ಮಂಜೇಶ್ವರದ ನಿರೀಕ್ಷೆಯಾಗಿ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ನೂತನ ಕಟ್ಟಡ




ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡಿನ ಗಡಿ ಪ್ರದೇಶದಲ್ಲಿ ಗೋವಿಂದ ಪೈಗಳ ನಾಮಾಧೇಯದಲ್ಲಿ ನೆಲೆನಿಂತಿರುವ ವಿದ್ಯಾ ಸಂಸ್ಥೆಯಾಗಿದೆ ಗೋವಿಂದ ಪೈ ಸ್ಮಾರಕ ‌ಸರಕಾರಿ ಕಾಲೇಜು. ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡು ನಾಡು ನುಡಿಗಳ ಸಾಂಸ್ಕೃತಿಕ ವೈಶಿಷ್ಟ್ಯಗಳ ತವರೂರಾಗಿದೆ . ನೀಲೇಶ್ವರದಿಂದ ಮಂಜೇಶ್ವರದ ವರೆಗೆ ವಿಶಾಲವಾಗಿ ವ್ಯಾಪಿಸಿರುವ ಕರಾವಳಿ ಪ್ರದೇಶದಲ್ಲಿ ಕಾಲೇಜು ನೆಲೆಗೊಂಡಿದೆ. ಭಾಷಾ ಅಲ್ಪ ಸಂಖ್ಯಾತರು ಬಹು ಸಂಖ್ಯೆಯಲ್ಲಿರುವ ಈ ವಿದ್ಯಾಲಯವು ಪ್ರಗತಿಯ ಉತ್ತುಂಗಕ್ಕೇರುತ್ತಿದೆ.


ಬಹುಭಾಷೆ , ಆಚಾರ , ಸಂಪ್ರದಾಯ , ಸಾಂಸ್ಕೃತಿಕ ವೈವಿಧ್ಯಗಳು ಹಾಗೂ ಕರಾವಳಿ ಸಂಸೃತಿಯೂ ಇತರ ಪ್ರದೇಶಗಳಿಂದ ಮಂಜೇಶ್ವರವನ್ನು ಎತ್ತರಿಸಿ ನಿಲ್ಲಿಸುತ್ತದೆ . ತುಳುನಾಡಿನ ಸಾಂಸ್ಕೃತಿಕ ಅನುಷ್ಠಾನಗಳು ವೈವಿಧ್ಯಗಳು , ವೈಶಿಷ್ಟ್ಯಗಳು ಎಲ್ಲವನ್ನು ಮೈಗೂಡಿಸಿಕೊಂಡಿರುವ ಮಂಜೇಶ್ವರಕ್ಕೆ ಪ್ರಗತಿ ಮಾತ್ರ ಅನತಿ ದೂರದಲ್ಲಿದೆ . ವಿವಿಧ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ಇಲ್ಲಿನ ಜನತೆಯೂ ಉನ್ನತ ವಿದ್ಯಾಭ್ಯಾಸ ಪಡೆಯುವಲ್ಲಿ ವಂಚಿತರಾಗಿದ್ದು , ಸರಕಾರಿ ಉದ್ಯೋಗಗಳಿಗಾಗಿ ನಡೆಯುವ  ಪಿ . ಎಸ್ . ಸಿ ಪರೀಕ್ಷೆಗಳನ್ನು ಬರೆದು ಉದ್ಯೋಗ ಗಳಿಸುವಲ್ಲಿ ಇನ್ನು ಸಫಲರಾಗಿಲ್ಲ. ಸಾಮಾಜಿಕ ಹಿನ್ನಡೆ , ಸರಕಾರದ ಸೌಲಭ್ಯ ಹಾಗೂ ಪದ್ಧತಿಗಳ ಕುರಿತಾದ ಮಾಹಿತಿಗಳ ಕೊರತೆಯಿಂದಾಗಿ ಇಲ್ಲಿನ ಪ್ರಗತಿ ಕುಂಠಿತವಾಗಿದೆ . ಮಂಜೇಶ್ವರದ ಪರಿಸರದವರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಏಕೈಕ ಆಶ್ರಯ ಈ ಸರಕಾರಿ ವಿದ್ಯಾ ಸಂಸ್ಥೆ .


