
ಕಾಸರಗೋಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಐಲಾ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಹಲವಾರು ಧಾರ್ಮಿಕ, ವೇದೀಕ, ವಿಧಿ ವಿಧಾನಗಳಿಂದ ಹತ್ತು ದಿನಗಳ ಕಾಲ ನೆರೆವೇರಿತು ಸಹಸ್ರಾರು ಭಕ್ತರು ಶ್ರೀ ದೇವಿಯ ದರುಶನ ಮಾಡಿ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ಅತ್ಯಂತ ಸೊಗಸಾಗಿ ಮೂಡಿ ಬಂದು ಜನರoಜಿಸಿತು. ಸಂಸ್ಥೆಯ ಸ್ಥಾಪಕರು, ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಲಾವಿದರ ಕಲರವದಲ್ಲಿ ಸರಿ ಸುಮಾರು 45 ಕ್ಕೂ ಅಧಿಕ ಸಂಸ್ಥೆಯ ಅಪ್ರತಿಮ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.
ಈ ಕಾರ್ಯಕ್ರಮದ ಪುಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಆಡಳಿತ ಮುಕ್ತೇಸರು ಕೊಡಿಬೈಲ್ ಶ್ರೀ ನಾರಾಯಣ ಹೆಗ್ಡೆ, ಶ್ರೀ ಸುಕುಮಾರ ಯು, ಶ್ರೀ ಶಿವರಾಮಪಕ್ಕಳ, ಶ್ರೀ ಸುಧೀಚ್ಚoದ್ರ ಶೆಟ್ಟಿ, ಶ್ರೀ ಮಾಧವ ಕೆ, ಶ್ರೀ ಪುರುಷೋತ್ತಮ, ಸಂಸ್ಥೆಯ ಗೌರವಾಧ್ಯಕ್ಷರು ಶ್ರೀ ಗಣೇಶ್ ಪ್ರಸಾದ್ ಆಳ್ವ, ಜೊತೆ ಕಾರ್ಯದರ್ಶಿ ಕುಮಾರಿ ವರ್ಷಾ ಪಿ, ಕೋಶಾಧಿಕಾರಿ ಶ್ರೀಮತಿ ಜಯಪ್ರಭಾ ವೈ, ಸದಸ್ಯರು, ಶ್ರೀ ಬಾಲಕೃಷ್ಣ ನೈಕ ಮುಂತಾದ ಗಣ್ಯ ಮಾನ್ಯರ ಸಮ್ಮುಖದಲ್ಲಿ ಸಂಸ್ಥೆಯ ಅಪ್ರತಿಮ ಕಲಾವಿದರಾದ ಕುಮಾರಿ ಅನ್ಮೀತಾ ಶೆಟ್ಟಿ ಮತ್ತು ಕುಮಾರಿ ಅರ್ಚನಾ ಹೇರೂರ್ ಇವರನ್ನು ಸಂಸ್ಥೆಯ ಪ್ರತಿಷ್ಠಿತ ಗೌರವವಾದ ಕಲಾ ಸೌರಭ 2026 ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿನೂತನವಾಗಿ ಕಲಾವಿದರ ಪೋಷಕ ಮಾತೆಯರ ಅಮೃತ ಹಸ್ತದಿಂದ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.




Comments
Post a Comment