ಕಾಸರಗೋಡು ಜಿಲ್ಲೆಯಲ್ಲಿ 3800 ಮಂದಿ ನಿಗಾದಲ್ಲಿ , 404 ಮಂದಿಯ ಫಲಿತಾಂಶ ಲಭಿಸಿಲ್ಲ, ಬುಧವಾರ 49 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು ಜಿಲ್ಲೆಯಲ್ಲಿ  3800 ಮಂದಿ ನಿಗಾದಲ್ಲಿ , 404 ಮಂದಿಯ ಫಲಿತಾಂಶ  ಲಭಿಸಿಲ್ಲ,  ಬುಧವಾರ 49 ಮಂದಿಗೆ ಕೋವಿಡ್ ಪಾಸಿಟಿವ್ 
ಕಾಸರಗೋಡು, ಜು. 29 : ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 49 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 30 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ 4 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 15 ಮಂದಿ ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
             ಸಂಪರ್ಕ ಮೂಲ ಪತ್ತೆಯಾಗದೇ ಇರುವವರು
                             ನೀಲೇಶ್ವರ ನಗರಸಭೆಯ 48, ಮಂಜೇಶ್ವರ ಪಂಚಾಯತ್ ನ 70, ಪೈವಳಿಕೆ ಪಂಚಾಯತ್ ನ 64 ವರ್ಷದ ಮಹಿಳೆಯರು, ಕುಂಬಳೆ ಪಂಚಾಯತ್ ನ 33 ವರ್ಷದ ಪುರುಷ ಇವರ ಸಂಪರ್ಕ ಮೂಲ ಪತ್ತೆಯಾಗಿಲ್ಲ.
                  ಪ್ರಾಥಮಿಕ ಸಂಪರ್ಕ 
                             ನೀಲೇಶ್ವರ ನಗರಸಭೆಯ 28 ವರ್ಷದ ಮಹಿಳೆ, 30,34 ವರ್ಷದ ಪುರುಷರು, 4,14 ವರ್ಷದ ಬಾಲಕರು, ಅಜಾನೂರು ಪಂಚಾಯತ್ ನ 24, ಪಳ್ಳಿಕ್ಕರೆ ಪಂಚಾಯತ್ ನ 38 ಪುರುಷರು, ಕಾರಡ್ಕ ಪಂಚಾಯತ್ ನ 8 ತಿಂಗಳ ಹೆಣ್ಣುಮಗು, ಬದಿಯಡ್ಕ ಪಂಚಾಯತ್ ನ 27 ವರ್ಷದ ಮಹಿಳೆ, ತ್ರಿಕರಿಪುರ ಪಂಚಾಯತ್ ನ 22,25,23,34,32 ವರ್ಷದ ಪುರುಷರು, ಕುಂಬಳೆ ಪಂಚಾಯತ್ ನ 30,30,23,57,28,23,34,62 ವರ್ಷದ ಮಹಿಳೆಯರು, 54,24,31,37 ವರ್ಷದ ಪುರುಷರು, ಕಿನಾನೂರು-ಕರಿಂದಳಂ ಪಂಚಾಯತ್ ನ 68 ವರ್ಷದ ಪುರುಷ, 55 ವರ್ಷದ ಮಹಿಳೆ, ಚೆಮ್ನಾಡ್ ಪಂಚಾಯತ್ ನ 28 ವರ್ಷದ ಪುರುಷ, ಚೆಂಗಳ ಪಂಚಾಯತ್ ನ 80 ವರ್ಷದ ಮಹಿಳೆ ಸೋಂಕು ಬಾಧಿತರು. 
ವಿದೇಶದಿಂದ ಬಂದವರು 
                              ಒಮಾನ್ ನಿಂದ ಬಂದಿದ್ದ ಕುಂಬಳೆ ಪಂಚಾಯತ್ ನ 31 ವರ್ಷದ ಪುರುಷ, ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಾಸರಗೋಡು ನಗರಸಭೆಯ 23 ವರ್ಷದ ಮಹಿಳೆ, ಯು.ಎ.ಇ.ಯಿಂದ ಬಂದಿದ್ದ 37,43 ವರ್ಷದ ಪುರುಷರು, ದುಬಾಯಿಯಿಂದ ಆಗಮಿಸಿದ್ದ 42,37,25,50 ವರ್ಷದ ಪುರುಷರು, ಷಾರ್ಜಾ ದಿಂದ ಬಂದಿದ್ದ 30 ವರ್ಷದ ಪುರುಷ, ಖತಾರ್ ನಿಂದ ಆಗಮಿಸಿದ್ದ ಕುತ್ತಿಕೋಲ್ ಪಂಚಾಯತ್ ನ 30, ಅಬುದಾಭಿಯಿಂದ ಬಂದಿದ್ದ ಮಧೂರು ಪಂಚಾಯತ್ ನ 40, ದುಬಾಯಿಯಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್ ನ 25, ಪುಲ್ಲೂರು-ಪೆರಿಯ ಪಂಚಾಯತ್ ನ 37, ಕಾಞಂಗಾಡ್ ನಗರಸಭೆಯ 55, ಬಹರೈನ್ ನಿಂದ ಬಂದಿದ್ದ 30 ವರ್ಷದ ಪುರುಷರು ರೋಗ ಬಾಧೆಗೊಳಗಾದವರು.
                                                     3800 ಮಂದಿ ನಿಗಾದಲ್ಲಿ  
                                             ಕಾಸರಗೋಡು ಜಿಲ್ಲೆಯಲ್ಲಿ 3800 ಮಂದಿ ಬುಧವಾರ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. 
                           ಮನೆಗಳಲ್ಲಿ 2805 ಮಂದಿ, ಸಾಂಸ್ಥಿಕವಾಗಿ 2805 ಮಂದಿ ನಿಗಾದಲ್ಲಿದ್ದಾರೆ. 68 ಮಂದಿ ಬುಧವಾರ ನೂತನವಾಗಿ ನಿಗಾದಲ್ಲಿ ದಾಖಲಾಗಿದ್ದಾರೆ. 520 ಮಂದಿ ತಮ್ಮನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 
 473 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 404 ಮಂದಿಯ ಫಲಿತಾಂಶ ಲಭಿಸಿಲ್ಲ.   

Comments