ಸುಬ್ರಹ್ಮಣ್ಯನ್‌ ಶಂಕರನ್ ನಂಬೂದಿರಿ ಶಬರಿಮಲೆ ಕ್ಷೇತ್ರದ ಮುಖ್ಯ ಅರ್ಚಕರಾಗಿ ಆಯ್ಕೆ

ಸುಬ್ರಹ್ಮಣ್ಯನ್‌ ಶಂಕರನ್ ನಂಬೂದಿರಿ ಶಬರಿಮಲೆ ಕ್ಷೇತ್ರದ ಮುಖ್ಯ ಅರ್ಚಕರಾಗಿ ಆಯ್ಕೆ
ಶಬರಿಮಲೆ: ಶಬರಿಮಲೆ ದೇಗುಲದ ನೂತನ ಮುಖ್ಯ 'ಅರ್ಚಕರಾಗಿ ತಿರುವನಂತಪುರ ಪುಳಿಮೂಡ್ ಪಿ.ಆರ್. ಎಸ್.ಕೃಷ್ಣಾ ಅಂಬುಜಾ ವಿಳಾಸಂ ರಸ್ತೆಯ ಅರಿಕ್ಕರ ಇಲ್ಲತ್ ಅರೀಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ (50) ಆಯ್ಕೆಗೊಂಡಿದ್ದಾರೆ.ಕಲ್ಲಿಕೋಟೆ ವಡಗರ ಮಣಿಯೂರ್ - ಪಾಲಯಾಡ್‌ನಡ ಅಯಾಟ್ಟತ್ತಿಲ್ಲಂ ಎ. ದಾಮೋದರನ್ ನಂಬೂದಿರಿ (52)ರನ್ನು ಮಾಳಿಗಪುರಂ ಕ್ಷೇತ್ರದ ನೂತನ ಮುಖ್ಯ ಅರ್ಚಕರನ್ನಾಗಿ 
ಇದೇ ಸಂದರ್ಭದಲ್ಲಿ ಆರಿಸಲಾಗಿದೆ.
ಶಬರಿಮಲೆ ಕ್ಷೇತ್ರದ ಸನ್ನಿಧಾನದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಅದೃಷ್ಟ ಚೀಟಿ ಎತ್ತುವ ಮೂಲಕ ಈ ಇಬ್ಬರನ್ನು ಆರಿಸಲಾಯಿತು.
ಮುಂದಿನ ಒಂದು ವರ್ಷದ ಅವಧಿ ತನಕ ಇವರನ್ನು ಈ ಸ್ಥಾನಗಳಿಗೆ ನೇಮಿಸಲಾಗಿದೆ. ನವೆಂಬರ್ 16ರಂದು ಅಭಿಷೇಕದ ಮೂಲಕ ಇವರಿಬ್ಬರು ಮುಖ್ಯ ಅರ್ಚಕರಾಗಿ ಸ್ಥಾನ ವಹಿಸಿಕೊಳ್ಳುವರು.

Comments