ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 107 ಮಂದಿಗೆ ಕೋವಿಡ್ ಪಾಸಿಟಿವ್ , 34 ಮಂದಿಗೆ ಕೋವಿಡ್ ನೆಗೆಟಿವ್

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 107 ಮಂದಿಗೆ ಕೋವಿಡ್ ಪಾಸಿಟಿವ್ ,  34 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 107 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 
                           104 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ 9 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ವಿದೇಶದಿಂದ ಇಬ್ಬರು, ಇತರ ರಾಜ್ಯದಿಂದ ಬಂದ ಒಬ್ಬರು ಸೋಂಕು ಬಾಧಿತರು. ಭಾನುವಾರ 34 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
                             ಉದುಮಾ ಗ್ರಾಮಪಂಚಾಯತ್ ನ 2, ಚೆಮ್ನಾಡ್ ಗ್ರಾಮಪಂಚಾಯತ್ ನ 4, ಮಂಜೇಶ್ವರ ಪಂಚಾಯತ್ ನ 15, ಕುಂಬಳೆ ಪಂಚಾಯತ್ ನ 8, ವೆಸ್ಟ್ ಏಳೇರಿ ಪಂಚಾಯತ್ ನ 1, ತ್ರಿಕರಿಪುರ ಪಂಚಾಯತ್ ನ 3(ಇವರಲ್ಲಿ 2 ಸಂಪರ್ಕದಿಂದ ಸೋಂಕು, 1 ವಿದೇಶದಿಂದ ಆಗಮನ), ಮೊಗ್ರಾಲ್ ಪುತ್ತೂರು, ಮಂಗಲ್ಪಾಡಿ, ವಲಿಯ ಪರಂಬ, ವರ್ಕಾಡಿ, ಪುಲ್ಲೂರು-ಪೆರಿಯ ಪಂಚಾಯತ್ ಗಳ, ನೀಲೇಶ್ವರ ನಗರಸಭೆಯ  ತಲಾ 1, ಬದಿಯಡ್ಕ ಪಂಚಾಯತ್ ನ 6(5 ಮಂದಿಗೆ ಸಂಪರ್ಕ, 1 ವಿದೇಶ), ಬೆಳ್ಳೂರು ಪಂಚಾಯತ್ ನ 2, ಕಾಸರಗೋಡು ನಗರಸಭೆಯ 7, ಪಳ್ಳಿಕ್ಕರೆ ಪಂಚಾಯತ್ ನ 8, ಚೆಂಗಳ ಪಂಚಾಯತ್ ನ 43, ಕಾರಡ್ಕ ಪಂಚಾಯತ್ ನ 2(1 ಇತರ ರಾಜ್ಯ) ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 
P-2       ಕಾಸರಗೋಡು ಜಿಲ್ಲೆಯಲ್ಲಿ 34 ಮಂದಿಗೆ ಕೋವಿಡ್ ನೆಗೆಟಿವ್ 
                                                  ಕಾಸರಗೋಡು ಜಿಲ್ಲೆಯಲ್ಲಿ 34 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
                            ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 21, ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 7, ಸರ್ಜಿಕಲ್ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 4, ಪರಿಯಾರಂ ಸಿ.ಎಫ್.ಎಲ್.ಟಿ.ಸಿ. ಮತ್ತು ಪರಿಯಾರಂ ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾಗಿದ್ದ ತಲಾ ಒಬ್ಬರು ಭಾನುವಾರ ಗುಣಮುಖರಾಗಿದ್ದರು.                              ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 680 ಮಂದಿಗೆ ಕೋವಿಡ್ ಪಾಸಿಟಿವ್ 
                                                      ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 680 ಮಂದಿ ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
 
ಭಾನುವಾರ 4386 ಮಂದಿ ಜಿಲ್ಲೆಯಲ್ಲಿ ನಿಗಾದಲ್ಲಿದ್ದಾರೆ. ಇವರಲ್ಲಿ 3836 ಮಂದಿ ಮನೆಗಳಲ್ಲಿ, 371 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತವಾಗಿ 371 ಮಂದಿ ನಿಗಾ ಪ್ರವೇಶಿಸಿದ್ದಾರೆ. 465 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

Comments