ಪಾತೇರಿ ಶ್ರೀ ಶಂಕರನಾರಾಯಣ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು ಭಕ್ತಾದಿಗಳ ಸಹಕಾರದೊಂದಿಗೆ ಭರದಿಂದ ಸಾಗುತ್ತಿವೆ. ಈ ಪವಿತ್ರ ಕಾರ್ಯದ ಮಹತ್ವದ ಘಟ್ಟವಾಗಿ, ಕೆತ್ತನೆ ಪೂರ್ಣಗೊಂಡ ಪವಿತ್ರ ಕೃಷ್ಣಶಿಲೆಯನ್ನುಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಎಡನೀರು ಮಠ ಅವರ ಆಶೀರ್ವಾದದೊಂದಿಗೆ ಧಾರ್ಮಿಕ ಗಣ್ಯರ ಅಮೃತಹಸ್ತದಿಂದ ಪ್ರಥಮವಾಗಿ ಸ್ಥಾಪಿಸುವ* ಮೂಲಕ ದಿನಾಂಕ 1-11-2026 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ* ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಶುಭಾರಂಭ ಮಾಡಲಾಗುವುದು.
ಅದೇ ಸಂದರ್ಭದಲ್ಲಿ, ಶ್ರೀ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ಬಲ ತುಂಬುವ ಸದುದ್ದೇಶದಿಂದ ಆಯೋಜಿಸಿರುವ **ಲಕ್ಕಿ ಕೂಪನ್* ಗಳನ್ನೂ ಬಿಡುಗಡೆಗೊಳಿಸಲಾಗುವುದು.
ಆ ಪ್ರಯುಕ್ತ
ಊರಪರವೂರ ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ,
ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ
Comments
Post a Comment