1980  ಸೆಪ್ಟೆಂಬರ್ 22 ರಂದು ಅಂದಿನ ಮುಖ್ಯ ಮಂತ್ರಿಯಾದ ಇ . ಕೆ ನಾಯನಾರ್ ರವರು ವಿದ್ಯಾಲಯದ ಉದ್ಘಾಟನೆಯನ್ನು ಮಾಡಿದರು. ಈ ವಿದ್ಯಾಲಯದ ಆರಂಭವು ಅನಂತೇಶ್ವರ ದೇವಾಲಯಕ್ಕೆ ಸಂಬಂಧಿಸಿದ " ವನ ಭೋಜನ ಶಾಲೆ " ಎಂಬ ಸ್ಥಳದಲ್ಲಾಯಿತು . ಈ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿ ಪರವಾಗಿ ಚಿಂತಿಸುವ ಜನತೆಗೆ ವಿಧ್ಯಾಭ್ಯಾಸವನ್ನು ನೀಡಬೇಕೆಂಬ ವಿಷಯದಲ್ಲಿ ಉತ್ಸುಕರಾಗಿದ್ದ ಗೋವಿಂದ ಪೈಗಳು ಹೊಸಬೆಟ್ಟು ಗ್ರಾಮದಲ್ಲಿ ತನ್ನ ಅಧೀನತೆಯಲ್ಲಿದ್ದ 33 ಹೆಕ್ಟೇರ್ ಭೂಮಿಯನ್ನು ವಿದ್ಯಾ ಸಂಸ್ಥೆಯ ನಿರ್ಮಾಣ ಸ್ಥಳಕ್ಕಾಗಿ ದಾನ ಮಾಡಿದರು . ಆ ಭೂಮಿಯಲ್ಲಿ ವಿದ್ಯಾ ಸಂಸ್ಥೆಯು ಈಗ ನೆಲೆನಿಂತಿದೆ . 1990ರಲ್ಲಿ ಈ ಕಟ್ಟಡಕ್ಕೆ ವಿದ್ಯಾಸಂಸ್ಥೆಯನ್ನು ಸ್ಥಳಾಂತರಿಸಲಾಯಿತು . ಕೇರಳದಲ್ಲಿರುವ ಬೇರೆ ಯಾವುದೇ ವಿದ್ಯಾಲಯಕ್ಕೂ ಇಲ್ಲದ ಪ್ರಕೃತಿ ರಮಣೀಯವಾದ ಭೂ ಸಂಪತ್ತು ಇಲ್ಲಿನದ್ದು . ಸ್ವಚ್ಚತೆಗೆ ಹೆಸರು ಪಡೆದಿರುವ ಗ್ರಾಮೀಣ ಪ್ರದೇಶದ ಪರಿಸರದಲ್ಲಿದೆ ಈ ವಿದ್ಯಾ ಸಂಸ್ಥೆ .

