- Get link
- X
- Other Apps
- Get link
- X
- Other Apps
ಭಜನಾ ಮಂದಿರದ ಲಕ್ಕಿಡಿಪ್ ಕೂಪನ್ ಎಡನೀರು ಶ್ರೀಗಳಿಂದ ಉದ್ಘಾಟನೆ.
============
ಕಾಸರಗೋಡು ಜಿಲ್ಲೆಯ ಗ್ರಾಮದ ಎಡನೀರು ಶ್ರೀ ಮಠದ ಅಧೀನದಲ್ಲಿರುವ ಎದುರ್ತೋಡು ಕನ್ನಡಿ ಪಾರೆಯ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಕಟ್ಟಡದ ಸಹಾಯಾರ್ಥ ಆಯೋಜಿಸಿದ ಲಕ್ಕಿಡಿಪ್ ಕೂಪನ್ ನ ಉದ್ಘಾಟನೆಯನ್ನು 7.11.2021 ರಂದು ಎಡನೀರು ಶ್ರೀ ಮಠದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷರಾದ ಶ್ರೀಯುತ ಗೋವಿಂದಭಟ್ಟ ಎದುರ್ತೋಡು ಕಾರ್ಯದರ್ಶಿ ವಿನಯ ಪಾಲ್ ಖಜಾಂಜಿ ಗಣೇಶ್ ಪ್ರಬಂಧಕರಾದ ರಾಜೇಂದ್ರ ಕಲ್ಲೂರಾಯ ಪ್ರೊ.ಶ್ರೀನಾಥ್ ,ವೇಣುಗೋಪಾಲ ಎಡನೀರು, ಪುರುಷೋತ್ತಮ, ದೀಪಕ್, ಸಂತೋಷ್ ನಾಯರ್, ಮುಂತಾದವರು ಉಪಸ್ಥಿತರಿದ್ದರು ಭಗವದ್ಭಕ್ತರ ಆರ್ಥಿಕ ಸಹಾಯದಿಂದ ಈ ಮೂಲಕ ಶೀಘ್ರದಲ್ಲಿ ಮಂದಿರ ನಿರ್ಮಾಣ ವಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಎಂದು ಶ್ರೀಗಳು ಆಶೀರ್ವಚನ ನೀಡಿದರು .
- Get link
- X
- Other Apps
Comments
Post a Comment