- Get link
- X
- Other Apps
- Get link
- X
- Other Apps
ವಿದ್ಯಾನಗರ,ಜ.13:ಭೂಮಿಯ ಮೇಲಿನ ಮಾನವನ ಚಟುವಟಿಕೆಗಳೂ ಹೆಚ್ಚುತ್ತಾ ಹೋದಂತೆ ಒಂದಿಲ್ಲೊಂದು ಸಮಸ್ಯೆಗಳೂ ಎದುರಾಗುತ್ತಾ ಬರುವುದು ಸಾಮಾನ್ಯವಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಪ್ರತಿವರ್ಷದ ಕೂಗಾದರೂ ಜನರಿಗೆ ಎದುರಾಗುವ ನೀರಿನ ಸಮಸ್ಯೆ ನ್ನೂದೂರವಾಗಿಲ್ಲ. ಮಳೆ ಹೆಚ್ಚಾಗಲಿ, ಕಡಿಮೆಯಾಗಲಿ ಬೇಸಗೆ ಪ್ರಾರಂಭವಾದಂತೆ ನೀರಿನ ಸಮಸ್ಯೆ ಕಾಡತೊಡಗುತ್ತದೆ. ಮಳೆಯ ಪ್ರಮಾಣದಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಯ ಉಂಟಾಗುತ್ತಿದ್ದು ಭವಿಷ್ಯದ ಚಿಂತೆ ಕಾಡುವ ಈ ಕಾಲಘಟ್ಟದಲ್ಲಿ ಜಲಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ. ಹರಿದುಹೋಗುವ ನೀರನ್ನು ತಡೆದು ಭೂಮಿಯಲ್ಲಿ ಇಂಗಿಸುವ ಕೆಲಸವನ್ನು ಪ್ರತಿಯಬ್ಬರೂ ಮಾಡಬೇಕಿದೆ. ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆ.
ಮರಳು ತುಂಬಿದ ಚೀಲ ಹಾಗೂ ಫೈಬರ್ ಶೀಟ್ ಅಳವಡಿಸಿರುವುದು. |
ಅ ನಿಟ್ಟಿನಲ್ಲಿ ಕೃಷಿಕರು ಜಾಗೃತರಾಗುತ್ತಿರುವುದು ಮಹತ್ವದ ಬೆಳವಣಿಗೆ. ಬೇಸಗೆ ಪ್ರಾರಂಭವಾದಾಗ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುವ ಜಿಲ್ಲೆಯ ರೈತರು ಕಳೆದ ಕೆಲವು ವರ್ಷಗಳಿಂದ ಹೊಸ ಹೊಸ ಉಪಾಯಗಳ ಮೂಲಕ ಜಲಸಂರಕ್ಷಿಸಿ ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದಾರೆ. ಕಟ್ಟ ಕಟ್ಟುವ; ನೀರುಳಿಸುವ ಹಿಂದೆಲ್ಲ ಜಲಮೂಲಗಳಿಗೆ ಅಡ್ಡಲಾಗಿ ಕಟ್ಟಗಳನ್ನು ಕಟ್ಟಿ ನೀರ ಹರಿವನ್ನು ತಡೆದು ನಿಲ್ಲಿಸಿ ಕೃಷಿಗೆ ಬಳಸಲಾಗುತ್ತಿತ್ತು. ಕಾಲದೊಂದಿಗೆ ಮರೆಯಾಗಿ ಹೋದ ಇಂತಹ ಉತ್ತಮ ವಿಚಾರಗಳು ಮರುಜೀವ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟು ಸಂತೃಪ್ತಿಯಿಂದ ಫಸಲು ಪಡೆಯುತ್ತಿರುವ ಕುಂಬ್ಡಾಜೆ ಪಂಚಾಯತ್ನ ಡಾ.ವೇಣುಗೋಪಾಲ ಹಾಗೂ ಕೇಶವ ಶರ್ಮ ನೆರಪ್ಪಾಡಿ ಅವರ ಕಟ್ಟ ಕಟ್ಟಿ ನಿರುಳಿಸುವ ಯಶೋಗಾಥೆ ಇಲ್ಲಿದೆ.
