ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಲೋಗೋ ಅನಾವರಣ

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಲೋಗೋ ಅನಾವರಣ
 ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ ಅವರು ಲೋಗೋವನ್ನು ಅನಾವರಣಗೊಳಿಸಿದರು.
ಶಾಲಾ ಪಿಟಿಎ ಅಧ್ಯಕ್ಷ ಹಮೀದ್ ಕೇಡಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷೆ ಕೆ. ಎ. ಅಶ್ವಿನಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಮಪ್ರಸಾದ್ ಮಾನ್ಯ, ಶ್ಯಾಮಪ್ರಸಾದ್ ಸರಳಿ, ಅವಿನಾಶ್ ರೈ, ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ. ಅಶೋಕ್, ಶಾಲಾ ಪ್ರಾಂಶುಪಾಲ ಎಂ. ಶ್ರೀಕೃಷ್ಣ, ಮುಖ್ಯಶಿಕ್ಷಕಿ ಟಿ. ಎಚ್. ಶಾಹಿದಾ ಬೀವಿ, ಆನಂದ ಮೌವ್ವಾರ್, ಶಾಫಿ ಚುರಿಪಳ್ಳಂ, ಶರೀಫ್ ಪಾಲಕ್ಕಾರ್, ಕೆ. ಪ್ರಭಾಕರನ್ ನಾಯರ್, ಪಿ. ಸಿಂಧು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಸಿ. ಎಚ್. ದೀಕ್ಷಿತ್ ಅವರು ಕಲೋತ್ಸವದ ಲೋಗೋವನ್ನು ವಿನ್ಯಾಸಗೊಳಿಸಿದ್ದಾರೆ.
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಅಕ್ಟೋಬರ್ 26, 27 ಹಾಗೂ ನವೆಂಬರ್ 2, 3 ಮತ್ತು 4ರಂದು ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.

Comments