ಇಲ್ಲಿ B.COM , B.SC ಸ್ಟಾಟಿಸ್ಟಿಕ್ಸ್ , B.A ಕನ್ನಡ , BTTM ಎಂಬ ವಿಷಯಗಳಲ್ಲಿ ಪದವಿ , ಸ್ಟಾಟಿಸ್ಟಿಕ್ಸ್ , B.COMಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸವು ಇದೆ . ಸ್ಥಿರ ಉಪನ್ಯಾಸಕರು 19 , ಅತಿಥಿ ಉಪನ್ಯಾಸಕರು 9 ಹಾಗೂ ರಿಸರ್ಚ್ ಅಸಿಸ್ಟೆಂಟ್ , ಜೀವನಿ ಕೌನ್ಸಲಿಂಗ್ ಎಂಬ ಸೇವೆಗಳೂ ಲಭ್ಯವಿದೆ. ಗಿಳಿವಿಂಡು , ಫೋಕಸ್ , ಕ್ಯೂಟ್ , ಸ್ಟಾಟಿಸ್ಟಿಕಾ ಮೊದಲಾಗಿ ವಿಭಾಗದ ಸಂಘಗಳೂ ಸದಸ್ಸು , ಓಲ್ಡ್‌ ಗಾರ್ಡಾನ್ ಮೊದಲಾದ ಸಾಹಿತ್ತಿಕ ಸಾಂಸ್ಕೃತಿಕ ಸಂಘಗಳು ಇಲ್ಲಿ ಸಜೀವವಾಗಿ ಪ್ರವರ್ತಿಸುತ್ತವೆ .ಜೊತೆಗೆ ಗುರುವಾರ ಚಿಂತನೆಗಳು ಎಂಬ ಸಂವಾದ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆಯು ( NSS ) ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳಿಗೆ ಅಪೇಕ್ಷಿಸುವಲ್ಲಿ ಮತ್ತು ಅನುಬಂಧದ ತಯಾರಿಕೆಗಾಗಿ ನೆಟ್ವರ್ಕ್ ರಿಸೋರ್ಸ್ ಸೆಂಟರುಗಳು ಇಲ್ಲಿ ಸಜೀವವಾಗಿದೆ . ರಕ್ಷಕ ಶಿಕ್ಷಕ ಸಂಘವು ವಿದ್ಯಾರ್ಥಿಗಳ ಉನ್ನತ್ತಿಯನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ. 2017 ರಲ್ಲಿ " ಬಿ  ಗ್ರೇಡ್ "ಪಡೆದು ಯು . ಜಿ . ಸಿ ಯ ನ್ಯಾಕ್ ಅಂಗೀಕಾರವನ್ನು ಈ ಕಾಲೇಜು ಪಡೆದಿದೆ . 40 ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವು ಈ ಕಾಲೇಜಿನಲ್ಲಿ . ಯೂನಿವರ್ಸಿಟಿ ಶೇಕಡಾವಾರಿಗಿಂತ ಉನ್ನತ ವಿಜಯವನ್ನು ಇಲ್ಲಿನ ವಿದ್ಯಾರ್ಥಿಗಳು ಗಳಿಸಿದ್ದಾರೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯು . ಜಿ .ಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ . ಹೀಗೆ ಕಲಿಕೆಯ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಔನ್ನತ್ಯವನ್ನು ಈ ಕಾಲೇಜು ಪಡೆದಿದ್ದರೂ ಕೇರಳದ ಇತರ ಕಾಲೇಜುಗಳೊಂದಿಗೆ ಹೋಲಿಸಿದಾಗ ಈ ಕಾಲೇಜು ಸರಕಾರದಿಂದ ಪರಿಗಣಿಸಲ್ಪಟ್ಟಿಲ್ಲ ಎಂದು ಮನದಟ್ಟಾಗುತ್ತಿದೆ . ಹೊಸ ಕೋರ್ಸಗಳು ಇಲ್ಲಿ ಲಭ್ಯವಾಗಬೇಕಿದೆ . ಕಾಸರಗೋಡಿನ ಸಮಗ್ರ ಅಭಿವೃದ್ಧಿಗಾಗಿ ರೂಪುಗೊಂಡ " ಪ್ರಭಾಕರನ್ ಕಮಿಷನ್ " ವರದಿಯಲ್ಲಿ ಉಲ್ಲೇಖಿಸಿರುವ ಕೋರ್ಸುಗಳು ಭಾಷಾ ಅಲ್ಪ ಸಂಖ್ಯಾತರು ಅಧಿಕವಾಗಿರುವ ಈ ಪ್ರದೇಶದ ವಿಧ್ಯಾ ಸಂಸ್ಥೆಯನ್ನು ತಲುಪಬೇಕಾಗಿದೆ . ವಿದ್ಯಾಲಯದ ಅಧಿಕೃತರು ಈ ಕುರಿತಾದ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಕಾರ್ಯರೂಪಕ್ಕೆ ಬಂದ್ದಿಲ್ಲ . 2012 ರಲ್ಲಿ ಎಮ್ . ಎಸ್ . ಸಿ ಸ್ಟಾಟಿಸ್ಟಿಕ್ಸ್ ಕೊಡಲ್ಪಟ್ಟಿತು . ನೂತನ ಕಟ್ಟಡದ ಉದ್ಘಾಟನೆಯೊಂದಿಗೆ ಹೊಸ ಕೋರ್ಸುಗಳು ಇಲ್ಲಿ ಲಭ್ಯವಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಮಂಗಳೂರನ್ನು ಆಶ್ರಯಿಸುವ ಜನರಿಗೆ ಅದು ಇಲ್ಲೆ ದೊರೆಯಲಿದೆ. ಆದುದರಿಂದ ಉತ್ತಮ ಕೋರ್ಸುಗಳು ಇಲ್ಲಿ ಬರಬೇಕಾದ ಅತ್ಯಗತ್ಯವಿದೆ.

