ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ 19 ಸೋಂಕು ಖಚಿತ


ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ 19 ಸೋಂಕು ಖಚಿತ
-------------------------------------------------n b 
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ(ಮಾ.31) ಇಬ್ಬರಿಗೆ ಕೋವಿಡ್ 19 ಸೋಂಕು ಖಚಿತಗೊಂಡಿದೆ.
ತಳಂಗರೆ ನಿವಾಸಿಗಳಾದ 56 ವರ್ಷ ಪ್ರಾಯದ ಮಹಿಳೆ ಮತ್ತು 23 ವರ್ಷದ ಪುರುಷ ಸೋಂಕು ಬಾಧಿತರಾದವರು. ಇಬ್ಬರಿಗೂ
ಇತರ ರೋಗಿಗಳ ಸಂಪರ್ಕದಿಂದ ಈ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕುಬಾಧೆ
ಖಚಿತಗೊಂಡವರ ಸಂಖ್ಯೆ 108 ಆಗಿದೆ.
ಜಿಲ್ಲೆಯಲ್ಲಿ ಮಂಗಳವಾರ 7733 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 7570 ಮಂದಿ ಆಸ್ಪತ್ರೆಗಳಲ್ಲಿ, 163
ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಮಂಗಳವಾರ ನೂತನವಾಗಿ 37 ಮಂದಿಯನ್ನು ಐಸೊಲೇಷನ್ ವಾರ್ಡ್ ಗಳಿಗೆ
ವರ್ಗಾಯಿಸಲಾಗಿದೆ.
ಈ ವರೆಗೆ 1052 ಮಂದಿ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಮಂಗಳವಾರ 116 ಮಂದಿಯ ಸ್ಯಾಂಪಲ್
ಕಳುಹಿಸಲಾಗಿದೆ. 479 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 467 ಮಂದಿಯ ಫಲಿತಾಂಶ ಲಭಿಸಿಲ್ಲ.
ಜಿಲ್ಲಾ ಕರೋನಾ ನಿಯಂತ್ರಣ ಕೇಂದ್ರಕ್ಕೆ 520 ದೂರವಾಣಿ ಕರೆಗಳು ಬಂದಿದ್ದು, ಅವುಗಳಿಗೆ ಉತ್ತರ
ನೀಡಲಾಗಿದೆ.


*Please Watch, 👍🏼, Share➡ and Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*  

https://www.youtube.com/channel/UC64_0ua1E3W5hfgpfxkQupQ

*Fox24live*🦜 always with You👏🏻👏🏻💐

Comments