- Get link
- X
- Other Apps
- Get link
- X
- Other Apps
ಚೀನಾದ ಉತ್ಪನ್ನವೆಂದೇ ಹೇಳಬಹುದಾದ ‘ಕೊ’ರೊ’ನಾವೈ’ರಸ್’ ಇಂದು ಪ್ರಪಂಚದಾದ್ಯಂತ ತಲ್ಲಣ ಸೃಷ್ಟಿಸುತ್ತಿದೆ. ಇದನ್ನು ತಪ್ಪಿಸಲು ದೇಶ ವಿದೇಶಗಳು ದಾರಿಗಳನ್ನು ಹುಡುಕುತ್ತಿವೆ. ಕೊ’ರೋ’ನಾ ವೈ’ರಸ್‌ಗೆ ಸಂಬಂಧಿಸಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ಹಲವು ರೀತಿಯ ಮಾಹಿತಿಗಳು ಬಯಲಾಗುತ್ತಿವೆ. ಇತ್ತೀಚೆಗೆ, ಚೀನಾದ ತಜ್ಞರು ಕೊ’ರೋ’ನಾ ವೈ’ರಸ್ ಮನುಷ್ಯನ ಮಲದಲ್ಲಿ ಹಲವಾರು ವಾರಗಳವರೆಗೆ ಬದುಕಬಲ್ಲದು ಎಂದು ಕಂಡುಹಿಡಿದಿದ್ದಾರೆ.
ಕೊ’ರೋ’ನಾ ವೈ’ರಸ್‌ಗೆ ಸಂಬಂಧಿಸಿದ ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಕೊ’ರೋ’ನಾ ವೈ’ರಸ್‌ನ ಬಗ್ಗೆ ಜಾಗೃತರಾಗಿರಬೇಕು ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಜನರಿಗೆ ತಿಳಿಸಿದ್ದಾರೆ. ಅವರ ಈ ವಿಡಿಯೀವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಚೀನಾದ ಇತ್ತೀಚಿನ ಮಾಹಿತಿಯ ಬಗ್ಗೆ ತಿಳಿಸಲಾಗಿದೆ. ಕೊ’ರೋ’ನಾ ವೈ’ರಸ್ ಮನುಷ್ಯನ ಮಲದಲ್ಲಿ ಹಲವಾರು ವಾರಗಳವರೆಗೆ ಬದುಕಬಲ್ಲದು. ಈ ವೈ’ರಸ್ ನೊಣಗಳ ಮೂಲಕವೂ ಹರಡಲು ಇದು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಅದರ ವಿರುದ್ಧದ ಯುದ್ಧವನ್ನು ಗೆಲ್ಲುವುದು ಬಹಳ ಮುಖ್ಯ.
ದೇಶವು ಕೊ’ರೋ’ನಾ ವೈ’ರಸ್ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ, ಎಲ್ಲಾ ನಾಗರಿಕರು ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಅಮಿತಾಭ್ ಹೇಳಿದ್ದಾರೆ. ರೋಗಿಯು ಚೇತರಿಸಿಕೊಂಡಾಗಲೂ, ಕೊ’ರೋ’ನಾ ವೈ’ರಸ್ ಆತನ ಮಲದಲ್ಲಿ ಜೀವಂತವಾಗಿರುತ್ತದೆ. ಅಂತಹ ವ್ಯಕ್ತಿಯ ಮಲದಲ್ಲಿ ಕೂತಿದ್ದಂತಹ ನೊಣಗಳು ದುರದೃಷ್ಟವಶಾತ್ ಹಣ್ಣುಗಳು, ತರಕಾರಿಗಳನ್ನು ತಿನ್ನುತ್ತಿದ್ದರೆ ಅಥವಾ ನಾವು ಸ್ಪರ್ಶಿಸುವ ಮೇಲ್ಮೈಯಲ್ಲಿ ಕುಳಿತುಕೊಂಡರೆ, ಈ ವೈ’ರಸ್ ಮತ್ತಷ್ಟು ಹರಡಬಹುದು ಎಂದು ಹೇಳಿದ್ದಾರೆ.
https://twitter.com/SrBachchan/status/1242820488562216961?s=19
ಕೊ’ರೋ’ನಾ ವೈ’ರಸ್ ತಡೆಗಟ್ಟಲು ಈ ಮೂರು ಕೆಲಸಗಳನ್ನು ಮಾಡುವಂತೆ ಅಮಿತಾಭ್ ಬಚ್ಚನ್ ಹೇಳಿದ್ದಾರೆ
1. ನಿಮ್ಮ ಶೌಚಾಲಯವನ್ನು ಮಾತ್ರ ಬಳಸಿ, ಹೊರಗಡೆ ಬಹಿರ್ದೆಸೆಗೆ ಹೋಗಬೇಡಿ.
2. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ನಿರ್ಗಮಿಸಿ.
3. ದಿನಕ್ಕೆ ಹಲವಾರು ಬಾರಿ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ ಮತ್ತು ನಿಮ್ಮ ಕಣ್ಣುಗಳು, ಮೂಗು, ಬಾಯಿಯನ್ನು ಮುಟ್ಟಬೇಡಿ.
- Get link
- X
- Other Apps
Comments
Post a Comment