ಕೋವಿಡ್ 19: ಕಾಸರಗೋಡು ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಖಚಿತ

ಕೋವಿಡ್ 19: ಕಾಸರಗೋಡು ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಖಚಿತ
-------------------------------------------
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಮೂರು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಖಚಿತಗೊಂಡಿವೆ. 37
ವರ್ಷ ಪ್ರಾಯದ ಚೆಂಗಳ ನಿವಾಸಿ, 38 ವರ್ಷದ ಅಣಂಗೂರು ಕೊಲ್ಲಂಪಾಡಿ ನಿವಾಸಿ, 26 ವರ್ಷ ಪ್ರಾಯದ ಉಳಿಯತ್ತಡ್ಕ
ನಿವಾಸಿಗಳಿಗೆ ಸೋಂಕು ತಗುಲರುವುದು ಖಚಿತವಾಗಿದೆ. ಇವರಲ್ಲಿ ಚೆಂಗಳ ನಿವಾಸಿ ಮಾ.21ರಂದು ಕೋವಿಡ್-19 ಖಚಿತಗೊಂಡಿದ್ದ
ದುಬಾಯಿಯಿಂದ ಆಗಮಿಸಿದ ವ್ಯಕ್ತಿಯನ್ನು ಕರಿಪುರ ವಿಆನನಿಲ್ದಾಣದಿಂದ ಊರಿಗೆ ಕರೆತಂದಿದ್ದರು. ಕೊಲ್ಲಂಪಾಡಿ ಮತ್ತು
ಉಳಿಯತ್ತಡ್ಕ ನಿವಾಸಿಗಳು ಮಾ.21ರಂದು ದುಬಾಯಿಯಿಂದ ಬೆಂಗಳೂರಿನ ವಿಮಾನನಿಲ್ದಾಣದಲ್ಲಿಳಿದು ಖಾಸಗಿ ವಾಹನದಲ್ಲಿ
ಕಾಸರಗೊಡಿಗೆ ಬಂದಿದ್ದರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಈ ಮೂಲಕ ಜಿಲ್ಲೆಯಲ್ಲಿ ಕೋರೋನಾ ವೈರಸ್ ಬಾಧಿತರ ಸಂಖ್ಯೆ 47 ಆಗಿದೆ. 4798 ಮಂದಿ ನಿಗಾದಲ್ಲಿದ್ದಾರೆ.
ಇವರಲ್ಲಿ 100 ಮಂದಿ ಆಸ್ಪತ್ರೆಗಳಲ್ಲಿ, 4698 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ 5 ಮಂದಿಯ ಸ್ಯಾಂಪಲ್ ತಪಾಸಣೆಗೆ
ಕಳುಹಿಸಲಾಗಿತ್ತು.
*Please Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ* 

*Fox24live*🦜 always with You👏🏻👏🏻💐

Comments