ಅಕಾಲಿಕ ಮಳೆಯ ನೀರು ಕಟ್ಟದ ಮೇಲಿಂದ ಹರಿಯುತ್ತಿದ್ದರೂ ಕಟ್ಟಕ್ಕೇನೂ ಹಾನಿಯಾಗಲಿಲ್ಲ
|
ಕೃಷಿಕಯತ್ತ ಆಕಷರ್ಿತರಾದ ಯುವಕರು
ಪದವಿ ಪಡೆದು ಬೆಂಗಳೂರಲ್ಲಿ ಉದ್ಯೋಗಿಯಾಗಿದ್ದ ಕೇಶವ ಶರ್ಮ ಹಾಗೂ ಡಾಕ್ಟರ್ ವೃತ್ತಿಯಲ್ಲಿ ಸಂತೃತ್ತಿ ಕಂಡುಕೊಂಡಿದ್ದ ವೇಣುಗೋಪಾಲರು ಕೆಲಸವನ್ನು ತೊರೆದು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡವರು. ಕಾರಣಾಂತರಗಳಿಂದ ಇವರ ಅಪ್ಪಂದಿರ(ಜತೆಯಾಗಿ) ಕಾಲದಲ್ಲಿ ನಿಮರ್ಿಸುತ್ತಿದ್ದ ಕಟ್ಟದ ಕಾರ್ಯ ನಿಂತುಹೋಗಿ ಮತ್ತೆ ಕೃಷಿ ಭೂಮಿ ನೀರಿಲ್ಲದೆ ಸೊರಗುವಂತಾದಾಗ ಈರ್ವರೂ ಜತೆಯಾಗಿ ಕಟ್ಟಗಳ ನಿಮರ್ಾಣಕ್ಕೆ ತಯಾರಾದರು. ಇಬ್ಬರೂ ಸಮಾನ ವೆಚ್ಚ ವಹಿಸಿಕೊಂಡು ಪರಸ್ಪರ ಗಟ್ಟಿ ನಿಧರ್ಾರಕ್ಕೆ ಕಟ್ಟದ ರೂಪ ಕೊಟ್ಟರು. ಇದುವೇ ನೇರಪ್ಪಾಡಿ ಕಟ್ಟಕ್ಕೆ ಮರುಜೀವ ನೀಡಲು ಕಾರಣವಾಯಿತು.
ಕಳೆದ ವರ್ಷ ಸಿಮೆಂಟ್ ಗೋಣಿಚೀಲಗಳಲ್ಲಿ ಹೊಯಿಗೆ ತುಂಬಿಸಿ ತೋಡಿಗೆ ಅಡ್ಡಲಾಗಿ ಒತ್ತೊತ್ತಾಗಿ ಜೋಡಿಸಿ ನೀರು ಇಳಿಯುವ ಸಾಧ್ಯೆತೆಯನ್ನು ತಡೆಯಲು ಫೈಬರ್ ಶೀಟನ್ನು ಬಳಸಿದ್ದಾರೆ. ಸುಮಾರು 25ಮೀಟರ್ ಅಗಲ ಮತ್ತು ಎರಡು ಮೀಟರ್ ಅಗಲದ ಫೈಬರ್ ಶೀಟನ್ನು ಇದಕ್ಕಾಗಿ ಬಳಸಲಾಗಿದೆ. ಇದಕ್ಕೆ 1ಲಕ್ಷ 40 ಸಾವಿರ ರೂಪಾಯಿಗಳಷ್ಟು ಖಚರ್ಾಗಿತ್ತು. ಆದರೆ ಈ ವರ್ಷ ಕಳೆದ ವರ್ಷ ಬಳಸಿದ ಫೈಬರ್ ಶೀಟ್ಗಳನ್ನೇ ಬಳಸಿರುವುದರಿಂದ 65ಸಾವಿರದಿಂದ 70ಸಾವಿರ ಖಚರ್ಾಗಿದೆ. ಸಾಮಾನ್ಯವಾಗಿ ಫೆಬ್ರವರಿಯಲ್ಲಿ ನೀರು ಬತ್ತಿ ಹೋಗುತ್ತಿದ್ದು ಕಳೆದ ವರ್ಷ ಮೇ ಕೊನೆಯ ವರೆಗೂ ಯಾವುದೇ ನೀರಿನ ಸಮಸ್ಯೆ ಎದುರಾಗಿಲ್ಲ ಎನ್ನುವುದು ಗಮನೀಯ ಅಂಶ. ಈ ವರ್ಷ ಡಿಸೆಂಬರ್ ಎರಡನೇ ವಾರದಲ್ಲಿ ಕಟ್ಟ ನಿಮರ್ಾಣ ಕಾರ್ಯವು ಪೂತರ್ಿಯಾಗಿದ್ದು ಸುಮಾರು 9ಜನ ಕೆಲಸಗಾರರ ಸಹಾಯದೊಂದಿಗೆ 12ದಿನಗಳಲ್ಲಿ ಈ ನಿಮರ್ಾಣ ಕಾರ್ಯವನ್ನು ಪೂತರ್ಿಗೊಳಿಸಿದ್ದೇವೆ ಎನ್ನುತ್ತಾರೆ ಕೇಶವಶರ್ಮಅವರು.