- Get link
- X
- Other Apps
- Get link
- X
- Other Apps
ಕಾಸರಗೋಡು ಯಕ್ಷೋತ್ಸವ-2026
ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟ್ರಮಣ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ 9 ನೇ ವಾರ್ಷಿಕೋತ್ಸವ(ಕಾಸರಗೋಡು ಯಕ್ಷೋತ್ಸವ)ವನ್ನು ಕ್ಷೇತ್ರ ತಂತ್ರಿವರ್ಯರೂ, ಯಕ್ಷಗಾನ ಕಲಾವಿದರೂ, ಕಲಾ ಪೋಷಕರೂ ಅದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ದೀಪ ಬೆಳಗಿಸಿ ಉದ್ಘಾಟಿಸಿ 40 ದಶಕಗಳಿಂದಲೂ ಮೆಲ್ಪಟ್ಟು ಈಗಲೂ ವಿಜೃಂಭಿಸುತ್ತಿರುವ ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ವತಿಯಿಂದ ಕಾರ್ಯಚರಿಸುತ್ತಿರುವ ಕಲಾ ಕೇಂದ್ರ 9 ವರುಷಗಳಲ್ಲಿ ನೂರಾರು ಕಲಾವಿದರನ್ನು ರಂಗಕ್ಕೆ ಪರಿಚಯಿಸಿದೆ ಇದು ಒಂದು ಮಹತ್ತರ ವಿಷಯ, ಇನ್ನು ಈ ಸಂಸ್ಥೆ ಬೆಳಗಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆವಹಿಸಿದರು.
ವೇದಿಕೆಯಲ್ಲಿ ಕುತ್ಯಾಳ ಯಕ್ಷಗಾನ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಡಾl ಹರಿಕಿರಣ ಬಂಗೇರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಪ್ರಥಮವಾಗಿ ಶ್ರೀ ವೆಮಕಟ್ರಮಣ ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆ, ಕಿಶೋರ್ ಕುಮಾರ್ ಎಸ್.ವಿ.ಟಿ. ಸ್ವಾಗತಿಸಿ, ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ರೂಪಕಲಾ ಹೊಳ್ಳ ಧನ್ಯವಾದಗೈದು, ಶ್ರೀ ವೆಮಕಟ್ರಮಣ ಸ್ವಾಮಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮ ಸಂಯೊಜಿಸಿದರು. ನಂತರ ನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು, ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
- Get link
- X
- Other Apps
Comments
Post a Comment