- Get link
- X
- Other Apps
- Get link
- X
- Other Apps
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಮೀಯಪದವಿನಲ್ಲಿ ಸಂಪನ್ನ
ನಾಲ್ಕು ದಿನಗಳ ಕಲಾ ಸಂಭ್ರಮಕ್ಕೆ ಸಂಭ್ರಮದ ತೆರೆ
ಮೀಯಪದವು: ಏಷ್ಯಾದ ಅತಿದೊಡ್ಡ ಶಾಲಾ ಕಲೋತ್ಸವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ಶಾಲಾ ಕಲೋತ್ಸವದ ಅಂಗವಾಗಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಮೀಯಪದವಿನ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ವಿದ್ಯಾವರ್ಧಕ ಎಯುಪಿ ಶಾಲೆಯ ಆತಿಥ್ಯದಲ್ಲಿ ನಾಲ್ಕು ದಿನಗಳ ಕಲಾ ಸಂಭ್ರಮದ ಬಳಿಕ ಸಂಪನ್ನಗೊಂಡಿತು.
ನವೆಂಬರ್ 13ರಂದು ನಾರಾಯಣೀಯಂ ರಂಗಮಂದಿರದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕುಮಾರಿ ಸೋಯಾ ಕೆ.ಕೆ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಎ. ತಾಜುದ್ದೀನ್, ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಕೆ. ಮುಖ್ಯ ಅತಿಥಿಯಾಗಿದ್ದರು. ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜ,ಪೈವಳಿಕೆ ಗ್ರಾಮ ಪಂಚಾಯತ್ ಸ್ಟೇಂಡಿಂಗ್ ಕಮಿಟಿ ಚೈರ್ಮೇನ್ ಶ್ರೀನಿವಾಸ ನಾಯಕ್ ,ವಿದ್ಯಾವರ್ಧಕ ಎಯುಪಿ ಶಾಲೆಯ ಆಡಳಿತ ಸಲಹೆಗಾರ ಆರ್.ಎಂ. ಶ್ರೀಧರ ರಾವ್ ,ಹೈಯರ್ ಸೆಕೆಂಡರಿ ಶಾಲಾ ಸಂಚಾಲಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು.
ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ ಬಹುಮಾನ ವಿತರಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ ರೈ, ಮೀಂಜ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಕೆ., ಸದಸ್ಯರಾದ ಮಿಸಿರಿಯ ಎಂ. ಕುಂಞಿ, ಬೀಫಾತಿಮಾ, ಶಾಂತ ಕಾಮಾರಿ ಬಿ., ಶಾಲಿನಿ ಬಿ. ಶೆಟ್ಟಿ, ಸಂಧ್ಯಾ ಬಿ., ಸುನಿಲ್ ಕುಮಾರ್ ಎಂ., ಲತೀಶ ಕೆ., ರಘುನಾಥ ಶೆಟ್ಟಿ, ಜಯರಾಮ ಬಲ್ಲಂಗುಡೆಲು, ಸಿಡಿಎಸ್ ಅಧ್ಯಕ್ಷೆ ಪದ್ಮಜಾ, ಶ್ರೀಮತಿ ಮೃದುಳಾ ಕೆ.ಎಂ., ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಅಧ್ಯಕ್ಷ ಹಮೀದ್ ಮೈತಾಲ್ ಹಾಗೂ ಎಂಪಿಟಿಎ ಅಧ್ಯಕ್ಷೆ ಸಂಧ್ಯಾಶ್ರೀ ಶುಭ ಹಾರೈಸಿದರು.
ಸಂಘಟನಾ ಸಮಿತಿ ಪ್ರಧಾನ ಸಂಚಾಲಕ ರಮೇಶ್ ಕೆ.ಎನ್. ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಕಿರಣ್ ಕೆ.ಎಸ್. ವಂದಿಸಿದರು.
ವಿದ್ಯಾರ್ಥಿಗಳ ಕಲಾ ಪ್ರತಿಭೆ, ಶಿಕ್ಷಕರ ಪರಿಶ್ರಮ, ಪೋಷಕರ ಸಹಕಾರ ಹಾಗೂ ಸಂಘಟಕರ ಸಮರ್ಪಣಾ ಮನೋಭಾವದೊಂದಿಗೆ ನಡೆದ ಕಲೋತ್ಸವವು ಮಂಜೇಶ್ವರ ಉಪಜಿಲ್ಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಸಂಭ್ರಮವನ್ನು ಮೂಡಿಸಿತು. ಕಲೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.
- Get link
- X
- Other Apps
Comments
Post a Comment