆ ಖಚಿತಪಡಿಸುವ ಮತ್ತು ಕಾಳಸಂತೆ, ಅಕ್ರಮ ದಾಸ್ತಾನು
ತಡೆಯುವ ನಿಟ್ಟಿನಲ್ಲಿ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈಗಾಗಲೇ ಆದೇಶ ನೀಡಿದ್ದಾರೆ. ಮುಂದಿನ
ದಿನಗಳಲ್ಲೂ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
*Please Subscribe our Channel for more Informations..*
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ*
*Fox24live* always with You👏🏻👏🏻💐
- Get link
- X
- Other Apps
Comments
Post a Comment