ನೂತನ ಕಟ್ಟಡದ ಉದ್ಘಾಟನೆಯನ್ನು ಗೌರವಾನ್ವಿತ ಉನ್ನತ ವಿದ್ಯಾಭ್ಯಾಸ ಮಂತ್ರಿ ಕೆ . ಟಿ ಜಲೀಲ್ ರವರು , ಕಾಸರಗೋಡು ,ಎಮ್ . ಪಿ ರಾಜ್ ಮೋಹನ್ ಉಣ್ಣಿತ್ತಾನ್ ರವರ ಉಪಸ್ಥಿತಿಯಲ್ಲಿ ನಿರ್ವಹಿಸಲಿದ್ದಾರೆ . ಗೌರವಾನ್ವಿತ ಮಂಜೇಶ್ವರದ ಎಮ್ . ಎಲ್ . ಎ ಎಮ್ . ಸಿ ಕಮರುದ್ದೀನ್ ರವರು ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ . ಕಟ್ಟಡದ ಉದ್ಘಾಟನೆಯೊಂದಿಗೆ ಹೊಸ ಕೋರ್ಸುಗಳು ಬರುವ ನಿರೀಕ್ಷೆಯಲ್ಲಿದೆ  , ವಿದ್ಯಾ ಸಂಸ್ಥೆ ಮತ್ತು ಈ ನಾಡು. ಆದುದರಿಂದ ಈ ಕಟ್ಟಡದ ಉದ್ಘಾಟನೆಯನ್ನು ಉತ್ಸವವಾಗಿಸುವ ತಯಾರಿಕೆಯಲ್ಲಿದ್ದಾರೆ ಈ ಊರಿನ ಜನತೆ .ಅದಕ್ಕಾಗಿ  ಗೌರವಾನ್ವಿತ ಎಮ್ . ಎಲ್ . ಎ ಎಂ . ಸಿ ಕಮರುದ್ದೀನ್ ರವರ ಅಧ್ಯಕ್ಷತೆಯಲ್ಲಿ , ನೇತೃತ್ವದಲ್ಲಿ ಸಂಘಾಟಕ ಸಮಿತಿಯೂ ಸಜೀವವಾಗಿ ಕಾರ್ಯನಿರ್ವಹಿಸುತ್ತಿದೆ . ಇದೇ ಬರುವ ಬುಧವಾರ , ಗುರುವಾರಗಳಲ್ಲಿ ಸಮೀಪದ ಪಟ್ಟಣ , ಊರು ಮನೆ ಮನೆಗಳಿಗೆ ಸಂಪರ್ಕ ಪ್ರಚಾರಣೆ ಮಾಡಲಾಗುವುದು . ಕೇರಳದ ಗಡಿ ಪ್ರದೇಶದಲ್ಲಿರುವ ಈ ವಿದ್ಯಾ ಸಂಸ್ಥೆಯ ಉನ್ನತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಜ್ಞಾ ಬದ್ಧರಾಗಿ ಪ್ರದೇಶವಾಸಿಗಳು ಮತ್ತು ರಕ್ಷಕ - ಶಿಕ್ಷಕ ಸಂಘದವರು ಕಾರ್ಯನಿರ್ವಹಿಸುತ್ತಿದ್ದಾರೆ.

Comments