- Get link
- X
- Other Apps
- Get link
- X
- Other Apps
ಭಾನುವಾರ ಕೇರಳದಲ್ಲಿ 20 ಜನರಿಗೆ ಕೋವಿಡ್ 19 ದೃಡ ಪಡಿಸಲಾಗಿದೆ ಎಂದು ಆರೋಗ್ಯ ಮಂತ್ರಿ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಕಣ್ಣೂರು ಜಿಲ್ಲೆಯಿಂದ ಎಂಟು ಮಂದಿ, ಕಾಸರಗೋಡು ಜಿಲ್ಲೆಯಿಂದ ಏಳು ಮಂದಿ ಮತ್ತು ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಢಪಡಿಸಲಾಗಿದೆ. ಈ ಪೈಕಿ 18 ಮಂದಿ ವಿದೇಶದಿಂದ ಬಂದವರು. ಇಬ್ಬರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ತಿರುವನಂತಪುರಂ ಜಿಲ್ಲೆಯಲ್ಲಿ ರೋಗನಿರ್ಣಯ ಮಾಡಿದ ರೋಗಿಯು ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಎರ್ನಾಕುಲಂ ಜಿಲ್ಲೆಯ ಒಬ್ಬ ಆರೋಗ್ಯ ಕಾರ್ಯಕರ್ತರಿಗೆ ಈ ರೋಗ ಪತ್ತೆಯಾಗಿದೆ.
ಪಥನಮತ್ತಿಟ್ಟ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಲ್ಕು ರೋಗಿಗಳು ಫಲಿತಾಂಶ ನೆಗೆಟೀವ್ ಆಗಿದೆ. ಕೇರಳದಲ್ಲಿ ಈವರೆಗೆ 202 ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ, ರಾಜ್ಯದಾದ್ಯಂತ 181 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
201 ದೇಶಗಳಲ್ಲಿ ಕೋವಿಡ್ 19 ಹರಡಿ ನಿಂತ ಸಮಯದಲ್ಲೂ ಕೇರಳದಲ್ಲಿ ರೋಗ ದೃಢಪಡಿಸಲಾದ ಸಮಯದಲ್ಲೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,41,211 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 1,40,618 ಜನರು ಮನೆಗಳಲ್ಲಿ ಮತ್ತು 593 ಜನರು ಆಸ್ಪತ್ರೆಗಳಲ್ಲಿ ವೀಕ್ಷಣೆಯಲ್ಲಿದ್ದಾರೆ. ರೋಗಲಕ್ಷಣಗಳನ್ನು ಹೊಂದಿರುವ 6690 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭಿಸಿದ 5518 ಮಾದರಿಗಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ.
*Please Subscribe our Channel for more Informations..*
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ*
*Fox24live*🦜 always with You👏🏻👏🏻💐
https://www.youtube.com/channel/UC64_0ua1E3W5hfgpfxkQupQ
- Get link
- X
- Other Apps
Comments
Post a Comment