ಡಿಸೆಂಬರ್ 26ರಂದು ಅಕಾಲಿಕ ಮಳೆ ಸುರಿದಿದ್ದು ಹೊಳೆಯಲ್ಲಿ ನೀರುತುಂಬಿ ಹೆಚ್ಚು ಪ್ರಮಾಣದಲ್ಲಿ ತೋಡಿನಲ್ಲಿ ನೀರು ಬಂದರೂ ಕಟ್ಟದ ಮೇಲಿಂದ ನೀರು ಹರಿದು ಹೋಗಿದೆಯೇ ವಿನಃ ಕಟ್ಟಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗಲಿಲ್ಲ. ಫೈಬರ್ ಶೀಟ್ನ ಬಳಕೆ ಈ ನಿಟ್ಟಿನಲ್ಲಿ ಉತ್ತಮ ಆಯ್ಕೆಯಾಗಿ ಕಂಡುಬರುತ್ತದೆ ಎಂಬುದು ಇವರ ಅಭಿಪ್ರಾಯ. ಕಟ್ಟದಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ ಈ ಕಟ್ಟವನ್ನು ನಿಮರ್ಿಸುವುದರಿಂದ ತೋಟ ಮತ್ತು ಸುತ್ತುಮುತ್ತಲ ಪ್ರದೇಶ ತಂಪಾಗಿರುತ್ತದೆ. ಮಾತ್ರವಲ್ಲದೆ ಸುಮಾರು 2ಕಿಲೋ ಮೀಟರ್ ವರೆಗೂ ಬಾವಿ, ಕೊಳವೆಬಾವಿಗಳಲ್ಲಿ ನೀರು ಬತ್ತುವುದಿಲ್ಲ.
ಅಂತರ್ಜಲ ಮಟ್ಟವನ್ನು ಸಂರಕ್ಷಿಸುವಲ್ಲಿ ಕಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ವಾಸ್ತವ.ಮಳೆಯೊಂದಿಗೆ ಕಟ್ಟ ತೆರವು

ಕೇಶವ ಶರ್ಮ ನೇರೆಪ್ಪಾಡಿ.
|
ಮೇ ಕೊನೆಯಲ್ಲಿ ಅಥವಾ ಜೂನ್ ತಿಂಗಳಲ್ಲಿ ಮಳೆ ಪ್ರಾರಂಭವಾಗಿ ನೀರು ತುಂಬುವ ಮೊದಲೇ ಕಟ್ಟವನ್ನು ತರವು ಗೊಳಿಸಿ ತೋಡಲ್ಲಿ ಸುಗಮವಾಗಿ ನೀರು ಹರಿಯುವಂತೆ ಮಾಡಲಾಗುತ್ತದೆ. ಮರಳು ಚೀಲಗಳನ್ನು ಮತ್ತು ಫೈಬರ್ ಶೀಟನ್ನು ತೋಡಿನಿಂದ ಮೇಲೆ ತೆಗೆದು ಮುಂದಿನ ವರುಷ ಬಳಸುವುದಕ್ಕಾಗಿ ಎತ್ತಿಡಲಾಗುತ್ತದೆ. ಕಟ್ಟಕ್ಕೆ ಮಹತ್ವ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕಟ್ಟಕಟ್ಟಿ ಜಲ ಸಂರಕ್ಷಿಸಿ ನೆಮ್ಮದಿಯ ನಗು ಬೀರುವ ಈ ಯುವ ಕೃಷಿಕರ ಪ್ರಯತ್ನ ಶ್ಲಾಘನೀಯ. ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಭಾಗಗಳಲ್ಲಾಗಿ 100ಕ್ಕೂ ಮಿಕ್ಕು ಕಟ್ಟಗಳ ನಿಮರ್ಾಣವಾಗುತ್ತಿದ್ದು ಜಲಸಂರಕ್ಷಣೆಯಲ್ಲಿ ಜಿಲ್ಲೆಯ ಕೃಷಿಕರು ಮಹತ್ತರವಾದ ಪಾತ್ರ ವಹಿಸುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.
Pಕಟ್ಟದ ಬಗೆಗಿನ ಮಾಹಿತಿಗಾಗಿ ಕೇಶವ ಶರ್ಮ(09497728372) ಅಥವಾ ಡಾ,ವೇಣುಗೋಪಾಲ(09946413670) ಆವರನ್ನು ಸಂಪಕಿಸಬಹುದಾಗಿದೆ.
- Get link
- X
- Other Apps
Comments
Post a Comment